ಪಂಚ ಸೂತ್ರಗಳ ಪಾಲಿಸಿ, ನೀರಿನ ಬಳಕೆ ಮಿತಗೊಳಿಸಿ: BWSSB

ನೀರು ಉಳಿಕೆಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಪಂಚ ಸೂತ್ರಗಳ ಅಳವಡಿಸಿಕೊಳ್ಳಲು ಬೆಂಗಳೂರು ಅಪಾರ್ಟ್‌ಮೆಂಟ್ ಫೆಡರೇಶನ್ (BAF) ಸಿದ್ಧವಾಗಿದೆ ಎಂದು ಬಿಡಬ್ಲ್ಯೂಎಸ್ಎಸ್'ಬಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಅವರು ಶನಿವಾರ ಹೇಳಿದರು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ನೀರು ಉಳಿಕೆಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಪಂಚ ಸೂತ್ರಗಳ ಅಳವಡಿಸಿಕೊಳ್ಳಲು ಬೆಂಗಳೂರು ಅಪಾರ್ಟ್‌ಮೆಂಟ್ ಫೆಡರೇಶನ್ (BAF) ಸಿದ್ಧವಾಗಿದೆ ಎಂದು ಬಿಡಬ್ಲ್ಯೂಎಸ್ಎಸ್'ಬಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಅವರು ಶನಿವಾರ ಹೇಳಿದರು.

ಬಿಎಎಫ್ ಸಹಯೋಗದಲ್ಲಿ ಶನಿವಾರ ಇಲ್ಲಿ ಆಯೋಜಿಸಿದ್ದ ಜಲ ಸಂರಕ್ಷಣೆ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬೆಂಗಳೂರು ಅಪಾರ್ಟ್‌ಮೆಂಟ್ ಫೆಡರೇಶನ್ 30 ಕ್ಲಸ್ಟರ್ ಗಳನ್ನು ಹೊಂದಿದ್ದು, ಇದರಲ್ಲಿ 15 ಲಕ್ಷಕ್ಕೂ ಹೆಚ್ಚು ಸದಸ್ಯರಿದ್ದಾರೆ. ಅಪಾರ್ಟ್ ಮೆಂಟ್ ಗಳಲ್ಲಿನ ನಿವಾಸಿಗಳು ಕುಡಿಯುವ ನೀರಿಗಾಗಿ ಬೋರ್‌ವೆಲ್‌, ಟ್ಯಾಂಕರ್‌ ಹಾಗೂ ಕಾವೇರಿಯನ್ನು ಅವಲಂಬಿಸಿದ್ದಾರೆ. ಈ ಅಪಾರ್ಟ್‌ಮೆಂಟ್‌ಗಳಲ್ಲಿ ಸಾಕಷ್ಟು ನೀರಿನ ನಿರ್ವಹಣೆ ಮತ್ತು ಮಧ್ಯಮ ಬಳಕೆಯನ್ನು ಉತ್ತೇಜಿಸಲುೃ BWSSB ರೇಟಿಂಗ್ ನ್ನು ಪ್ರಾರಂಭಿಸಿದೆ.

ನೀರಿನ ಉಳಿತಾಯ, ಸಂಸ್ಕರಿಸಿದ ನೀರಿನ ಬಳಕೆ, ಬೋರ್‌ವೆಲ್ ನೀರು ಬಳಸುವಾಗ ತಂತ್ರಜ್ಞಾನ ಅಳವಡಿಸಿಕೊಳ್ಳುವುದು, ಮಳೆನೀರು ಕೊಯ್ಲು ಘಟಕಗಳ ಸ್ಥಾಪನೆ ಎಂಬ 5 ಸೂತ್ರಗಳನ್ನು ಮಂಡಳಿ ಆರಂಭಿಸಿದೆ. ಈ ಪಂಚಸೂತ್ರಗಳ ಅಳವಡಿಕೆಯಿಂದ ನೀರಿನ ಬಳಕೆಯನ್ನು ಶೇ.30ರಷ್ಟು ಕಡಿಮೆ ಮಾಡಬಹುದು ಎಂದು ಹೇಳಿದರು.

ಸಂಗ್ರಹ ಚಿತ್ರ
ನಲ್ಲಿ ನೀರಿಗೆ ಕೊಳಚೆ ನೀರು ಸೇರ್ಪಡೆ: ನಿವಾಸಿಗಳ ಆಕ್ರೋಶ, ಹಳೆ ಪೈಪ್ ಲೈನ್ ಕಾರಣ ಎನ್ನುತ್ತಿರುವ BWSSB

ಒಬ್ಬ ವ್ಯಕ್ತಿಗೆ ದಿನಕ್ಕೆ ಸುಮಾರು 50 ಲೀಟರ್ ನೀರು ಬೇಕಾಗುತ್ತದೆ. ಶೇ.20ರಷ್ಟು ಸಂಸ್ಕರಿಸಿದ ನೀರನ್ನು ಬಳಸುವುದರಿಂದ ಶೇ.30ರಷ್ಟು ಕಾವೇರಿ ನೀರನ್ನು ಉಳಿಸಬಹುದು. ಉಳಿಸಿದ ನೀರನ್ನು ಸಂಕಷ್ಟ ಪೀಡಿತ ಪ್ರದೇಶಗಳಿಗೆ ಹರಿಸಬಹುದು ಎಂದು ತಿಳಿಸಿದರು.

ಕಾವೇರಿ, ಬೋರ್‌ವೆಲ್‌ಗಳು, ಸಂಸ್ಕರಿಸಿದ ನೀರು ಮತ್ತು ಟ್ಯಾಂಕರ್‌ಗಳಂತಹ ನೀರಿನ ಮೂಲಗಳ ಬಗ್ಗೆ ಬಿಡಬ್ಲ್ಯುಎಸ್‌ಎಸ್‌ಬಿ ಮಾಹಿತಿ ಸಂಗ್ರಹಿಸುತ್ತಿದೆ. ಮಾಹಿತಿ ಆಧರಿಸಿ, BWSSB ಅಪಾರ್ಟ್‌ಮೆಂಟ್‌ಗಳಿಗೆ ಅಗತ್ಯವಿರುವ ನೀರನ್ನು ಪೂರೈಸುತ್ತದೆ.

ಇದೇ ವೇಳೆ ನೀರಿನ ಮೀಟರ್‌ಗಳನ್ನು ಅಳವಡಿಸುವ ಕುರಿತು ಫೆಡರೇಶನ್‌ ಮಾಡಿರುವ ಮನವಿ ಕುರಿತು ಮಾತನಾಡಿ, ನಿಯಮಗಳನ್ನು ತಿದ್ದುಪಡಿ ಮಾಡುವ ಮೂಲಕ ಮೀಟರ್ ಗಳನ್ನು ಅಳವಡಿಸಬಹುದು. ಈ ಬಗ್ಗೆ ಸರ್ಕಾರದ ಗಮನಕ್ಕೆ ತರುವಂತೆ ಬಿಡಬ್ಲ್ಯೂಎಸ್‌ಎಸ್‌ಬಿಗೆ ಮನವಿ ಸಲ್ಲಿಸಿ ಎಂದು ಫೆಡರೇಷನ್ ಸದಸ್ಯರಿಗೆ ಸಲಹೆ ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com