ಮಳೆಗಾಲ ಪರಿಸ್ಥಿತಿ ಎದುರಿಸಲು ಬಿಬಿಎಂಪಿ ಸಜ್ಜು: ರಾಜಕಾಲುವೆಗಳಲ್ಲಿ 'ಆಪರೇಷನ್‌ ಕ್ಲೀನಿಂಗ್‌' ಆರಂಭ!

ಮಳೆ ಬಂದಾಗ ರಾಜಕಾಲುವೆ ಹುಳು ತೆಗೆಯಲು ಮುಂದಾಗಿ ಜನರಿಂದ ಹಿಡಿಶಾಪ ಹಾಕಿಸಿಕೊಳ್ಳುತ್ತಿದ್ದ ಬಿಬಿಎಂಪಿ, ಈ ಬಾರ ಎಚ್ಚೆತ್ತುಕೊಂಡು ಬೇಸಿಗೆಯಲ್ಲೇ ರಾಜಕಾಲುವೆಗಳಲ್ಲಿ ಆಪರೇಷನ್‌ ಕ್ಲೀನಿಂಗ್‌ ಕಾರ್ಯಾಚರಣೆಯನ್ನು ಆರಂಭಿಸಿದೆ.
ಚಲ್ಲಘಟ್ಟ ವ್ಯಾಲಿ
ಚಲ್ಲಘಟ್ಟ ವ್ಯಾಲಿ

ಬೆಂಗಳೂರು: ಮಳೆ ಬಂದಾಗ ರಾಜಕಾಲುವೆ ಹುಳು ತೆಗೆಯಲು ಮುಂದಾಗಿ ಜನರಿಂದ ಹಿಡಿಶಾಪ ಹಾಕಿಸಿಕೊಳ್ಳುತ್ತಿದ್ದ ಬಿಬಿಎಂಪಿ, ಈ ಬಾರ ಎಚ್ಚೆತ್ತುಕೊಂಡು ಬೇಸಿಗೆಯಲ್ಲೇ ರಾಜಕಾಲುವೆಗಳಲ್ಲಿ ಆಪರೇಷನ್‌ ಕ್ಲೀನಿಂಗ್‌ ಕಾರ್ಯಾಚರಣೆಯನ್ನು ಆರಂಭಿಸಿದೆ.

ಪೂರ್ವದಿಂದ ಆಗ್ನೇಯ ಬೆಂಗಳೂರಿಗೆ ಹರಿಯುವ ಚಲ್ಲಘಟ್ಟ ವ್ಯಾಲಿಯನ್ನು ಸಂಪರ್ಕಿಸುವ ರಾಜಕಾಲುವೆಯಲ್ಲಿ ಬಿಬಿಎಂಪಿ ಬೃಹತ್ ಸ್ವಚ್ಛತಾ ಕಾರ್ಯವನ್ನು ಕೈಗೆತ್ತಿಕೊಂಡಿದೆ.

ಬಿಬಿಎಂಪಿ ಎಸ್‌ಡಬ್ಲ್ಯುಡಿ ವಿಭಾಗದ ಪ್ರಧಾನ ಎಂಜಿನಿಯರ್ ಮತ್ತು ಉಸ್ತುವಾರಿ ಬಿಎಸ್ ಪ್ರಹಲ್ಲಾದ್ ಅವರು ಮಾತನಾಡಿ, ಮಳೆಗಾಲ ಹತ್ತಿರ ಬರುತ್ತಿದ್ದು, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಎಲ್ಲಾ ಚರಂಡಿಗಳನ್ನು ಸ್ವಚ್ಛಗೊಳಿಸುವಂತೆ ನಿರ್ದೇಶನಗಳನ್ನು ನೀಡಿದ್ದಾರೆ. ಎಸ್‌ಡಬ್ಲ್ಯೂಡಿ ಎಂಜಿನಿಯರ್‌ಗಳಿಗೆ ಸೂಚನೆಗಳನ್ನು ನೀಡಲಾಗಿದೆ.

ಬೆಂಗಳೂರು ನಾಗರಿಕರ ಜಲ ಮಾರ್ಗ ಯೋಜನೆ (ಕೆ-100)ಯಂತೆ ಕೋರಮಂಗಲ ವ್ಯಾಲಿಗೆ ಯಾವುದೇ ಕೊಳಚೆನೀರು ಹೋಗದಂತೆ ನೀರು ಹರಿಯುವುದನ್ನು ಖಚಿತಪಡಿಸಿಕೊಳ್ಳಲು ಬಿಬಿಎಂಪಿ ಚಲ್ಲಘಟ್ಟ ವ್ಯಾಲಿ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಮಳೆನೀರು ಚರಂಡಿಯ ಉದ್ದಕ್ಕೂ ಪೈಪ್‌ಗಳಿಂದ ಯಾವುದೇ ಒಳಚರಂಡಿ ನೀರು ಸೋರಿಕೆಯಾಗದಂತೆ ನೋಡಿಕೊಳ್ಳಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯೊಂದಿಗೆ (BWSSB) ಕೆಲಸ ಮಾಡಲಾತ್ತಿದೆ. ಬಿಡಬ್ಲ್ಯುಎಸ್‌ಎಸ್‌ಬಿ ಪೈಪ್‌ಗಳನ್ನು ಸರಿಪಡಿಸಿದ ನಂತರ, ನಮ್ಮ ಎಂಜಿನಿಯರ್‌ಗಳು ಯಂತ್ರೋಪಕರಣಗಳೊಂದಿಗೆ 1,000 ಟನ್ ಹೂಳನ್ನು ತೆರವುಗೊಳಿಸಿದ್ದಾರೆಂದು ಹೇಳಿದ್ದಾರೆ.

