ಇಸ್ರೇಲ್ ಖರ್ಜೂರ ಖರೀದಿಗೆ ಬೆಂಗಳೂರಿನ ರಸೆಲ್ ಮಾರುಕಟ್ಟೆ ಹಿಂದೇಟು!

ಕಳೆದ 20 ವರ್ಷಗಳಲ್ಲಿ ರಾಜ್ಯಕ್ಕೆ ಪ್ರಮುಖ ಖರ್ಜೂರ ಪೂರೈಕೆದಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ರಸೆಲ್ ಮಾರುಕಟ್ಟೆಯು, ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ಸಂಘರ್ಷದ ನಂತರ ಇಸ್ರೇಲ್‌ನಿಂದ 'ಕಿಂಗ್ ಸೊಲೊಮನ್' ಬ್ರಾಂಡ್ ಖರ್ಜೂರದ ಖರೀದಿಯನ್ನು ಸ್ಥಗಿತಗೊಳಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕಳೆದ 20 ವರ್ಷಗಳಲ್ಲಿ ರಾಜ್ಯಕ್ಕೆ ಪ್ರಮುಖ ಖರ್ಜೂರ ಪೂರೈಕೆದಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ರಸೆಲ್ ಮಾರುಕಟ್ಟೆಯು, ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ಸಂಘರ್ಷದ ನಂತರ ಇಸ್ರೇಲ್‌ನಿಂದ 'ಕಿಂಗ್ ಸೊಲೊಮನ್' ಬ್ರಾಂಡ್ ಖರ್ಜೂರದ ಖರೀದಿಯನ್ನು ಸ್ಥಗಿತಗೊಳಿಸಿದೆ.

ಇಸ್ರೇಲ್ ಬದಲಿಗೆ ರಸೆಲ್ ಮಾರುಕಟ್ಟೆ ದಕ್ಷಿಣ ಆಫ್ರಿಕಾ, ಇರಾನ್, ಟ್ಯುನೀಷಿಯಾ ಮತ್ತು ಇತರ ಭಾಗಗಳಿಂದ ಖರ್ಜೂರ ಆಮದು ಮಾಡಿಕೊಳ್ಳಲಾಗುತ್ತಿದೆ, ಇದರಿಂದ ಖರ್ಜೂರ ಪೂರೈಕೆಯಲ್ಲಿ ಎರಡು ಪಟ್ಟು ಹೆಚ್ಚಳವಾಗಿದೆ.

ರಸೆಲ್ ಮಾರ್ಕೆಟ್‌ನ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಇದ್ರೀಸ್ ಚೌಧರಿ ಅವರು ಮಾತನಾಡಿ, “ಹಿಂದೆ, ಲಯನ್ ಡೇಟ್ಸ್ ಗಳನ್ನು ಮಾತ್ರ ಮಾರಾಟ, ಸರಬರಾಜು ಮಾಡಲಾಗುತ್ತಿತ್ತು. ಇದೀಗ ಮೆಕ್ಕಾ ಮತ್ತು ಮದೀನಾ, ಸೌದಿ ಅರೇಬಿಯಾ, ಟ್ಯುನೀಷಿಯಾ, ದಕ್ಷಿಣ ಆಫ್ರಿಕಾದ ಜೋರ್ಡಾನ್ ಮತ್ತು ಟರ್ಕಿಯಿಂದ ತಾಜಾ ಮತ್ತು ಗುಣಮಟ್ಟದ ಖರ್ಜೂರದ ಪೂರೈಕೆಯಾಗುತ್ತಿದೆ. ಈ ಖರ್ಜೂರಗಳನ್ನು ರಾಜ್ಯದ ಉಳಿದ ಭಾಗಗಳಿಗೆ ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಮ್ಯಾಂಬ್ರೂಮ್, ಮೆಡ್ಜೌಲ್, ಬರ್ಹಿ, ಮಜಾಫತ್, ಸಗಾಯ್, ಅಜ್ವಾ, ಸುಕ್ಕರಿ ಮತ್ತಿತರ ಖರ್ಜೂರಗಳನ್ನು ತಂದು ಪ್ರದರ್ಶನಕ್ಕೆ ಇಡಲಾಗಿದೆ. ಈ ಖರ್ಜೂರಗಳು 150ರಿಂದ 1600 ರೂ.ವರೆಗೆ ಲಭ್ಯವಿದೆ.

