Metro train ಮಹಿಳಾ ಭದ್ರತಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ: BMRCL ಹಿರಿಯ ಅಧಿಕಾರಿ ವಿರುದ್ಧ FIR

ಬೆಂಗಳೂರು ಮೆಟ್ರೋದಲ್ಲಿ ಮತ್ತೊಂದು ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿದ್ದು, ಈ ಬಾರಿ ಮಹಿಳಾ ಭದ್ರತಾ ಸಿಬ್ಬಂದಿಯೇ ತಮ್ಮ ಹಿರಿಯ ಅಧಿಕಾರಿ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ಸಂಬಂಧ ಎಫ್ ಐಆರ್ ದಾಖಲಿಸಿದ್ದಾರೆ.
ಮೆಟ್ರೋ ಹಳಿ
ಮೆಟ್ರೋ ಹಳಿ
Updated on

ಬೆಂಗಳೂರು: ಬೆಂಗಳೂರು ಮೆಟ್ರೋದಲ್ಲಿ ಮತ್ತೊಂದು ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿದ್ದು, ಈ ಬಾರಿ ಮಹಿಳಾ ಭದ್ರತಾ ಸಿಬ್ಬಂದಿಯೇ ತಮ್ಮ ಹಿರಿಯ ಅಧಿಕಾರಿ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ಸಂಬಂಧ ಎಫ್ ಐಆರ್ ದಾಖಲಿಸಿದ್ದಾರೆ.

ಹೌದು.. ಬೆಂಗಳೂರು ಮೆಟ್ರೋದಲ್ಲಿ ಖಾಸಗಿ ಭದ್ರತಾ ಏಜೆನ್ಸಿಯೊಂದರಲ್ಲಿ ಉದ್ಯೋಗಿಯಾಗಿರುವ ಮಹಿಳಾ ಭದ್ರತಾ ಸಿಬ್ಬಂದಿಯೊಬ್ಬರು ಇತ್ತೀಚೆಗೆ ಬೆಂಗಳೂರು ಮೆಟ್ರೋ ರೈಲು ನಿಗಮದ (ಬಿಎಂಆರ್‌ಸಿಎಲ್) ಹಿರಿಯ ಭದ್ರತಾ ಅಧಿಕಾರಿಯೊಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಸಂಬಂಧ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದೆ.

ಮಾತ್ರವಲ್ಲದೇ ಅಂತಹ ದುರ್ವರ್ತನೆಯನ್ನು ಸಹಿಸಿಕೊಳ್ಳುವಂತೆ ಮತ್ತು ಸಹಕರಿಸುವಂತೆ ಆಕೆಗೆ ಸೂಚಿಸಿದ್ದಕ್ಕಾಗಿ ಎಫ್‌ಐಆರ್ ನಲ್ಲಿ ತನ್ನ ಏಜೆನ್ಸಿಯ ಮಾಲೀಕರನ್ನೂ ಮಹಿಳೆ ಎರಡನೇ ಆರೋಪಿಯಾಗಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಮೆಟ್ರೋ ಹಳಿ
ನಮ್ಮ ಮೆಟ್ರೋ ಅಧಿಕಾರಿಯಿಂದ ಮಹಿಳಾ ಸೆಕ್ಯೂರಿಟಿಗಳಿಗೆ ಲೈಂಗಿಕ ಕಿರುಕುಳ ಆರೋಪ; ಎಫ್ಐಆರ್ ದಾಖಲು

