ಬೆಂಗಳೂರಿನಲ್ಲಿ ಜಲಕ್ಷಾಮ: ಸಾವಿರಾರು ಮರ-ಗಿಡಗಳಿಗೆ ನೀರುಣಿಸಲು ಲಾಲ್​ಬಾಗ್​​ ಹೆಣಗಾಟ!

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು ದಿನದಿಂದ ದಿನಕ್ಕೆ ತಾರಕಕ್ಕೇರುತ್ತಲೇ ಇದ್ದು, ಸಸ್ಯಕಾಶಿ ಲಾಲ್ ಬಾಗ್ ಕೂಡ ಸಾವಿರಾರು ಮರ-ಗಿಡಗಳಿಗೆ ನೀರುಣಿಸಲು ಸಂಕಷ್ಟ ಎದುರಿಸುತ್ತಿದೆ.
ಲಾಲ್ ಬಾಗ್ (ಸಂಗ್ರಹ ಚಿತ್ರ)
ಲಾಲ್ ಬಾಗ್ (ಸಂಗ್ರಹ ಚಿತ್ರ)
Updated on

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು ದಿನದಿಂದ ದಿನಕ್ಕೆ ತಾರಕಕ್ಕೇರುತ್ತಲೇ ಇದ್ದು, ಸಸ್ಯಕಾಶಿ ಲಾಲ್ ಬಾಗ್ ಕೂಡ ಸಾವಿರಾರು ಮರ-ಗಿಡಗಳಿಗೆ ನೀರುಣಿಸಲು ಸಂಕಷ್ಟ ಎದುರಿಸುತ್ತಿದೆ.

ಲಾಲ್ ಬಾಗ್ ಒಟ್ಟು 240 ಎಕರೆ ವಿಸ್ತೀರ್ಣವಿದ್ದು, ಇಲ್ಲಿ ಒಟ್ಟು 18,000 ಸಸ್ಯಾಗಳು ಹಾಗೂ 3,000ಕ್ಕೂ ಹೆಚ್ಚು ಜಾತಿಯ ಮರಗಳಿವೆ. ನೀರಿಲ್ಲದೆ ಇವುಗಳ ನಿರ್ವಹಣೆ ಕಷ್ಟಕರವಾಗುತ್ತಿದೆ.

ವಿದ್ಯುತ್ ಪೂರೈಕೆಯಲ್ಲಿ ಏರಿಳಿತವಾಗುತ್ತಿರುವುದರಿಂದ ಒಳಚರಂಡಿ ಸಂಸ್ಕರಣಾ ಘಟಕ (ಎಸ್‌ಟಿಪಿ)ದಿಂದ ಬರುವ 1.5 ಎಂಎಲ್'ಡಿ ನೀರು ಪಡೆಯುವುದು ಕಷ್ಟಕರವಾಗುತ್ತಿದೆ. ಅಲ್ಲದೆ, ಉದ್ಯಾನವನದ ಐದು ಬೋರ್ ವೆಲ್ ಗಳ ನೀರು ಕೂಡ ಕಡಿಮೆಯಾಗಿದೆ ಎಂದು ಲಾಲ್ ಬಾಗ್ ಅಧಿಕಾರಿಗಳು ಹೇಳಿದ್ದಾರೆ.

ಲಾಲ್‌ಬಾಗ್ ಬೊಟಾನಿಕಲ್ ಗಾರ್ಡನ್ಸ್ ಜಂಟಿ ನಿರ್ದೇಶಕ ಎಂ ಜಗದೀಶ ಅವರು ಮಾತನಾಡಿ, ಮಾರ್ಚ್‌ನಿಂದ ಏಪ್ರಿಲ್ ಅಂತ್ಯದವರೆಗಿನ ಬೇಸಿಗೆಯ ತಿಂಗಳುಗಳನ್ನು ತೋಟಗಾರಿಕೆ ಇಲಾಖೆಗೆ ನಿರ್ಣಾಯಕವೆಂದು ಪರಿಗಣಿಸಲಾಗುತ್ತದೆ. ಈ ಋತುವಿನಲ್ಲಿ ಕೆಲವು ಸಸ್ಯಗಳು ಮತ್ತು ಸಣ್ಣ ಮರಗಳಿಗೆ ಹೆಚ್ಚಿನ ನೀರಿನ ಅಗತ್ಯವಿರುತ್ತದೆ. ಕಳೆದ ವರ್ಷ ಮುಂಗಾರು ವೈಫಲ್ಯ ಮತ್ತು ಬರದ ಪರಿಣಾಮ ಅಂತರ್ಜಲ ಮಟ್ಟ ಕಡಿಮೆಯಾಗಿದೆ. ಇದರಿಂದ ಲಾಲ್‌ಬಾಗ್‌ನಲ್ಲಿ ಸಸ್ಯಗಳು ಮತ್ತು ಮರಗಳ ನಿರ್ವಹಣೆ ಸವಾಲಿನ ಸಂಗತಿಯಾಗಿದೆ ಎಂದು ಹೇಳಿದ್ದಾರೆ.

