
ಬೆಂಗಳೂರು: ಜೂಜೂನ್ 4 ರಂದು ಉತ್ತರಾಖಂಡದ ಸಹಸ್ತ್ರತಾಲ್ ನಲ್ಲಿ ಹಿಮಪಾತ ಸಂಭವಿಸಿದಾಗ ಸಾವನ್ನಪ್ಪಿದ ಒಂಬತ್ತು ಮಂದಿಯ ಪೈಕಿ 71 ವರ್ಷದ ಆಶಾ ಸುಧಾಕರ್ ಕೂಡ ಒಬ್ಬರು. ಅನುಭವಿ ಪರ್ವತಾರೋಹಿಯಾಗಿದ್ದ ಇವರು ತಾವಿಷ್ಟ ಪಡುತ್ತಿದ್ದ ಟ್ರಕ್ಕಿಂಗ್ ನಿಂದಲೇ ಇದೀಗ ಪ್ರಾಣ ಕಳೆದುಕೊಂಡಿದ್ದಾರೆ.
ನಿವೃತ್ತ ಹಿರಿಯ ಬ್ಯಾಂಕ್ ಮ್ಯಾನೇಜರ್ ಆಶಾ ಅವರು, ಸುಮಾರು 59 ವರ್ಷಗಳ ಚಾರಣ ಅನುಭವ ಹೊಂದಿರುವ ಕರ್ನಾಟಕದ ಅತ್ಯಂತ ಅನುಭವಿ ಪರ್ವತಾರೋಹಿಗಳಲ್ಲಿ ಒಬ್ಬರು. 12 ವರ್ಷದ ಬಾಲಕಿಯಿರುವಾಗಿನಿಂದಲೂ ಆಶಾ ಚಾರಣಕ್ಕೆ ಹೋಗುತ್ತಿದ್ದರು. ಚಾರಣದಲ್ಲಿ ಅವರ ಜೀವನದ ಹೆಚ್ಚಿನ ಸಮಯವನ್ನ ಮೀಸಲಿಟ್ಟದ್ದರು. ಆದರೆ, ಅವರು ಇಷ್ಟಪಡುತ್ತಿದ್ದ ಟ್ರೆಕ್ಕಿಂಗ ನಿಂದಲೇ ಪ್ರಾಣ ಕಳೆದುಕೊಳ್ಳುತ್ತಾರೆಂಬು ಎಂದೂ ಊಹಿಸಿರಲಿಲ್ಲ ಎಂದು ಆಶಾ ಅವರ ಸ್ನೇಹಿತೆ ಗಾಯತ್ರಿ ಅವರು ಹೇಳಿದ್ದಾರೆ.
ಆಶಾ ಅವರು ತಮಿಳುನಾಡಿನ ಕನ್ನಿಯಾಕುಮಾರಿ ಬಳಿಯಿರುವ ತಕ್ಕಲೈ ಮೂಲದವರಾಗಿದ್ದು, ಇವರ ಪತಿ ಸುಧಾಕರ್ (71) ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಆಶಾ ಅವರು 12 ನೇ ವಯಸ್ಸಿನಿಂದಲೂ ಅತ್ಯಾಸಕ್ತಿಯ ಚಾರಣಿಗರಾಗಿದ್ದರು. ಪ್ರತಿ ಆರು ತಿಂಗಳಿಗೊಮ್ಮೆ ಟ್ರೆಕ್ಕಿಂಗ್ ಹೋಗುತ್ತಿದ್ದರು. ಟ್ರೆಕ್ಕಿಂಗ್ ನಲ್ಲಿ ಸಾಕಷ್ಟು ಜ್ಞಾನವುಳ್ಳವರಾಗಿದ್ದರು. ಸಾಹಸದಲ್ಲಿ ಪಾಲ್ಗೊಳ್ಳುವಂತೆ ಇತರರಿಗು ಉತ್ಸಾಹದಿಂದ ಪ್ರೇರೇಪಿಸುತ್ತಿದ್ದರು. ಸವಾಲೊಡ್ಡುವ ಟ್ರೆಕ್ಕಿಂಗ್ ಗಳನ್ನೂ ಆಯ್ಕೆ ಮಾಡುತ್ತಿದ್ದರು. ಯಾವುದೇ ಪರಿಸ್ಥಿತಿಯನ್ನು ನಿಭಾಯಿಸುವ ಸಾಮರ್ಥ್ಯದಲ್ಲಿ ವಿಶ್ವಾಸ ಹೊಂದಿದ್ದಳು. ಪರಿಸ್ಥಿತಿ ಹೇಗೆ ನಿರ್ವಹಿಸಬೇಕೆಂದು ತಿಳಿದಿದ್ದಳು. ಬ್ಯಾಕಪ್ ಯೋಜನೆಗಳನ್ನು ಸಿದ್ಧಪಡಿಸುತ್ತಿದ್ದಳು. ಆದಾಗ್ಯೂ, ಪ್ರಕೃತಿಯ ಅನಿರೀಕ್ಷಿತತೆಗೆ ಯಾರೂ ಸಿದ್ಧರಾಗಲು ಸಾಧ್ಯವಿಲ್ಲ ಎಂದು ಆಶಾ ಅವರ ಸಹೋದ್ಯೋಗಿಯೊಬ್ಬರು ಹೇಳಿದ್ದಾರೆ.
ಕೆಲವೇ ಕ್ಷಣಗಳಲ್ಲಿ ಹವಾಮಾನವು ತೀವ್ರರೀತಿಯಲ್ಲ ಬದಲಾಗಲು ಶುರುವಾಯಿತು. ಗೋಚರ ಶೂನ್ಯಗೊಂಡಿತು. ಭಾರೀ ಹಿಮಪಾತ ಮತ್ತು ಮಳೆಯಿಂದಾಗಿ ಚಾರಣಿಗರು ಸಂಕಷ್ಟಕ್ಕೆ ಸಿಲುಕಿದರು ಎಂದು ತಿಳಿಸಿದ್ದಾರೆ.
ಶುಕ್ರವಾರ ಬೆಳಗ್ಗೆ ಆಶಾ ಅವರ ಪಾರ್ಥಿವ ಶರೀರವನ್ನು ದೆಹಲಿಯಿಂದ ಬೆಂಗಳೂರಿಗೆ ತರಲಾಗಿದ್ದು, ಜಕ್ಕೂರಿನಲ್ಲಿರುವ ಅವರ ನಿವಾಸಕ್ಕೆ ಸ್ಥಳಾಂತರಿಸಲಾಯಿತು. ಆಶಾ ಅವರು ಅಮೆರಿಕಾದಲ್ಲಿ ನೆಲೆಯೂರಿರುವ ತಮ್ಮ ಪತಿ ಹಾಗೂ ಪುತ್ರನನ್ನು ಅಗಲಿದ್ದಾರೆ
Advertisement