ಮೂಲಗಳ ಪ್ರಕಾರ ದಾಸರಹಳ್ಳಿಯ ನಿವಾಸಿಯಾಗಿರುವ 34 ವರ್ಷದ ಮಹಿಳೆ ವಿಸ್ಡಮ್ ಏಜೆನ್ಸಿಯ ಮಾಜಿ ಉದ್ಯೋಗಿಯಾಗಿದ್ದು, ಇದು ಪರ್ಪಲ್ ಲೈನ್‌ನಲ್ಲಿರುವ ಮೆಟ್ರೋ ನಿಲ್ದಾಣಗಳ ಭದ್ರತಾ ಅಂಶಗಳನ್ನು ನೋಡಿಕೊಳ್ಳುವ ಏಜೆನ್ಸಿಗಳಲ್ಲಿ ಒಂದಾಗಿದೆ. ಮಾರ್ಚ್ 15 ರಂದು ಎಫ್‌ಐಆರ್ ಅನ್ನು ಸೆಕ್ಷನ್ 354A (ದೈಹಿಕ ಸಂಪರ್ಕವನ್ನು ಒಳಗೊಂಡ ಲೈಂಗಿಕ ಕಿರುಕುಳ, ಲೈಂಗಿಕವಾಗಿ ಬಣ್ಣದ ಟೀಕೆಗಳನ್ನು ಮಾಡುವುದು ಇತ್ಯಾದಿ) ಮತ್ತು 504 (ಉದ್ದೇಶಪೂರ್ವಕವಾಗಿ ಇನ್ನೊಬ್ಬ ವ್ಯಕ್ತಿಯನ್ನು ಅವಮಾನಿಸುವುದು), 506 (ಅಪರಾಧದ ಬೆದರಿಕೆ) 509 (ಪದ ಸನ್ನೆ ಅಥವಾ ನಡತೆಯನ್ನು ಅವಮಾನಿಸುವ ಉದ್ದೇಶದಿಂದ ಮಾಡಿದ ಕ್ರಿಯೆ), IPC ಯ 34ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

2023ರ ಆಗಸ್ಟ್ 1 ರಿಂದ ಅಕ್ಟೋಬರ್ 31 ರ ನಡುವೆ ಸಂತ್ರಸ್ಥ ಮಹಿಳಾ ಸಿಬ್ಬಂದಿಯೊಂದಿಗೆ ಅನುಚಿತ ವರ್ತನೆ ನಡೆದಿದೆ ಎಂದು ಹೇಳಲಾಗುತ್ತದೆ. ಘಟನೆಯ ಪ್ರತ್ಯಕ್ಷದರ್ಶಿಯಾಗಿ ಮತ್ತೊಬ್ಬ ಮಹಿಳಾ ಭದ್ರತಾ ಸಿಬ್ಬಂದಿಯನ್ನು ಎಫ್ಐಆರ್ ನಲ್ಲಿ ಉಲ್ಲೇಖಿಸಲಾಗಿದೆ. ಬಿಎಂಆರ್‌ಸಿಎಲ್ ಸಹಾಯಕ ಭದ್ರತಾ ಅಧಿಕಾರಿ ರಾಜಾಜಿ ನಗರ ಮೆಟ್ರೋ ನಿಲ್ದಾಣದಲ್ಲಿ ತನ್ನನ್ನು ನಿಯೋಜಿಸಿದ್ದಾಗ ಆಕೆಗೆ ಅತ್ಯಂತ ಅವಹೇಳನಕಾರಿ ಪದಗಳು ಮತ್ತು ಲೈಂಗಿಕ ಟೀಕೆಗಳನ್ನು ಮಾಡಲಾಗಿತ್ತು ಎಂದು ದೂರಿನಲ್ಲಿ ಹೇಳಲಾಗಿದೆ. ಅಂತೆಯೇ ಅಧಿಕಾರಿಯು ಆಗಾಗ್ಗೆ ಸಂತ್ರಸ್ಥೆಯ ದೇಹವನ್ನು ಸಾರ್ವಜನಿಕವಾಗಿ ವಿವರಿಸುವ ಮತ್ತು ಅವಳನ್ನು ಅನುಚಿತವಾಗಿ ಸ್ಪರ್ಶಿಸುವ ಬಗ್ಗೆಯೂ ಎಫ್ ಐಆರ್ ನಲ್ಲಿ ಉಲ್ಲೇಖವಾಗಿದೆ.

