ಮಡಿಕೇರಿ: ಆನೆ ದಾಳಿಗೆ ವ್ಯಕ್ತಿ ಬಲಿ

ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾಮದ ನಿಶಾನಿ ಬೆಟ್ಟದಲ್ಲಿ ಆನೆ ದಾಳಿಗೆ ವ್ಯಕ್ತಿಯೊಬ್ಬರು ಬಲಿಯಾಗಿರುವ ಘಟನೆ ಭಾನುವಾರ ವರದಿಯಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಮಡಿಕೇರಿ: ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾಮದ ನಿಶಾನಿ ಬೆಟ್ಟದಲ್ಲಿ ಆನೆ ದಾಳಿಗೆ ವ್ಯಕ್ತಿಯೊಬ್ಬರು ಬಲಿಯಾಗಿರುವ ಘಟನೆ ಭಾನುವಾರ ವರದಿಯಾಗಿದೆ.

ಅಪ್ಪಚ್ಚು (60) ಆನೆ ದಾಳಿಗೆ ಬಲಿಯಾಗಿರುವ ವ್ಯಕ್ತಿಯಾಗಿದ್ದಾರೆ. ಮೃತದೇಹವನ್ನು ಗಮನಿಸಿದ ಚಾರಣಿಗರು ಭಾನುವಾರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸಂಗ್ರಹ ಚಿತ್ರ
ಆನೆ ದಾಳಿ: 3 ವರ್ಷದಲ್ಲಿ ಕೊಡಗು ಒಂದರಲ್ಲೇ 18 ಮಂದಿ ಬಲಿ

ಅಪ್ಪಚ್ಚು ಅವಿವಾಹಿತರಾಗಿದ್ದು, ಒಂಟಿಯಾಗಿ ಜೀವನ ನಡೆಸುತ್ತಿದ್ದರು. ಅವರಿದ್ದ ಪ್ರದೇಶದ ಸುತ್ತಮುತ್ತಲೂ ಯಾವುದೇ ಮನೆಗಳಿರಲಿಲ್ಲ.

ಶವ ಪತ್ತೆಯಾದ ಸಮೀಪದ ಪ್ರದೇಶದಲ್ಲಿ ದಾಳಿ ನಡೆಸಿರುವ ಆನೆ ಮರಗಳನ್ನು ಧರೆಗುರುಳಿಸಿರುವುದು ಕಂಡು ಬಂದಿದೆ. ಸ್ಥಳದಲ್ಲಿ ಆನೆ ಹಾಗೂ ಮರಿಗಳ ಹೆಜ್ಜೆಗುರುತುಗಳೂ ಪತ್ತೆಯಾಗಿವೆ. ಈ ಗುರುತುಗಳಿಂದಾಗಿ ವ್ಯಕ್ತಿ ಸಾವು ಆನೆ ದಾಳಿಯಿಂದಲೇ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಈ ಕುರಿತು ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com