ಹಾವೇರಿ ಗ್ಯಾಂಗ್ ರೇಪ್ ಪ್ರಕರಣ: ಕೊನೆಗೂ 19 ಆರೋಪಿಗಳ ವಿರುದ್ಧ ಚಾರ್ಜ್​ಶೀಟ್ ಸಲ್ಲಿಸಿದ ಪೊಲೀಸರು

ಹಾವೇರಿ ಸಾಮೂಹಿಕ ಅತ್ಯಾಚಾರ ಪ್ರಕರಣದಕ್ಕೆ ಸಂಬಂಧಿಸಿ ಕೊನೆಗೂ ಪೊಲೀಸರು 19 ಆರೋಪಿಗಳ ವಿರುದ್ಧ ಚಾರ್ಜ್​ಶೀಟ್ ಸಲ್ಲಿಸಿದ್ದಾರೆ.
ಆರೋಪಿಗಳು
ಆರೋಪಿಗಳು
Updated on: 

ಹಾವೇರಿ: ಹಾವೇರಿ ಸಾಮೂಹಿಕ ಅತ್ಯಾಚಾರ ಪ್ರಕರಣದಕ್ಕೆ ಸಂಬಂಧಿಸಿ ಕೊನೆಗೂ ಪೊಲೀಸರು 19 ಆರೋಪಿಗಳ ವಿರುದ್ಧ ಚಾರ್ಜ್​ಶೀಟ್ ಸಲ್ಲಿಸಿದ್ದಾರೆ.

ಹಾವೇರಿ ಗ್ಯಾಂಗ್ ರೇಪ್ ಪ್ರಕರಣ ರಾಜ್ಯದಾದ್ಯಂತ ಸಂಚಲನ ಸೃಷ್ಟಿಸಿದ್ದು ಅಲ್ಲದೆ ರಾಜಕೀಯವಾಗಿಯೂ ಬಹಳ ಚರ್ಚೆಗೆ ಗ್ರಾಸವಾಗಿತ್ತು. ಇನ್ನು ಗ್ಯಾಂಗ್​ರೇಪ್ ಘಟನೆ ನಡೆದು 58 ದಿನಗಳ ಬಳಿಕ ಪೊಲೀಸರು ಹಾನಗಲ್ ಜೆಎಂಎಫ್ ಕೋರ್ಟ್​ಗೆ 873 ಪುಟಗಳ ಚಾರ್ಜ್​ಶೀಟ್ ಚಾರ್ಜ್​ಶೀಟ್ ಸಲ್ಲಿಸಿದ್ದಾರೆ.

ಕಳೆದ ಜನವರಿ 8ರಂದು ಹಾನಗಲ್ ಬಳಿ ಶಿರಸಿ ಮೂಲದ ಮುಸ್ಲಿಂ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಪ್ರಕರಣ ಸಂಬಂಧ 19 ಆರೋಪಿಗಳನ್ನು ಹಾನಗಲ್ ಪೊಲೀಸರು ಬಂಧಿಸಿದ್ದರು. ಅತ್ಯಾಚಾರ ಎಸಗಿದ 7 ಪ್ರಮುಖ ಆರೋಪಿಗಳು ಸೇರಿ ಒಟ್ಟು 19 ಮಂದಿಯ ಹೆಸರು ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ ವಿಚಾರಣೆ ವೇಳೆ 7 ಪ್ರಮುಖ ಆರೋಪಿಗಳನ್ನು ಸಂತ್ರಸ್ತೆ ಗುರುತಿಸಿದ್ದರು.

ಆರೋಪಿಗಳು
ಹಾವೇರಿ ಸಾಮೂಹಿಕ ಅತ್ಯಾಚಾರ ಪ್ರಕರಣ: ದೂರು ಹಿಂಪಡೆಯುವಂತೆ ಹಣದ ಆಮಿಷ ನೀಡುತ್ತಿದ್ದಾರೆ; ಸಂತ್ರಸ್ತ ಮಹಿಳೆ

ಹಾನಗಲ್ ಪೊಲೀಸರು ಘಟನೆ ಸಂಬಂಧ 20 ದಿನಗಳ ಹಿಂದೆಯೇ ತನಿಖೆಯನ್ನು ಪೂರ್ಣಗೊಳಿಸಿದ್ದರು. ಆದರೆ ಎಫ್​​ಎಸ್​ಎಲ್ ವರದಿ ಹಾಗೂ ಡಿಎನ್​ಎ ವರದಿಗಳಿಗಾಗಿ ಕಾಯುತ್ತಿದ್ದರು. ಇದೀಗ ಆ ವರದಿಗಳು ಕೈ ಸೇರುತ್ತಿದ್ದಂತೆ ಚಾರ್ಜ್​ಶೀಟ್ ಸಲ್ಲಿಕೆ ಮಾಡಿದ್ದಾರೆ.

ಚಾರ್ಜ್​ಶೀಟ್​​​ನಲ್ಲಿ ಉಲ್ಲೇಖವಾಗಿರುವ 7 ಪ್ರಮುಖ ಆರೋಪಿಗಳ ಹೆಸರು

ಪೊಲೀಸರು ಚಾರ್ಜ್​ಶೀಟ್​​​ನಲ್ಲಿ ಉಲ್ಲೇಖಿಸಿರುವ ಪ್ರಕಾರ, ಅಫ್ತಾಬ್ ಚಂದನಕಟ್ಟಿ, ಮದರ್​ಸಾಬ್ ಮಂಡಕ್ಕಿ, ಸಮೀವುಲ್ಲಾ ಲಾಲಾನವರ, ಶೋಯೆಬ್ ನಿಯಾಜ್ ಅಹ್ಮದ್ ಮುಲ್ಲಾ, ಮೊಹಮ್ಮದ್ ಸಾದೀಕ್, ತೌಷಿಪ್, ರಿಯಾಜ್ ಸಾವಿಕೇರಿ ಪ್ರಮುಖ ಆರೋಪಿಗಳಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com