ನಗರದಲ್ಲಿ ಅಂತರ್ಜಲ ಮಟ್ಟ ಕುಸಿತಕ್ಕೆ ಅಕ್ರಮ ಬಡಾವಣೆ, ಬೋರ್‌ವೆಲ್‌ಗಳೂ ಕಾರಣ!

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನೀರಿಗೆ ಹಾಹಾಕಾರ ಶುರುವಾಗಿದ್ದು, ಅಂತರ್ಜಲ ಮಟ್ಟ ಕುಸಿತ ಕಂಡಿರುವ ಹಿನ್ನೆಲೆಯಲ್ಲಿ ಹಲವು ಬೋರ್ ವೆಲ್ ಗಳು ಬತ್ತಿ ಹೋಗಿವೆ. ಅಂತರ್ಜಲ ಮಟ್ಟ ಕುಸಿತಕ್ಕೆ ನಗರದಲ್ಲಿ ತಲೆಎತ್ತಿರುವ ಹಲವು ಅಕ್ರಮ ಬಡಾವಣೆಗಳು ಹಾಗೂ ಬೋರೆ ವೆಲ್ ಗಳೂ ಕಾರಣವಾಗಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನೀರಿಗೆ ಹಾಹಾಕಾರ ಶುರುವಾಗಿದ್ದು, ಅಂತರ್ಜಲ ಮಟ್ಟ ಕುಸಿತ ಕಂಡಿರುವ ಹಿನ್ನೆಲೆಯಲ್ಲಿ ಹಲವು ಬೋರ್ ವೆಲ್ ಗಳು ಬತ್ತಿ ಹೋಗಿವೆ. ಅಂತರ್ಜಲ ಮಟ್ಟ ಕುಸಿತಕ್ಕೆ ನಗರದಲ್ಲಿ ತಲೆಎತ್ತಿರುವ ಹಲವು ಅಕ್ರಮ ಬಡಾವಣೆಗಳು ಹಾಗೂ ಬೋರೆ ವೆಲ್ ಗಳೂ ಕಾರಣವಾಗಿವೆ.

ನಗರದ ಕೆಆರ್‌ ಪುರ, ಹೊರಮಾವು, ವೈಟ್‌ಫೀಲ್ಡ್‌, ವರ್ತೂರು, ಬೆಳ್ಳಂದೂರು, ಮಾರತ್ತಹಳ್ಳಿ, ಹೂಡಿಯಲ್ಲಿ ತೀವ್ರ ನೀರಿನ ಕೊರತೆ ಎದುರಾಗಿದೆ. ಈ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ ಕುಸಿತಕ್ಕೆ ಅಕ್ರಮ ಬಡಾವಣೆ ಹಾಗೂ ಬೋರೆಲ್ ವೆಲ್ ಗಳು ಕಾರಣವೆಂದು ಸ್ಥಳೀಯ ನಿವಾಸಿಗಳು ಹಾಗೂ ಹೋರಾಟಗಾರರು ಆರೋಪಿಸಿದ್ದಾರೆ.

ಸಿಟಿಜೆನ್ಸ್ ಅಜೆಂಡಾ ಫಾರ್ ಬೆಂಗಳೂರು ಸಂಚಾಲಕ ಸಂದೀಪ್ ಅನಿರುಧನ್ ಅವರು ಮಾತನಾಡಿ, ಸ್ಥಳದಲ್ಲಿ ಮೂಲಸೌಕರ್ಯಗಳ ಸಮಸ್ಯೆ ಹಾಗೂ ನೀರಿನ ಸಮಸ್ಯೆಗಳಿಗೆ ಫ್ಲೈ-ಬೈ-ನೈಟ್ ಬಿಲ್ಡರ್‌ಗಳು ಮತ್ತು ರಿಯಲ್ ಎಸ್ಟೇಟ್ ಮಾಫಿಯಾ ಕಾರಣವಾಗಿದೆ. ಅಕ್ರಮ ಕಟ್ಟಡಗಳು, ಲೇಔಟ್‌ಗಳು, ಬೋರ್‌ವೆಲ್‌ಗಳ ಕುರಿತು ಹಲವು ಬಾರಿ ದೂರು ನೀಡಿದರೂ ಯಾವುದೇ ಅಧಿಕಾರಿಗಳೂ ಕ್ರಮಕೈಗೊಂಡಿಲ್ಲ. ಇದರಿಂದ ವಲಯದಲ್ಲಿ ನೀರಿನ ಕೊರತೆ ಉಂಟಾಗಿದೆ ಎಂದು ಆರೋಪಿಸಿದ್ದಾರೆ.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಸಂಪರ್ಕ ಹೊಂದಿರುವ ವೈಟ್‌ಫೀಲ್ಡ್‌ನಲ್ಲಿನ ಮನೆಗಳು ಮತ್ತು ಅಪಾರ್ಟ್‌ಮೆಂಟ್ ಸಂಕೀರ್ಣಗಳಿಗೆ ಹದಿನೈದು ಅಥವಾ ತಿಂಗಳಿಗೊಮ್ಮೆ ನೀರು ಒದಗಿಸಲಾಗುತ್ತಿದೆ. ಇದು ಸಾಕಾಗುವುದಿಲ್ಲ. ಅಕ್ರಮ ಬಡಾವಣೆ ಹಾಗೂ ಬೋರೆವೆಲ್ ಗಳಿಂದ ಅಂತರ್ಜಲ ಬತ್ತಿ ಹೋಗುತ್ತಿವೆ ಎಂದು ಹೇಳಿದ್ದಾರೆ.

