ಪವಿತ್ರ ರಂಜಾನ್ ಉಪವಾಸ: ಉತ್ತಮ ಮಳೆಗಾಗಿ ಪ್ರಾರ್ಥಿಸಿ: ವಕ್ಫ್‌ ಬೋರ್ಡ್‌ ಅಧ್ಯಕ್ಷ ಅನ್ವರ್‌ ಬಾಷಾ ಮನವಿ

ಮುಸ್ಲಿಂ ಬಾಂಧವರ ಪವಿತ್ರ ರಂಜಾನ್ ಮಾಸ ಮಂಗಳವಾರದಿಂದ ಆರಂಭಗೊಂಡಿದ್ದು, ಪ್ರಾರ್ಥನೆ ವೇಳೆ ರಾಜ್ಯದಲ್ಲಿ ಉತ್ತಮ ಮಳೆಗಾಗಿ ಪ್ರಾರ್ಥಿಸುವಂತೆ ವಕ್ಫ್‌ ಬೋರ್ಡ್‌ ಅಧ್ಯಕ್ಷ ಅನ್ವರ್‌ ಬಾಷಾ ಹಾಗೂ ಬೆಂಗಳೂರಿನ ಜಾಮಿಯಾ ಮಸೀದಿಯ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮುಸ್ಲಿಂ ಬಾಂಧವರ ಪವಿತ್ರ ರಂಜಾನ್ ಮಾಸ ಮಂಗಳವಾರದಿಂದ ಆರಂಭಗೊಂಡಿದ್ದು, ಪ್ರಾರ್ಥನೆ ವೇಳೆ ರಾಜ್ಯದಲ್ಲಿ ಉತ್ತಮ ಮಳೆಗಾಗಿ ಪ್ರಾರ್ಥಿಸುವಂತೆ ವಕ್ಫ್‌ ಬೋರ್ಡ್‌ ಅಧ್ಯಕ್ಷ ಅನ್ವರ್‌ ಬಾಷಾ ಹಾಗೂ ಬೆಂಗಳೂರಿನ ಜಾಮಿಯಾ ಮಸೀದಿಯ ಮುಖ್ಯ ಇಮಾಮ್ ಮತ್ತು ಖತೀಬ್ ಮೌಲಾನಾ ಮೊಹಮ್ಮದ್ ಮಕ್ಸೂದ್ ಇಮ್ರಾನ್ ರಶಾದಿ ಅವರು ಮನವಿ ಮಾಡಿಕೊಂಡಿದ್ದಾರೆ.

ಈ ಬಾರಿ ರಾಜ್ಯ ಅತ್ಯಂತ ಕೆಟ್ಟ ಪರಿಸ್ಥಿತಿಗೆ ಸಾಕ್ಷಿಯಾಗಿದೆ. ಈ ಪರಿಸ್ಥಿತಿ ಇದೇ ರೀತಿ ಮುಂದುವರೆದೆ ಸಾಕಷ್ಟು ಜನರು ಸಂಕಷ್ಟಕ್ಕೆ ಸಿಲುಕುತ್ತಾರೆ. ಹೀಗಾಗಿ ಮಂಡಳಿಯ ವ್ಯಾಪ್ತಿಯಲ್ಲಿರುವ ಎಲ್ಲಾ ಮಸೀದಿ ಹಾಗೂ ದರ್ಗಾಗಳಲ್ಲಿ ಉಪವಾಸ ಮುರಿಯುವುದಕ್ಕೂ ಮುನ್ನ ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸುವಂತೆ ಮನವಿ ಮಾಡಿಕೊಳ್ಳಳಾಗಿದೆ ಎಂದು ಅನ್ವರ್ ಬಾಷಾ ಅವರು ಹೇಳಿದ್ದಾರೆ.

ಇಮ್ರಾನ್ ರಶಾದಿ ಮಾತನಾಡಿ, ಉತ್ತಮ ಮಳೆಗಾಗಿ ಬೆಂಗಳೂರು ಒಂದರಲ್ಲೇ 300 ಕ್ಕೂ ಹೆಚ್ಚು ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಸಂಗ್ರಹ ಚಿತ್ರ
ದೇಶದ ವಿವಿಧೆಡೆ ಚಂದ್ರನ ದರ್ಶನ: ನಾಳೆಯಿಂದ ರಂಜಾನ್ ಉಪವಾಸ ಆರಂಭ

ಮನುಷ್ಯರಷ್ಟೇ ಅಲ್ಲ, ಪ್ರಾಣಿ, ಪಕ್ಷಿ ಹಾಗೂ ಜಲಚರಗಳು ಕೂಡ ನೀರಿ ಅಭಾವದಿಂದಾಗಿ ಸಂಕಷ್ಟಕ್ಕೆ ಸಿಲುಕಿವೆ. ಈ ಪರಿಸ್ಥಿತಿ ಸರಿಹೋಗಬೇಕೆಂದರ ಅದಕ್ಕೆ ದೇವರ ಅನುಗ್ರಹ ಬೇಕಿದೆ. ನಮ್ಮೊಂದಿಗೆ ಹಿಂದೂ ಹಾಗೂ ಕ್ರೈಸ್ತರು ಕೂಡ ಮಳೆಗಾಗಿ ಪ್ರಾರ್ಥನೆ ಸಲ್ಲಿಸುತ್ತಾರೆಂದು ತಿಳಿಸಿದ್ದಾರೆ.

ಮುಸ್ಲಿಂ ಬಾಂಧವರ ಈ ನಿರ್ಧಾರವನ್ನು ಸಚಿವ ರಾಮಲಿಂಗಾ ರೆಡ್ಡಿಯವರು ಸ್ವಾಗತಿಸಿದ್ದು, ಉತ್ತಮ ಮಳೆಗಾಗಿ ರಾಜ್ಯದ ದೇವಸ್ಥಾನಗಳಗಳಲ್ಲಿಯೂ ಪೂಜೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com