ಆಗಾಗ್ಗೆ ವಿದ್ಯುತ್ ಕಡಿತವು ಪ್ರತಿದಿನ 15 ಲಕ್ಷ ಲೀಟರ್ ಕೊಳಚೆನೀರನ್ನು ಸಂಸ್ಕರಿಸುವ ಎಫ್ಲುಯೆಂಟ್ ಸಂಸ್ಕರಣಾ ಘಟಕದ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಿದೆ. ಲಾಲ್‌ಬಾಗ್‌ನ ಬೋರ್‌ವೆಲ್‌ಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದ್ದು, ಇದರಿಂದ 240 ಎಕರೆ ಉದ್ಯಾನವನದ ಆವರಣದಲ್ಲಿ ಗಿಡಗಳು ಮತ್ತು ಮರಗಳಿಗೆ ನೀರುಣಿಸಲು ಸಿಬ್ಬಂದಿ ಕಷ್ಟಪಡುತ್ತಿದ್ದಾರೆ. ಆದಾಗ್ಯೂ, ನಾವು STP ಯಿಂದ ಸಂಸ್ಕರಿಸಿದ ನೀರಿನಿಂದ ನಿರ್ವಹಿಸುತ್ತಿದ್ದೇವೆಂದು ತಿಳಿಸಿದ್ದಾರೆ.

ಲಾಲ್ ಬಾಗ್ (ಸಂಗ್ರಹ ಚಿತ್ರ)
ಬೆಂಗಳೂರು ನೀರು ಬಿಕ್ಕಟ್ಟು ನಡುವಲ್ಲೇ ಗಮನ ಸೆಳೆಯುತ್ತಿದೆ ಯಡಿಯೂರಿನ ಜಲಸಂರಕ್ಷಣಾ ಕ್ರಮ!

ಸಂಸ್ಕರಿಸಿದ ನೀರನ್ನು ಸಣ್ಣ ಸಣ್ಣ ತೊಟ್ಟಿಗಳಲ್ಲಿ ತುಂಬಿಸಲಾಗುತ್ತಿದೆ. ಬೋರ್ ವೆಲ್ ಗಳಿಂದ ನೀರುಣಿಸಲು ಸಾಧ್ಯವಾಗದಿದ್ದಾಗ ಟ್ರ್ಯಾಕ್ಟರ್ ಗಳ ಸಹಾಯದಿಂದ ಒಂದು ತುದಿಯಿಂದ ಮತ್ತೊಂದು ತುದಿಗೆ ನೀರುನ್ನು ಒಯ್ಯಲಾಗುತ್ತಿದೆ. ಸಸ್ಯಗಳಿಗೆ ನೀರುಣಿಸಲು ಉದ್ದದ ಪೈಪ್ ಗಳನ್ನು ಬಳಕೆ ಮಾಡುತ್ತಿದ್ದೇವೆ. ಪಕ್ಷಿಗಳು, ಸಣ್ಣ ಪ್ರಾಣಿಗಳು ಮತ್ತು ಕೀಟಗಳ ದಾಹ ನೀಗಿಸಲು ತೊಟ್ಟಿಗಳಲ್ಲಿ ನೀರಿರಿಸಲಾಗುತ್ತಿದೆ ಎಂದು ಉದ್ಯಾನವನದಲ್ಲಿ ಕೆಲಸ ಮಾಡುವ ಸಿಬ್ಬಂದಿಯೊಬ್ಬರು ಹೇಳಿದ್ದಾರೆ.

ಟ್ಯಾಪ್ ಏರೇಟರ್‌ ಅಳವಡಿಕೆಗೆ ಬಿಡಬ್ಲ್ಯೂಎಸ್ಎಸ್'ಬಿ ಗಡುವು

ಈ ನಡುವೆ ನೀರು ವ್ಯರ್ಥವಾಗುವುದನ್ನು ತಪ್ಪಿಸಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಮಾರ್ಚ್ 31ರ ಗಡುವು ನಿಗದಿ ಮಾಡಿದೆ.

ಅಪಾರ್ಟ್ಮೆಂಟ್ ಸಂಕೀರ್ಣಗಳು, ಕೈಗಾರಿಕೆಗಳು ಮತ್ತು ಐಷಾರಾಮಿ ಹೋಟೆಲ್‌ಗಳು ಮಾರ್ಚ್ 31 ರೊಳಗೆ ನಲ್ಲಿಗಳಲ್ಲಿ ಏರೇಟರ್‌ಗಳನ್ನು ಅಳವಡಿಸಬೇಕು. ನಿಯಮ ಪಾಲನೆ ಮಾಡದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com