ಬೆಂಗಳೂರಿನಲ್ಲಿ ಮಳೆ ಅವಾಂತರ: ರಸ್ತೆಗಳು ಜಲಾವೃತ, ಸಂಚಾರ ಅಸ್ತವ್ಯಸ್ತ

ಬುಧವಾರ ಸಂಜೆ ಸುರಿದ ಮಳೆಗೆ ಬೆಂಗಳೂರಿನ ರಸ್ತೆಗಳು ಜಲಾವೃತಗೊಂಡು ವಾಹನ ಸವಾರರು ಪರದಾಡುವಂತಾಯಿತು. ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ನಗರದಲ್ಲಿ ಸರಾಸರಿ 17.9 ಮಿಮೀ ಮಳೆಯಾಗಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ
Updated on

ಬೆಂಗಳೂರು: ಬುಧವಾರ ಸಂಜೆ ಸುರಿದ ಮಳೆಗೆ ಬೆಂಗಳೂರಿನ ರಸ್ತೆಗಳು ಜಲಾವೃತಗೊಂಡು ವಾಹನ ಸವಾರರು ಪರದಾಡುವಂತಾಯಿತು. ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ನಗರದಲ್ಲಿ ಸರಾಸರಿ 17.9 ಮಿಮೀ ಮಳೆಯಾಗಿದೆ.

ಬೆಂಗಳೂರು ಟ್ರಾಫಿಕ್ ಪೊಲೀಸರ ಪ್ರಕಾರ, ಮಳೆ ಮತ್ತು ಜಲಾವೃತದಿಂದಾಗಿ ಜಯಮಹಲ್ ರಸ್ತೆ, ವೀರಣ್ಣ ಪಾಳ್ಯದಿಂದ ಹೆಬ್ಬಾಳ ವೃತ್ತ, ಬೆನ್ನಿಗಾನಹಳ್ಳಿ ರೈಲ್ವೆ ಸೇತುವೆ ಮತ್ತು ಇತರೆಡೆ ಸಂಜೆ 5.30 ರಿಂದ 6.45ರ ನಡುವೆ ನಿಧಾನಗತಿಯ ಸಂಚಾರ ವರದಿಯಾಗಿದೆ. ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲು ಸಂಚಾರಿ ಪೊಲೀಸ್ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ.

ಕಾಮಾಕ್ಷಿ ಪಾಳ್ಯ ಸಂಚಾರ ಪೊಲೀಸರು ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಹೊಂಡದಲ್ಲಿ ತುಂಬಿಕೊಂಡಿದ್ದ ಹೂಳು ಮತ್ತು ಕಸವನ್ನು ತೆರವುಗೊಳಿಸಿದರು. ಹೈಗ್ರೌಂಡ್ಸ್ ಪೊಲೀಸ್ ಠಾಣಾ ವ್ಯಾಪ್ತಿಯ ತಿಮ್ಮಯ್ಯ ರಸ್ತೆಯಲ್ಲಿ ಮತ್ತು ಬ್ಯಾಡರಹಳ್ಳಿ ಪೊಲೀಸ್ ವ್ಯಾಪ್ತಿಯ ಅಂಜನಾ ನಗರದಲ್ಲಿ ಮರವೊಂದು ಆಟೋರಿಕ್ಷಾ ಮೇಲೆ ಬಿದ್ದಿದೆ.

ಪ್ರಾತಿನಿಧಿಕ ಚಿತ್ರ
ಬೆಂಗಳೂರಿನಲ್ಲಿ 10.5 ಮಿ.ಮೀ ಮಳೆ; ಗೋಡೆ ಕುಸಿದು ಬಾಲಕಿ ಸ್ಥಿತಿ ಗಂಭೀರ; ಮುಂದಿನ 48 ಗಂಟೆ ಕಾಲ ಭಾರೀ ವರ್ಷಧಾರೆ ಮುನ್ಸೂಚನೆ

ತೀವ್ರ ಗಾಳಿಯಿಂದಾಗಿ ಮರಗಳು ಮತ್ತು ಕೊಂಬೆಗಳು ಬೀಳುವ ಕುರಿತು ಬಿಬಿಎಂಪಿ ನಿಯಂತ್ರಣ ಕೊಠಡಿಗೆ 152 ದೂರುಗಳು ಬಂದಿದ್ದು, 40 ತುರ್ತು ಆಧಾರದ ಮೇಲೆ ದಾಖಲಾಗಿವೆ.

ವರುಣಮಿತ್ರ ಆ್ಯಪ್ ಪ್ರಕಾರ, ಆರ್‌ಆರ್ ನಗರದ ದೊಡ್ಡಬಿದರಕಲ್ಲುವಿನಲ್ಲಿ 66ಮಿ.ಮೀ, ಪಶ್ಚಿಮ ವಲಯದ ನಾಯಂಡಹಳ್ಳಿ 51.50ಮಿ.ಮೀ, ರಾಜರಾಜೇಶ್ವರಿ ನಗರ ವಾರ್ಡ್ 51ಮಿ.ಮೀ, ಮಾರುತಿ ಮಂದಿರ ವಾರ್ಡ್ 41ಮಿ.ಮೀ, ದಕ್ಷಿಣ ವಲಯದ ವಿದ್ಯಾಪೀಠ 37.50ಮಿ.ಮೀ, ವಿ ನಾಗೇನಹಳ್ಳಿ 30.5.0ಮಿಮೀ, ಕೆಂಗೇರಿಯಲ್ಲಿ 24 ಮಿ.ಮೀ ಮತ್ತು ಬೊಮ್ಮನಹಳ್ಳಿ ವಲಯದ ಗೊಟ್ಟಿಗೆರೆಯಲ್ಲಿ ಬುಧವಾರ ಸಂಜೆ 22 ಮಿ.ಮೀ ಮಳೆ ದಾಖಲಾಗಿದೆ.

ಪ್ರಾತಿನಿಧಿಕ ಚಿತ್ರ
ಬೆಂಗಳೂರು ಸೇರಿ ಸುತ್ತಮುತ್ತ ಜಿಲ್ಲೆಗಳಲ್ಲಿ ಇಂದು ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಕರ್ನಾಟಕದ ದಕ್ಷಿಣ ಒಳನಾಡು, ಕರಾವಳಿಯಲ್ಲಿ ಮಳೆ

ಚಂಡಮಾರುತದ ಪರಿಚಲನೆಯು ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಮಳೆಗೆ ಕಾರಣವಾಗಲಿದೆ. ಸದ್ಯದ ಹವಾಮಾನ ಪರಿಸ್ಥಿತಿಗಳ ಕಾರಣ, ಮುಂದಿನ ಏಳು ದಿನಗಳ ಕಾಲ ಗುಡುಗು ಸಹಿತ ಮಳೆಯ ಎಚ್ಚರಿಕೆಯನ್ನು ನೀಡಲಾಗಿದೆ. ಮೇ 8 ಮತ್ತು ಮೇ 11 ರ ನಡುವೆ ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವು ಸ್ಥಳಗಳಲ್ಲಿ ಸಾಧಾರಣ ಮಳೆಯಾಗಲಿದೆ ಮತ್ತು ಮೇ 12 ರಿಂದ ಕರ್ನಾಟಕದಾದ್ಯಂತ ಸಾಧಾರಣ ಮಳೆಯನ್ನು ನಿರೀಕ್ಷಿಸಬಹುದು ಎಂದು ಹವಾಮಾನ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com