ಪ್ರವಾಸ ಕೈ ಬಿಡಿ, ಮತದಾನ ಮಾಡಿ: ಮತದಾರರಿಗೆ ತುಷಾರ್ ಗಿರಿನಾಥ್ ಮನವಿ

ಬೆಂಗಳೂರು ದಕ್ಷಿಣ, ಮಧ್ಯ ಮತ್ತು ಉತ್ತರ ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 26 (ಶುಕ್ರವಾರ) ಮೊದಲ ಹಂತದ ಮತದಾನ ನಡೆಯಲಿದ್ದು, ಮತದಾರರು ಮತ ಚಲಾಯಿಸುವ ಬದಲು ಪ್ರವಾಸದತ್ತ ಮುಖ ಮಾಡುವ ಸಾಧ್ಯತೆಳಿವೆ...
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್

ಬೆಂಗಳೂರು: ಬೆಂಗಳೂರು ದಕ್ಷಿಣ, ಮಧ್ಯ ಮತ್ತು ಉತ್ತರ ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 26 (ಶುಕ್ರವಾರ) ಮೊದಲ ಹಂತದ ಮತದಾನ ನಡೆಯಲಿದ್ದು, ಮತದಾರರು ಮತ ಚಲಾಯಿಸುವ ಬದಲು ಪ್ರವಾಸದತ್ತ ಮುಖ ಮಾಡುವ ಸಾಧ್ಯತೆಳಿವೆ. ಹೀಗಾಗಿ ನಾಗರಿಕರು ತಪ್ಪದೇ ಮತದಾನ ಮಾಡುವಂತೆ ಉತ್ತೇಜಿಸುವಂತೆ ಹಾಗೂ ಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಸೂಚನೆ ನೀಡಿದ್ದಾರೆ.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆ-2024ಕ್ಕೆ ಸಂಬಂಧಿಸಿದಂತೆ ಬೂತ್ ಮಟ್ಟದ ಅಧಿಕಾರಿಗಳು ಮತ್ತು ಮೇಲ್ವಿಚಾರಕರಿಗೆ ತರಬೇತಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಈ ಹಿಂದಿನ ಚುನಾವಣೆಯಲ್ಲಿ 353 ಮತಗಟ್ಟೆಗಳಲ್ಲಿ ಶೇ.5 ಕ್ಕಿಂತ ಕಡಿಮೆ ಮತದಾನವಾಗಿತ್ತು. ಹೀಗಾಗಿ ಈ ಬಾರಿ ಮತದಾನ ಪ್ರಮಾಣ ಹೆಚ್ಚಿಸಲು ಆಯಾ ಮತಗಟ್ಟೆ ವ್ಯಾಪ್ತಿಯ ಎಲ್ಲಾ ಮನೆಗಳಿಗೆ ಭೇಟಿ ನೀಡಿ ಮತದಾರರಲ್ಲಿ ತಪ್ಪದೇ ಮತದಾನ ಮಾಡುವಂತೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್
ಚುನಾವಣೆ ಎಂಬುದು ಅತಿದೊಡ್ಡ ಪ್ರಕ್ರಿಯೆ: ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ (ಸಂದರ್ಶನ)

ಮನೆ ಮನೆಗೆ ಭೇಟಿ ನೀಡುವ ಸಂದರ್ಭದಲ್ಲಿ ಮೊದಲ ಬಾರಿಯ ಮತದಾರರಿಗೆ ಮತದಾನ ಮಾಡಲು ತಿಳಿಸಿ ಮತ್ತು ಇತರರಿಗೂ ತಪ್ಪದೆ ಮತದಾನ ಮಾಡುವಂತೆ ಪ್ರೋತ್ಸಾಹ ನೀಡಿ ಎಂದು ತಿಳಿಸಿ. ಅಂಗವಿಕಲ ಮತದಾರರು ಮತ್ತು 85 ವರ್ಷ ಮೇಲ್ಪಟ್ಟವರಿಗೆ ಅಂಚೆ ಮತಪತ್ರದ ವ್ಯವಸ್ಥೆ ಇದ್ದು, ನಮೂನೆ 12ಡಿ ಮೂಲಕ ಭರ್ತಿ ಮಾಡಬೇಕು ಎಂದು ಹೇಳಿದರು.

ಮತದಾನದ ದಿನಾಂಕಕ್ಕಿಂತ 10 ದಿನಗಳ ಮೊದಲು ಪ್ರತಿ ಮನೆಗೆ ಮತದಾರರ ಚೀಟಿಯನ್ನು ತಪ್ಪದೆ ತಲುಪಿಸಬೇಕು. ಈ ಬಾರಿ ಮತದಾರರ ಚೀಟಿಯಲ್ಲಿ ಮತಗಟ್ಟೆ ಇರುವ ಸ್ಥಳ ಸೂಚಿಸುವ ಬಾರ್ ಕೋಡ್ ಇರಲಿದ್ದು, ಈ ಬಗ್ಗೆ ಮತದಾರರಿಗೆ ಮಾಹಿತಿ ನೀಡಬೇಕು. ಜೊತೆಗೆ ಚುನಾವಣಾ ದಿನಾಂಕ ಮುದ್ರಿತವಾಗಿರುವ ಚೀಟಿಗಳನ್ನು ಪ್ರತಿ ಮನೆಗೂ ತಲುಪಿಸಿ, ಮತ ಹಾಕುವಂತೆ ಪ್ರೇರೇಪಿಸಬೇಕು ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com