ಕೊಡಗು: ನಿಶ್ಚಿತಾರ್ಥ ಕ್ಯಾನ್ಸಲ್ ಬೆನ್ನಲ್ಲೆ SSLC ವಿದ್ಯಾರ್ಥಿನಿಯ ತಲೆ ಕಡಿದಿದ್ದ ಆರೋಪಿಯ ಮೃತದೇಹ ಪತ್ತೆ

ನಿಶ್ಚಿತಾರ್ಥ ಕ್ಯಾನ್ಸಲ್ ಆದ ಕೋಪದಲ್ಲಿ ಎಸ್​ಎಸ್​ಎಲ್​ಸಿ ವಿದ್ಯಾರ್ಥಿನಿಯ ಹತ್ಯೆ ಮಾಡಿ ಆಕೆಯ ತಲೆ ಕೊಂಡೊಯ್ದಿದ್ದ ಆರೋಪಿ 35 ವರ್ಷದ ಪ್ರಕಾಶ್ ಓಂಕಾರಪ್ಪ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮೀನಾ-ಪ್ರಕಾಶ್ ಓಂಕಾರಪ್ಪ
ಮೀನಾ-ಪ್ರಕಾಶ್ ಓಂಕಾರಪ್ಪ

ಕೊಡಗು: ನಿಶ್ಚಿತಾರ್ಥ ಕ್ಯಾನ್ಸಲ್ ಆದ ಕೋಪದಲ್ಲಿ ಎಸ್​ಎಸ್​ಎಲ್​ಸಿ ವಿದ್ಯಾರ್ಥಿನಿಯ ಹತ್ಯೆ ಮಾಡಿ ಆಕೆಯ ತಲೆ ಕೊಂಡೊಯ್ದಿದ್ದ ಆರೋಪಿ 35 ವರ್ಷದ ಪ್ರಕಾಶ್ ಓಂಕಾರಪ್ಪ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿಯಲ್ಲಿ ನಿನ್ನೆ ಈ ಘಟನೆ ನಡೆದಿತ್ತು. ಕೊಲೆ ಬಳಿಕ ಪ್ರಕಾಶ್ ಓಂಕಾರಪ್ಪ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ವಿದ್ಯಾರ್ಥಿನಿ ಮೀನಾ ಹತ್ಯೆ ಮಾಡಿದ ನಂತರ ಆಕೆಯ ತಲೆಯನ್ನು ಪ್ರಕಾಶ್ ಕೊಂಡೊಯ್ದಿದ್ದನು. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿ ಪತ್ತೆಯಾಗಿ ಶೋಧಕಾರ್ಯ ಆರಂಭಿಸಿತ್ತು. ಸುದೀರ್ಘ 18 ಗಂಟೆಗಳ ಕಾರ್ಯಾಚರಣೆ ಬಳಿಕ ಇದೀಗ ಸೂರ್ಲಬ್ಬಿ ಗ್ರಾಮದಿಂದ 3 ಕಿ.ಮೀ. ದೂರದ ಹಮ್ನಿಯಾಲದಲ್ಲಿ ಪ್ರಕಾಶ್ ಅಲಿಯಾಸ್ ಓಂಕಾರಪ್ಪ ಮೃತದೇಹ ಪತ್ತೆಯಾಗಿದೆ. ಆದರೆ ವಿದ್ಯಾರ್ಥಿನಿಯ ರುಂಡ ಇನ್ನು ಪತ್ತೆಯಾಗಿಲ್ಲ.

ಮೀನಾ ಸೂರ್ಲಬ್ಬಿ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು ನಿನ್ನೆ ಎಸ್ಎಸ್​ಎಲ್​ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿ ಉತ್ತಮ ಅಂಕ ಪಡೆದು ಪಾಸಾಗಿದ್ದಳು. ​ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಪಾಸಾದ ಖುಷಿಯಲ್ಲಿ ಮೀನಾ ಮತ್ತು ಆಕೆಯ ಪೋಷಕರು ಇದ್ದರು. ಆದರೆ ಈ ಖುಷಿ ಹೆಚ್ಚು ಹೊತ್ತು ಇರಲಿಲ್ಲ. ನಿನ್ನೆ ಸಾಯಂಕಾಲ ತನ್ನ ಮನೆಯ ಮುಂದೆಯೇ ದಾರುಣವಾಗಿ ಹತ್ಯೆಗೀಡಾಗಿದ್ದಳು. ಆರೋಪಿ ಓಂಕಾರಪ್ಪ ಸಾಯಂಕಾಲ ಸಮಯದಲ್ಲಿ ಮೀನಾಳನ್ನು ಆಕೆಯ ಮನೆಗೆ ಬಂದು ಪೋಷಕರ ಎದುರೇ ಎಳೆದುಕೊಂಡು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ, ಮಚ್ಚಿನಿಂದ ತಲೆ ಕತ್ತರಿಸಿ ರುಂಡ-ಮುಂಡ ಬೇರ್ಪಡಿಸಿ ವಿಕೃತಿ ಮೆರೆದು ಪರಾರಿಯಾಗಿದ್ದನು.

ಮೀನಾ-ಪ್ರಕಾಶ್ ಓಂಕಾರಪ್ಪ
ಬೆಚ್ಚಿಬೀಳಿಸುವ ಘಟನೆ: 10ನೇ ತರಗತಿ ಪಾಸಾದ ಖುಷಿಯಲ್ಲಿದ್ದ ಬಾಲಕಿಯ ರುಂಡ ಕತ್ತರಿಸಿ ಪರಾರಿಯಾದ ಪಾಪಿ!

ಕೊಲೆ ನಡೆದಿದ್ದೇಕೆ?:

ಓಂಕಾರಪ್ಪನೊಂದಿಗೆ ಮೀನಾಳ ನಿಶ್ಚಿತಾರ್ಥ ನಿನ್ನೆ ನಡೆಯಬೇಕಾಗಿತ್ತಂತೆ. ಈ ವಿಚಾರ ತಿಳಿದ ಗ್ರಾಮಸ್ಥರು ಪೊಲೀಸರು ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದರು. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ 18 ವರ್ಷ ತುಂಬಿದ ಮೇಲಷ್ಟೇ ಮದುವೆ ಮಾಡಲು ಸಾಧ್ಯ ಎಂದು ಬುದ್ದಿವಾದ ಹೇಳಿ ಹೋಗಿದ್ದರು. ಪೊಲೀಸರು ಕೂಡ ನಿಶ್ಚಿತಾರ್ಥ ನಿಲ್ಲಿಸಿದ್ದರು. ಎರಡೂ ಕುಟುಂಬದವರು ತಮ್ಮ ತಮ್ಮ ಮನೆಗೆ ತೆರಳಿದ್ದಾರೆ. ಆದರೆ ಆರೋಪಿ ಸಿಟ್ಟಿನಲ್ಲಿ ಮೀನಾಳನ್ನು ಕೊಲೆಗೈದಿದ್ದಾನೆ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com