ಬೋರ್‌ವೆಲ್‌ ಕೊರೆಯುವ ಮುನ್ನ ಅನುಮತಿ ಕಡ್ಡಾಯ: BWSSB
ಬಿಡಬ್ಲ್ಯುಎಸ್‌ಎಸ್‌ಬಿ ಅಧ್ಯಕ್ಷ ರಾಮಪ್ರಸಾತ್ ಮನೋಹರ್

ಬೋರ್‌ವೆಲ್‌ ಕೊರೆಯುವ ಮುನ್ನ ಅನುಮತಿ ಕಡ್ಡಾಯ: BWSSB

ನಗರದಲ್ಲಿ ಬೋರ್‌ವೆಲ್‌ ಕೊರೆಸಲು ಇಚ್ಛಿಸುವವರು ಅನುಮತಿ ಪಡೆಯುವುದು ಕಡ್ಡಾಯವಾಗಿದ್ದು, ನಿಯಮ ಪಾಲಿಸದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಬಿಡಬ್ಲ್ಯುಎಸ್‌ಎಸ್‌ಬಿ ಹೇಳಿದೆ.
Published on

ಬೆಂಗಳೂರು: ನಗರದಲ್ಲಿ ಬೋರ್‌ವೆಲ್‌ ಕೊರೆಸಲು ಇಚ್ಛಿಸುವವರು ಅನುಮತಿ ಪಡೆಯುವುದು ಕಡ್ಡಾಯವಾಗಿದ್ದು, ನಿಯಮ ಪಾಲಿಸದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಬಿಡಬ್ಲ್ಯುಎಸ್‌ಎಸ್‌ಬಿ ಹೇಳಿದೆ.

ಬಿಡಬ್ಲ್ಯೂಎಸ್‌ಎಸ್‌ಬಿ ಅಧ್ಯಕ್ಷ ರಾಮಪ್ರಸಾತ್‌ ಮನೋಹರ್‌ ಮಾತನಾಡಿ, ‘ಮಳೆ ಕೊರತೆಯಿಂದ ಅಂತರ್ಜಲ ಕುಸಿದಿದ್ದು, ನಗರದಲ್ಲಿನ ಕೊಳವೆಬಾವಿಗಳು ಬತ್ತಿ ಹೋಗಿವೆ. ಸೂಕ್ತ ಅನುಮತಿ ಪಡೆಯದೇ ಬೋರ್‌ವೆಲ್‌ ಕೊರೆಸಿದ್ದರಿಂದ ನೀರಿನ ಮಟ್ಟ ಕುಸಿದಿದೆ. ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆ ನಿಯಮಗಳು ಮತ್ತು ನಿಯಂತ್ರಣ) ಕಾಯಿದೆ 2011 ರ ಪ್ರಕಾರ ಬೋರ್‌ವೆಲ್ ಗಳ ಕೊರೆಸುವುದಕ್ಕೂ ಮುನ್ನ ಅಗತ್ಯ ಅಧಿಕಾರಿಗಳಿಂದ ಅನುಮತಿ ಪಡೆಯಬೇಕು ಎಂದು ಹೇಳಿದ್ದಾರೆ.

ಅಂತರ್ಜಲದ ಮಟ್ಟ ಕಡಿಮೆಯಾಗುತ್ತಿದ್ದು, ಇದನ್ನು ತಡೆಯುವ ಉದ್ದೇಶದಿಂದ ಈ ಆದೇಶವನ್ನು ಜಾರಿಗೊಳಿಸಲಾಗಿದೆ. ನಿಯಮ ಪಾಲಿಸದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಬೋರ್‌ವೆಲ್‌ ಕೊರೆಯುವ ಮುನ್ನ ಅನುಮತಿ ಕಡ್ಡಾಯ: BWSSB
ಆತಂಕ ಬೇಡ, ಜುಲೈವರೆಗೆ ಬೆಂಗಳೂರು ಪರಿಸ್ಥಿತಿ ನಿಭಾಯಿಸುವಷ್ಟು ನೀರು ನಮ್ಮಲ್ಲಿದೆ: ಬಿಡಬ್ಲ್ಯುಎಸ್‌ಎಸ್‌ಬಿ ಮುಖ್ಯಸ್ಥ

ಮಾರ್ಚ್ 15 ರಿಂದ ಜಲಮಂಡಳಿಯ ವೆಬ್‌ಸೈಟ್‌ನಿಂದ ನಾಗರಿಕರಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಸಾರ್ವಜನಿಕ ಬೋರ್‌ವೆಲ್‌ಗಳ ಅನುಮತಿಗೆ ಮೊದಲ ಆದ್ಯತೆ ನೀಡಲಾಗುವುದು. ಅಗತ್ಯತೆ, ನೀರಿನ ಸಂಗ್ರಹವನ್ನು ಪರಿಶೀಲಿಸಿದ ನಂತರ ಖಾಸಗಿ ಬೋರ್‌ವೆಲ್‌ಗಳಿಗೆ ಅನುಮೋದನೆ ನೀಡಲಾಗುವುದು. ಅನುಮತಿ ಕೋರಿ ಅರ್ಜಿ ಸಲ್ಲಿಕೆಯಾದ ಬಳಿಕ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ. ಅವರ ವರದಿ ಆಧರಿಸಿ ಅನುಮತಿ ನೀಡಲಾಗುವುದು ಎಂದು ಹೇಳಿದರು.

