ಬೆಂಗಳೂರು: ಮೆಟ್ರೋ ಟ್ರ್ಯಾಕ್ ಮೇಲೆ ಹಾರಿ ಯುವಕ ಆತ್ಮಹತ್ಯೆಗೆ ಯತ್ನ

ಖಿನ್ನತೆಯಿಂದ ಬಳಲುತ್ತಿದ್ದ 34 ವರ್ಷದ ಯುವಕನೊಬ್ಬ ಹೊಸಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ರೈಲು ಬರುತ್ತಿದ್ದ ವೇಳೆ ಟ್ರ್ಯಾಕ್ ಮೇಲೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸೋಮವಾರ ರಾತ್ರಿ ನಡೆದಿದೆ.
ಮೆಟ್ರೋ ರೈಲು ಸಾಂದರ್ಭಿಕ ಚಿತ್ರ
ಮೆಟ್ರೋ ರೈಲು ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಖಿನ್ನತೆಯಿಂದ ಬಳಲುತ್ತಿದ್ದ 34 ವರ್ಷದ ಯುವಕನೊಬ್ಬ ಹೊಸಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ರೈಲು ಬರುತ್ತಿದ್ದ ವೇಳೆ ಟ್ರ್ಯಾಕ್ ಮೇಲೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸೋಮವಾರ ರಾತ್ರಿ ನಡೆದಿದೆ.

ಪ್ಲಾಟ್‌ಫಾರ್ಮ್‌ನಲ್ಲಿದ್ದ ತುರ್ತು ಟ್ರಿಪ್ ಸಿಸ್ಟಮ್ ಬಟನ್ ಅನ್ನು ತ್ವರಿತವಾಗಿ ಬಳಸಿದ್ದರಿಂದ ಅದೃಷ್ಟವಶಾತ್ ಯುವಕ ಪ್ರಾಣಾಪಾಯಿಂದ ಪಾರಾಗಿದ್ದಾನೆ. ಆದರೆ ಆತನ ತಲೆಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಘಟನೆಯಿಂದ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣ ಮತ್ತು ಮೈಸೂರು ರಸ್ತೆ ನಿಲ್ದಾಣಗಳ ನಡುವೆ 33 ನಿಮಿಷಗಳ ಕಾಲ ಮೆಟ್ರೋ ರೈಲು ಸಂಚಾರ ಸ್ಥಗಿತಗೊಂಡಿತ್ತು.

ಇದು 2024 ರಲ್ಲಿ ಮೆಟ್ರೋ ಟ್ರ್ಯಾಕ್‌ಗಳಲ್ಲಿ ನಡೆದ ಮೂರನೇ ಆತ್ಮಹತ್ಯೆ ಯತ್ನ ಪ್ರಕರಣವಾಗಿದೆ ಮತ್ತು ಒಬ್ಬ ವ್ಯಕ್ತಿ ಪ್ರಾಣವನ್ನು ಕಳೆದುಕೊಂಡಿದ್ದಾನೆ.

ಮೆಟ್ರೋ ರೈಲು ಸಾಂದರ್ಭಿಕ ಚಿತ್ರ
6 ತಿಂಗಳಲ್ಲಿ ನಮ್ಮ ಮೆಟ್ರೋ ಪ್ರಯಾಣಿಕರಿಂದ 32 ಲಕ್ಷ ರೂ ದಂಡ ವಸೂಲಿ: BMRCL

ರಾತ್ರಿ 8.56 ಕ್ಕೆ ಚಲ್ಲಘಟ್ಟ ಕಡೆಗೆ ತೆರಳುತ್ತಿದ್ದ ರೈಲು ಹೊಸಹಳ್ಳಿ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಪ್ಲಾಟ್‌ಫಾರ್ಮ್ 2 ರ ಒಬ್ಬ ಯುವಕ ಇದ್ದಕ್ಕಿದ್ದಂತೆ ಹಳಿ ಮೇಲೆ ಹಾರಿ ರೈಲಿನ ಕಡೆಗೆ ಧಾವಿಸಿದ್ದಾರೆ. ಇದು ರೈಲು ಹತ್ತಲು ಕಾಯುತ್ತಿದ್ದ ಇತರ ಪ್ರಯಾಣಿಕರನ್ನು ಬೆಚ್ಚಿಬೀಳಿಸಿತು ಎಂದು ಬಿಎಂಆರ್ ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಯಶವಂತ್ ಚವಾಣ್ ಅವರು TNIE ಗೆ ತಿಳಿಸಿದ್ದಾರೆ.

“ಆ ವ್ಯಕ್ತಿ ರೈಲಿನ ಕಡೆಗೆ ಓಡುತ್ತಿರುವುದನ್ನು ನೋಡಿದ ಯಾರೋ ತುರ್ತು ಟ್ರಿಪ್ ಸಿಸ್ಟಮ್ ಬಟನ್ ಒತ್ತಿದರು. ಇದು ಪ್ಲಾಟ್‌ಫಾರ್ಮ್‌ನಲ್ಲಿ ರೈಲನ್ನು ತಕ್ಷಣ ನಿಲುಗಡೆಗೆ ತರುತ್ತದೆ. ಆ ವ್ಯಕ್ತಿ ಹಳಿಗಳ ನಡುವೆ ಬಿದ್ದಿದ್ದರಿಂದ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಅವರು ಹೇಳಿದ್ದಾರೆ.

ತುರ್ತು ಟ್ರಿಪ್ ಸಿಸ್ಟಮ್ ಬಟನ್ ಅನ್ನು ಸಾರ್ವಜನಿಕರು ಒತ್ತಿದರೋ ಅಥವಾ ಭದ್ರತಾ ಸಿಬ್ಬಂದಿ ಅಥವಾ ಮೆಟ್ರೋ ಸಿಬ್ಬಂದಿ ಒತ್ತಿದರೋ ಎಂಬುದು ನಮಗೆ ಇನ್ನೂ ತಿಳಿದು ಬಂದಿಲ್ಲ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ ನಿಖರವಾಗಿ ಏನಾಯಿತು ಎಂದು ತಿಳಿಯಲಿದೆ ಎಂದಿದ್ದಾರೆ.

ಯುವಕ ಖಿನ್ನತೆಯಿಂದ ಬಳಲುತ್ತಿದ್ದು, ಮೆಟ್ರೋ ಟ್ರ್ಯಾಕ್ ಮೇಲೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಲೆಗೆ ಸಣ್ಣಪುಟ್ಟ ಗಾಯವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com