ಹೊರರಾಜ್ಯದ ಬಿಲ್ಡರ್‌ಗಳು ಹೆಚ್ಚಿನ ರೀತಿಯಲ್ಲಿ ಅಕ್ರಮ ಕಟ್ಟಡಗಳನ್ನು ನಿರ್ಮಿಸುತ್ತಿದ್ದಾರೆ. ಬೋರೆವೆಲ್ ಕೊರತೆಕ್ಕೆ ಅನುಮತಿ ಕಡ್ಡಾಯವಾಗಿದ್ದರೂ ಅಕ್ರಮವಾಗಿ ಬೋರ್ ವೆಲ್ ಕೊರೆಯುತ್ತಿದ್ದಾರೆ. ಜನಸಾಮಾನ್ಯರು ಕುಡಿಯಲು ನೀರಿಲ್ಲದೆ ಪರದಾಡುತ್ತಿದ್ದರೂ, ಬೋರ್‌ವೆಲ್ ನೀರು ನಿರ್ಮಾಣ ಬಳಕೆಗೆ ನಿಷೇಧವಿದ್ದರೂ, ಬಳಕೆ ಮಾಡುತ್ತಿದ್ದಾರೆಂದು ತಿಳಿಸಿದ್ದಾರೆ.

ಈ ಪ್ರದೇಶದಲ್ಲಿನ ನೀರಿನ ಬಿಕ್ಕಟ್ಟು ಯೋಜಿತವಲ್ಲದ ಅಭಿವೃದ್ಧಿಯ ಫಲಿತಾಂಶವಾಗಿದೆ. ಅಕ್ರಮ ಬಡಾವಣೆಗಲು, ಅಕ್ರಮ ಕಟ್ಟಡಗಳು ಮತ್ತು ಅಂತರ್ಜಲ ದುರ್ಬಳಕೆ, ಇವೆಲ್ಲವೂ ನೀರಿನ ಸಮಸ್ಯೆಗೆ ಕಾರಣವಾಗಿದೆ. ಹೊರರಾಜ್ಯದಿಂದ ಬಂದವರು ಅಕ್ರಮ ಕಟ್ಟಡಗಳ ನಿರ್ಮಾಣ ಮಾಡಿ, ಮಾರಾಟ ಮಾಡಿ ಕಣ್ಮರೆಯಾಗುತ್ತಾರೆ. ಇದರ ಪರಿಣಾಮವನ್ನು ಸ್ಥಳೀಯ ನಿವಾಸಿಗಳು ಎದುರಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸಂಗ್ರಹ ಚಿತ್ರ
ಬೆಂಗಳೂರು ಬಿಕ್ಕಟ್ಟು ತಪ್ಪಿಸಲು ಸಮಗ್ರ ನೀರು ನಿರ್ವಹಣೆ ಅಗತ್ಯ: ವಿಶ್ವನಾಥ ಶ್ರೀಕಂಠಯ್ಯ (ಸಂದರ್ಶನ)

ರಾಮಮೂರ್ತಿನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ನಿವಾಸಿ ಕೊಚ್ಚು ಶಂಕರ್ ಅವರು ಮಾತನಾಡಿ, 2019 ರಿಂದ ಎದುರಾಗಿರುವ ಪರಿಸ್ಥಿತಿಗೆ ಬಿಡಬ್ಲ್ಯೂಎಸ್‌ಎಸ್‌ಬಿ ಹೊಣೆಯಾಗಿದೆ, ನಮ್ಮ ಮನೆಯ ನಲ್ಲಿಗಳಲ್ಲಿ ನೀರು ಬರುತ್ತಿಲ್ಲ. ಕಾವೇರಿ 5ನೇ ಹಂತದ ಯೋಜನೆಯಡಿ ನೀರು ಕೊಡುವುದಾಗಿ ಭರವಸೆ ನೀಡಲಾಗಿತ್ತು. ಇದಕ್ಕಾಗಿ ಮಂಡಳಿಯು ಹೊರಮಾವು ಮತ್ತು ರಾಮಮೂರ್ತಿನಗರದ ನಿವಾಸಿಗಳಿಂದ ಉತ್ತಮ ಶುಲ್ಕವನ್ನು ಸಂಗ್ರಹಿಸಿದೆ. ಆದರೆ, ಪ್ರತಿ ಬಾರಿಯೂ ಅವರು ಯೋಜನೆಯ ಗಡುವು ಮುಂದಕ್ಕೆ ಹೋಗುತ್ತಲೇ ಇದೆ ಎಂದು ಹೇಳಿದ್ದಾರೆ.

ನೀರಿನ ಬಿಕ್ಕಟ್ಟಿನ ಕುರಿತು ಪ್ರತಿಕ್ರಿಯೆ ನೀಡಿರುವ ಬೆಂಗಳೂರು ಪೂರ್ವದ ಬಿಡಬ್ಲ್ಯುಎಸ್‌ಎಸ್‌ಬಿ ಮುಖ್ಯ ಎಂಜಿನಿಯರ್ ಕುಮಾರ್ ನಾಯಕ್, ಜುಲೈವರೆಗೆ ಪೂರೈಕೆ ಮಾಡುವಷ್ಟು ನೀರು ಜಲಾಶಯಗಳಲ್ಲಿ ಇದೆ. ಈ ಬಗ್ಗೆ ಈಗಾಗಲೇ ಮಾಹಿತಿ ನೀಡಲಾಗಿದೆ. ಖಾಸಗಿ ನೀರಿನ ಟ್ಯಾಂಕರ್‌ಗಳ ಮೇಲೆ ರಾಜ್ಯ ಸರ್ಕಾರ ಈಗಾಗಲೇ ಕ್ರಮ ಕೈಗೊಂಡಿದೆ. ನೀರಿನ ಟ್ಯಾಂಕರ್ ಬೆಲೆಗೆ ಮಿತಿಯನ್ನು ನಿಗದಿಪಡಿಸಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com