ಚಲ್ಲಘಟ್ಟ ವ್ಯಾಲಿ
ಬೆಂಗಳೂರು: ವಿಭೂತಿಪುರ ಕೆರೆಯ ಹೂಳು ತೆಗೆಯದ ಬಿಬಿಎಂಪಿ ವಿರುದ್ಧ ಪರಿಸರವಾದಿಗಳ ಆಕ್ರೋಶ

ಅಸ್ಸೇ ರಸ್ತೆಯ ರಾಜಕಾಲುವೆಯಲ್ಲಿ ಸ್ವಚ್ಛತಾ ಕಾರ್ಯ ನಡೆಸುವುದರಿಂದ ಹಾಗೂ ಬಿಡಬ್ಲ್ಯೂಎಸ್‌ಎಸ್‌ಬಿ ಪೈಪ್‌ಗಳನ್ನು ಸರಿಪಡಿಸುವುದರಿಂದ ಭವಿಷ್ಯದಲ್ಲಿ ಹಲಸೂರು ಕೆರೆಗೆ ಕೊಳಚೆ ನೀರು ಹರಿಯುವುದಿಲ್ಲ ಎಂದು ತಿಳಿಸಿದ್ದಾರೆ.

ದೊಮ್ಮಲೂರು ಮತ್ತು ಜೀವನ್ ಬಿಮಾನಗರದಂತಹ ಪ್ರದೇಶಗಳಲ್ಲಿನ ಕೊಳಚೆ ನೀರು ಚಲ್ಲಘಟ್ಟ ವ್ಯಾಲಿಯ ಕೆಳಭಾಗಕ್ಕೆ ಹರಿಯುವುದರಿಂದ ಪ್ರಮುಖ ಚರಂಡಿಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. ಇತರೆ ರಾಜಕಾಲುವೆಗೆ ಹೋಲಿಕೆ ಮಾಡಿದರೆ, ವೃಷಭಾವತಿ ವ್ಯಾಲಿಯನ್ನು ಸಂಪರ್ಕಿಸುವ ರಾಜಕಾಲುವೆ ಹೆಚ್ಚು ಕಲುಷಿತವಾಗಿದೆ. ಹೀಗಾಗಿ ಅಲ್ಲಿ ಬೃಹತ್ ಸ್ವಚ್ಛತಾ ಕಾರ್ಯ ನಡೆಸಲು ಚಿಂತನೆ ನಡೆಯುತ್ತಿದೆ. ಆದರೆ, ಆದ್ಯತೆ ಮೇರೆಗೆ ಕಾಮಗಾರಿ ಕೈಗೆತ್ತಿಕೊಳ್ಳುವಂತ ಆದೇಶಿಸಿರುವುದರಿಂದ ಚಲ್ಲಘಟ್ಟ ಕಣಿವೆಯಲ್ಲಿ ಕಾಮಗಾರಿ ಆರಂಭಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಬಿಬಿಎಂಪಿಯ ಕಾರ್ಯವೈಖರಿಯನ್ನು ಫ್ರೇಜರ್ ಟೌನ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಖೈಸರ್ ಅಹಮದ್ ಅವರು ಶ್ಲಾಘಿಸಿದ್ದಾರೆ.

ಅಸ್ಸೇ ರಸ್ತೆಯ ಮಳೆನೀರು ಚರಂಡಿಯಲ್ಲಿ ಹೂಳು ತುಂಬುವುದರಿಂದ ಹಲಸೂರು ಬಳಿಯ ರಸ್ತೆಗಳು, ಸುಂದರ ಮೂರ್ತಿ ರಸ್ತೆ, ಪ್ರೋಮೆನೇಡ್ ರಸ್ತೆ, ಸಿಂಧಿ ಕಾಲೋನಿ ರಸ್ತೆಗಳು ಪ್ರತೀ ಬಾರಿ ಮಳೆಯಾದಾಗಲೂ ಜಲಾವೃತಗೊಳ್ಳುತ್ತಿದ್ದವು. ಮಳೆ ನಿಂತ ನಂತರ ನೀರು ಕಡಿಮೆಯಾಗಲು ಕನಿಷ್ಠ ಎರಡು ಗಂಟೆ ಸಮಯ ಬೇಕಾಗುತ್ತಿತ್ತು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com