ಮೆಟ್ರೋ ಹಳಿ
ರೈತನಿಗೆ ಮೆಟ್ರೋ ಪ್ರವೇಶ ನಿರಾಕರಣೆ: ಕರ್ನಾಟಕ ಸರ್ಕಾರ, ಬಿಎಂಆರ್‌ಸಿಎಲ್‌ಗೆ NHRC ನೋಟಿಸ್

ಪ್ರಕರಣ ಸಂಬಂಧ ಸಂತ್ರಸ್ಥೆ ಆರಂಭದಲ್ಲಿ ತನ್ನ ಎಜೆನ್ಸಿ ಮಾಲೀಕರಿಗೆ ದೂರು ನೀಡಿದ್ದು, ಈ ಬಗ್ಗೆ ಸಂಸ್ಥೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ. ಅಲ್ಲದೆ ಅಂತಹ ನಡವಳಿಕೆಯೊಂದಿಗೆ ಸಹಕರಿಸಲು ಮತ್ತು ಸಹಿಸಿಕೊಳ್ಳುವಂತೆ ಸಲಹೆ ನೀಡಲಾಯಿತು ಎಂದು ಆರೋಪಿಸಿದ್ದಾರೆ.

ಬಿಎಂಆರ್ ಸಿಎಲ್ ಸ್ಪಷ್ಟನೆ

ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಎಂಆರ್ ಸಿಎಲ್ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಈ ಪ್ರಕರಣದ ಬಗ್ಗೆ ತಮಗೆ ಮಾಹಿತಿ ಇಲ್ಲ. ಆದರೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಸಂಬಂಧ ಪಟ್ಟ ಸಂಸ್ಥೆಯಿಂದ ಈ ಕುರಿತು ಮಾಹಿತಿ ಪಡೆಯುತ್ತೇವೆ.

ವರ್ಗಾವಣೆ ಮಾಡಿದ್ದೇ ಕಾರಣ

ಹಾಲಿ ದೂರುದಾರ ಮಹಿಳೆ ಸೇರಿ ಇತರೆ 13 ಭದ್ರತಾ ಸಿಬ್ಬಂದಿಗಳನ್ನು ಪರ್ಪಲ್ ಲೈನ್‌ನಲ್ಲಿರುವ ಬೇರೆ ಮೆಟ್ರೋ ನಿಲ್ದಾಣಕ್ಕೆ ಪೋಸ್ಟ್ ಮಾಡಲಾಗಿತ್ತು. ಭದ್ರತಾ ಸಿಬ್ಬಂದಿಯನ್ನು ಸ್ಥಳಾಂತರಿಸಲು BMRCL ಏಜೆನ್ಸಿಗೆ ಕೇಳಿತ್ತು. ಆದರೆ ದೂರುದಾರ ಮಹಿಳೆ ಮತ್ತು ಇನ್ನೊಬ್ಬ ಭದ್ರತಾ ಸಿಬ್ಬಂದಿ ಮಾತ್ರ ಹೊಸ ನಿಲ್ದಾಣದಲ್ಲಿ ಕೆಲಸ ಮಾಡಲು ನಿರಾಕರಿಸಿದ್ದು, ಇವರು ಈ ಹಿಂದೆ ಕೆಲಸ ಮಾಡುತ್ತಿದ್ದ ಅದೇ ನಿಲ್ದಾಣದಲ್ಲೇ ಉಳಿಯುವುದಾಗಿ ಹೇಳಿದ್ದರು. ಆದರೆ ಹೊಸ ನಿಲ್ದಾಣಕ್ಕೆ ಹೋಗಲು ಬಿಎಂಆರ್‌ಸಿಎಲ್ ಎರಡು ತಿಂಗಳ ಅವಧಿಯನ್ನು ನೀಡಿತ್ತು. ಗಡುವಿನ ಹೊರತಾಗಿಯೂ ವರ್ಗಾವಣೆಗೆ ನಿರಾಕರಿಸಿದ್ದರಿಂದ ಅಂತಿಮವಾಗಿ ಅವರನ್ನು ವಜಾಗೊಳಿಸಲಾಯಿತು. ಆಕೆ ಅಸಮಾಧಾನ ಮತ್ತು ಹತಾಶೆಯಿಂದಾಗಿ ಅವರು ಎರಡೂ ವ್ಯಕ್ತಿಗಳ ವಿರುದ್ಧ ಇಂತಹ ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ಮತ್ತೊಂದು ಮೂಲ ತಿಳಿಸಿದೆ.

ಈ ಬಗ್ಗೆ ಪೊಲೀಸ್ ತನಿಖೆ ನಡೆಯುತ್ತಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com