ಈ ನಡುವೆ ರಾಮಪ್ರಸಾತ್ ಮನೋಹರ್ ಅವರು ಭಾನುವಾರ ನಗರದ ಅನೇಕ ಪ್ರದೇಶಗಳಿಗೆ ಭೇಟಿ ನೀಡಿ ನೀರಿನ ಪೂರೈಕೆಯನ್ನು ಪರಿಶೀಲನ ನಡೆಸಿದರು.

ಇದೇ ವೇಳೆ ಅಗರ ಕೆರೆ ಭೇಟಿ ನೀಡಿದ ಅವರು, ದೇವನಹಳ್ಳಿಯಲ್ಲಿ ಐಐಎಸ್‌ಸಿ ನಡೆಸುತ್ತಿರುವ ಕೊಳವೆಬಾವಿಗಳ ಮಾದರಿಯಲ್ಲಿಯೇ ಫಿಲ್ಟರ್ ಕೊಳವೆಬಾವಿ ಅಳವಡಿಸುವ ಸಾಧ್ಯತೆಗಳ ಕುರಿತು ಮಂಡಳಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.

ಬೋರ್‌ವೆಲ್‌ ಕೊರೆಯುವ ಮುನ್ನ ಅನುಮತಿ ಕಡ್ಡಾಯ: BWSSB
ಬೆಂಗಳೂರು ನೀರಿನ ಬಿಕ್ಕಟ್ಟು: ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಕೆರೆಗಳಿಗೆ ಸಂಸ್ಕರಿಸಿದ ನೀರು: BWSSB ಮಹತ್ವದ ನಿರ್ಧಾರ

ಅಗರ ಕೆರೆಯಲ್ಲಿನ ಎಸ್‌ಟಿಪಿ ಘಟಕವನ್ನು ಪರಿಶೀಲಿಸಿದ ಅವರು, ಶುದ್ಧೀಕರಿಸಿದ ನೀರನ್ನು ಕೈಗಾರಿಕೆಗಳಿಗೆ ಮತ್ತು ಕಾರ್ಖಾನೆಗಳಿಗೆ ಸರಬರಾಜು ಮಾಡಲಾಗುವುದು. ಈ ಘಟಕಗಳಿಗೆ ಸರಬರಾಜು ಮಾಡುತ್ತಿದ್ದ ಕುಡಿಯುವ ನೀರಿನ ಕೊರತೆ ಎದುರಿಸುತ್ತಿರುವ ಪ್ರದೇಶಗಳಿಗೆ ಒದಗಿಸಲಾಗುವುದು ಎಂದು ಹೇಳಿದರು.

ನಂತರ ಕೆಆರ್ ಪುರಂ, ವಿಜ್ಞಾನನಗರ, ಎಚ್‌ಎಎಲ್ ಸೇರಿದಂತೆ ಪೂರ್ವ ಬೆಂಗಳೂರು ಪ್ರದೇಶಗಳಿಗೆ ನೀರು ಸರಬರಾಜು ಮಾಡುವ ನಾರಾಯಣಪುರದ ಜಲಾಶಯಕ್ಕೆ ಭೇಟಿ ನೀಡಿದ ಅವರು, ಕ್ಷೇತ್ರದ ಪ್ರಮುಖ ಸ್ಥಳಗಳಲ್ಲಿ ಅಳವಡಿಸಲಾಗಿರುವ ತಾತ್ಕಾಲಿಕ ಟ್ಯಾಂಕ್‌ಗಳ ಪರಿಶೀಲನೆ ನಡೆಸಿದರು.

ಈ ವೇಳೆ ಕೃಷ್ಣನಗರ ಕೊಳೆಗೇರಿಯ ಜನರೊಂದಿಗೆ ಸಂವಾದ ನಡೆಸಿದ ಅವರು, ಸಮಸ್ಯೆಗಳನ್ನು ಆಲಿಸಿ, ಈ ಪ್ರದೇಶದಲ್ಲಿ ತಾತ್ಕಾಲಿಕ ಟ್ಯಾಂಕ್‌ಗಳ ಸಂಖ್ಯೆಯನ್ನು ಹೆಚ್ಚಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com