ರಂಜಾನ್ ಉಪವಾಸ ಅಂತ್ಯಗೊಳಿಸಲು ಸಾಮಾನ್ಯವಾಗಿ ಮುಸ್ಲಿಂ ಸಮುದಾಯದವರು ಖರ್ಜೂರ ಖರೀದಿ ಮಾಡುತ್ತಾರೆ. ಆದರೆ, ಕೋವಿಡ್ ನಂತರ ಕೇವಲ ಮುಸ್ಲಿಮರಷ್ಟೇ ಅಲ್ಲದೆ, ಇತರರು ಕೂಡ ಖರ್ಜೂರ ಖರೀದಿ ಮಾಡುತ್ತಿದ್ದಾರೆ. ಬೆಂಗಳೂರಿನ ಇಸ್ಕಾನ್‌, ಕ್ರಿಶ್ಚಿಯನ್ ಧರ್ಮಗುರುಗಳು ಮತ್ತು ರಾಜಕೀಯ ಮುಖಂಡರು ಆರೋಗ್ಯಕ್ಕೆ ಉತ್ತಮವಾದ ಖರ್ಜೂರವನ್ನು ಖರೀದಿಸುತ್ತಿದ್ದಾರೆ. ಖರ್ಜೂರವು ನೈಸರ್ಗಿಕ ಸಕ್ಕರೆಯನ್ನು ಹೊಂದಿದ್ದು, ಫೈಬರ್‌ ಅಂಶ ಸಮೃದ್ಧವಾಗಿದೆ ಎಂದು ತಿಳಿಸಿದ್ದಾರೆ.

ಸಂಗ್ರಹ ಚಿತ್ರ
ಉತ್ತಮ ಆರೋಗ್ಯಕ್ಕೆ ಪ್ರತಿದಿನ ತಿನ್ನಬೇಕು ಖರ್ಜೂರ

ವ್ಯಾಪಾರಿಗಳು ಈ ಹಿಂದೆ ಇಸ್ರೇಲ್‌ನಿಂದ ಕಿಂಗ್ ಸೊಲೊಮನ್ ಎಂಬ ಬ್ರಾಂಡ್ ಹೆಸರಿನಲ್ಲಿ ಮೆಡ್‌ಜೌಲ್ ಖರ್ಜೂರವನ್ನು ಖರೀದಿಸುತ್ತಿದ್ದರು, ಈ ಖರ್ಜೂರ ಗಾತ್ರದಲ್ಲಿ ದೊಡ್ಡದಾಗಿರುತ್ತದೆ. ಈ ಖರ್ಜೂರಗಳು ಮೃದು ಮತ್ತು ಕ್ರೀಮ್ ರೀತಿ ಇರುತ್ತದೆ. ಹಾಗೂ ಇದರ ಬೆಲೆ ಕಿಲೋಗೆ 1,650 ರೂ ಇರುತ್ತದೆ.

ಪ್ಯಾಲೆಸ್ತೀನ್ ಮತ್ತು ಇಸ್ರೇಲ್ ನಡುವೆ ಸಂಘರ್ಷ ನಡೆಯುತ್ತಿರುವುದರಿಂದ ಕಳೆದ ಕೆಲವು ವರ್ಷಗಳಿಂದ ಇಸ್ರೇಲ್‌ನಿಂದ ಖರ್ಜೂರ ಖರೀದಿಯನ್ನು ನಿಲ್ಲಿಸಲಾಗಿದೆ. ಇದೀಗ ಮುಸ್ಲಿಂ ರಾಷ್ಟ್ರಗಳ ಅನೇಕ ವ್ಯಾಪಾರಿಗಳು ಪ್ಯಾಲೆಸ್ತೀನ್‌ನಿಂದ ಖರ್ಜೂರವನ್ನು ಖರೀದಿಸಲು ಒಲವು ತೋರುತ್ತಿದ್ದಾರೆ. ಈ ಬಾರಿಯ ರಂಜಾನ್ ನಲ್ಲಿ ಪ್ಯಾಲೆಸ್ಟೈನ್‌ನಿಂದ ಮೆಡ್ಜೌಲ್ ಖರ್ಜೂರಗಳನ್ನು ಆಮದು ಮಾಡಿಕೊಳ್ಳಲಾಗಿದೆ ಎಂದು ಚೌಧರಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com