ರಾತ್ರಿ ವೇಳೆ ಕಟ್ಟಡ ನಿರ್ಮಾಣ ಮಾಡಿ ಬಿಲ್ಡರ್‌ಗಳು ನಿಯಮ ಉಲ್ಲಂಘಿಸುತ್ತಿದ್ದಾರೆ: ವೈಟ್‌ಫೀಲ್ಡ್ ನಿವಾಸಿಗಳ ಆರೋಪ

ರಾತ್ರಿ ವೇಳೆ ಯಾವುದೇ ಕಾಮಗಾರಿ ನಡೆಸುವಂತಿಲ್ಲ ಎಂಬ ಬಿಬಿಎಂಪಿ ನಿಯಮಾವಳಿಯನ್ನು ಬಿಲ್ಡರ್‌ಗಳು ಉಲ್ಲಂಘಿಸುತ್ತಿದ್ದಾರೆ ಎಂದು ವೈಟ್‌ಫೀಲ್ಡ್ ನಿವಾಸಿಗಳು ಮಹದೇವಪುರ ವಲಯದ ಜಂಟಿ ಆಯುಕ್ತರಿಗೆ ದೂರು ನೀಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾತ್ರಿ ವೇಳೆ ಯಾವುದೇ ಕಾಮಗಾರಿ ನಡೆಸುವಂತಿಲ್ಲ ಎಂಬ ಬಿಬಿಎಂಪಿ ನಿಯಮಾವಳಿಯನ್ನು ಬಿಲ್ಡರ್‌ಗಳು ಉಲ್ಲಂಘಿಸುತ್ತಿದ್ದಾರೆ ಎಂದು ವೈಟ್‌ಫೀಲ್ಡ್ ನಿವಾಸಿಗಳು ಮಹದೇವಪುರ ವಲಯದ ಜಂಟಿ ಆಯುಕ್ತರಿಗೆ ದೂರು ನೀಡಿದ್ದಾರೆ.

ಸೋಮವಾರ ಸಂಜೆ 7 ಗಂಟೆ ಸುಮಾರಿಗೆ ವೈಟ್‌ಫೀಲ್ಡ್ ರಸ್ತೆಯ ಇಸಿಸಿ ರಸ್ತೆಯಲ್ಲಿ ಶಬ್ದ ಮಾಲಿನ್ಯದ ಜೊತೆಗೆ ನಿರ್ಮಾಣ ಚಟುವಟಿಕೆ ಕಂಡುಬಂದಿತ್ತು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಾರ್ಯಕರ್ತ ಸಂದೀಪ್ ಅನಿರುಧನ್ ಆರೋಪಿಸಿದ್ದಾರೆ.

2012 ರಲ್ಲಿ, ಕರ್ನಾಟಕ ಹೈಕೋರ್ಟ್ ಶಬ್ದ ಮಾಲಿನ್ಯ ನಿಯಮಗಳನ್ನು ಪರಿಗಣಿಸಿ, ನಿರ್ಮಾಣ ಕಾರ್ಯವನ್ನು ವನ್ನು ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ಮಾತ್ರ ನಡೆಸಬಹುದು ಎಂದು ಆದೇಶಿಸಿತ್ತು.

ಸಂಗ್ರಹ ಚಿತ್ರ
ಅಕ್ರಮ ಕಟ್ಟಡ ನಿರ್ಮಾಣ ತಪ್ಪಿಸಲು ಬಿಬಿಎಂಪಿ - ಹೈಕೋರ್ಟ್ ಮೆಟ್ಟಿಲೇರಿದ ಟೆಕ್ಕಿ: ವ್ಯಾಪಕ ಶ್ಲಾಘನೆ

ಆದೇಶದ ನಡುವಲ್ಲೂ ಮಂಗಳವಾರ ಮಧ್ಯರಾತ್ರಿ 1 ಗಂಟೆಯವರೆಗೆ ನಿರ್ಮಾಣ ಚಟುವಟಿಕೆ ನಡೆದಿದೆ, ಬಿಲ್ಡರ್‌ಗಳಿಗೆ ಕೆಲ ರಾಜಕೀಯ ನಾಯಕರ ಸಂಪರ್ಕವಿದೆ ಎಂದೆನಿಸತ್ತಿದೆ. ಈ ಬಗ್ಗೆ ಉನ್ನತ ಅಧಿಕಾರಿಗಳು ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಜಂಟಿ ಆಯುಕ್ತೆ ಕೆ ದಾಕ್ಷಾಯಿಣಿ ಮಾತನಾಡಿ, ಯಾವುದೇ ಉಲ್ಲಂಘನೆ ಕಂಡುಬಂದಲ್ಲಿ ಅಧಿಕಾರಿಗಳು ಮಧ್ಯ ಪ್ರವೇಶಿಸಿಬಹುದು. ಈ ಸಂಬಂಧ ಪರಿಶೀಲನೆ ನಡೆಸುವಂತೆ ಹಾಗೂ ಸ್ಥಳೀಯ ಪೊಲೀಸರೊಂದಿಗೆ ಸಹಕಾರ ನೀಡುವಂತೆಎಂಜಿನಿಯರ್‌ಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.

ಸ್ಥಳಕ್ಕೆ ಬಿಬಿಎಂಪಿ ಎಂಜಿನಿಯರ್‌ಗಳನ್ನು ಕರೆದೊಯ್ದು ತನಿಖೆ ನಡೆಸುತ್ತೇವೆ ಎಂದು ವೈಟ್‌ಫೀಲ್ಡ್ ವಲಯದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com