Bengaluru rave party: ತೆಲುಗು ನಟಿ ಸೇರಿದಂತೆ 86 ಮಂದಿ ಮಾದಕ ದ್ರವ್ಯ ಸೇವನೆ ದೃಢ, ರಕ್ತದ ಮಾದರಿ ಪರೀಕ್ಷೆ ಪಾಸಿಟಿವ್!

ಮೂಲಗಳ ಪ್ರಕಾರ ಬರ್ತ್ ಡೇ ಪಾರ್ಟಿ ನೆಪದಲ್ಲಿ ಆಯೋಜಿಸಲಾಗಿದ್ದ ರೇವ್ ಪಾರ್ಟಿಯಲ್ಲಿ ಒಟ್ಟು 103 ಮಂದಿ ಪಾಲ್ಗೊಂಡಿದ್ದರು. ಭಾಗವಹಿಸಿದವರಲ್ಲಿ 73 ಪುರುಷರು ಮತ್ತು 30 ಮಹಿಳೆಯರು ಸೇರಿದ್ದಾರೆ.
Bengaluru rave party
ಬೆಂಗಳೂರು ರೇವ್ ಪಾರ್ಟಿ

ಬೆಂಗಳೂರು: ಇತ್ತೀಚೆಗೆ ಬೆಂಗಳೂರು ಹೊರ ವಲಯದ ಫಾರ್ಮ್‌ಹೌಸ್‌ನಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ಭಾಗವಹಿಸಿದ್ದವರ ರಕ್ತದ ಮಾದರಿಗಳ ಫಲಿತಾಂಶ ಬಂದಿದ್ದು, ತೆಲುಗು ಚಿತ್ರರಂಗದ ನಟಿ ಸೇರಿದಂತೆ 86 ಮಂದಿ ಮಾದಕ ದ್ರವ್ಯ ಸೇವಿಸಿರುವುದು ದೃಢಪಟ್ಟಿದೆ ಎಂದು ಪೊಲೀಸ್ ಮೂಲಗಳು ಗುರುವಾರ ತಿಳಿಸಿವೆ.

ಮೂಲಗಳ ಪ್ರಕಾರ ಬರ್ತ್ ಡೇ ಪಾರ್ಟಿ ನೆಪದಲ್ಲಿ ಆಯೋಜಿಸಲಾಗಿದ್ದ ರೇವ್ ಪಾರ್ಟಿಯಲ್ಲಿ ಒಟ್ಟು 103 ಮಂದಿ ಪಾಲ್ಗೊಂಡಿದ್ದರು. ಭಾಗವಹಿಸಿದವರಲ್ಲಿ 73 ಪುರುಷರು ಮತ್ತು 30 ಮಹಿಳೆಯರು ಸೇರಿದ್ದಾರೆ.

Bengaluru rave party
ಬೆಂಗಳೂರು: ಬರೀ ರೇವ್ ಪಾರ್ಟಿ ಅಲ್ಲ, ಸೆಕ್ಸ್ ದಂಧೆಯೂ ಇತ್ತೆ?; ತನಿಖೆ CCBಗೆ ವರ್ಗಾವಣೆ

ಮೇ 19 ರಂದು ಬೆಳ್ಳಂಬೆಳಗ್ಗೆ ಎಲೆಕ್ಟ್ರಾನಿಕ್ ಸಿಟಿ ಬಳಿಯ ಫಾರ್ಮ್‌ಹೌಸ್‌ನಲ್ಲಿ ದಾಳಿ ನಡೆಸಿದ ಪೊಲೀಸರು 1.5 ಕೋಟಿ ಮೌಲ್ಯದ MDMA (Ecstacy) ಮಾತ್ರೆಗಳು, ಹೈಡ್ರೋ ಗಾಂಜಾ, ಕೊಕೇನ್, ಹೈ ಎಂಡ್ ಕಾರುಗಳು, DJ ಉಪಕರಣಗಳು, ಧ್ವನಿ ಮತ್ತು ಬೆಳಕು ಉಪಕರಣಗಳು ಸೇರಿದಂತೆ 1.5 ಕೋಟಿ ರೂ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದರು.

ದಾಳಿಯ ನಂತರ, ಪೊಲೀಸರು ಖಾಸಗಿ ಆಸ್ಪತ್ರೆಯಲ್ಲಿ ಭಾಗವಹಿಸಿದವರ ರಕ್ತದ ಮಾದರಿಗಳನ್ನು ಸಂಗ್ರಹಿಸಿದರು, ಇದರಲ್ಲಿ 59 ಪುರುಷರು ಮತ್ತು 27 ಮಹಿಳೆಯರು ಮಾದಕ ದ್ರವ್ಯ ಪರೀಕ್ಷಾ ಫಲಿತಾಂಶ ಪಾಸಿಟಿವ್ ಬಂದಿದ್ದು, ಅವರು ಮಾದಕ ವಸ್ತು ಸೇವಿಸಿದ್ದಾರೆ ಎಂದು ದೃಢಪಟ್ಟಿದೆ ಎಂದು ತಿಳಿದುಬಂದಿದೆ.

"ಪಾರ್ಟಿಗೆ ಹಾಜರಾದ ಹೆಚ್ಚಿನ ಜನರು ಡ್ರಗ್ಸ್ ಸೇವಿಸುತ್ತಿದ್ದರು. ಪ್ರಸ್ತುತ ಪಾಸಿಟಿವ್ ಬಂದಿರುವವರಿಗೆ ಕೇಂದ್ರ ಅಪರಾಧ ವಿಭಾಗವು ನೋಟಿಸ್ ನೀಡಲಿದೆ" ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವಾಸು ಎಂಬಾತನ ಹೆಸರಿನಲ್ಲಿ ಬರ್ತಡೇ ಪಾರ್ಟಿಯನ್ನು ಭಾನುವಾರ (ಮೇ 19) ಮಧ್ಯರಾತ್ರಿ ಆಯೋಜಿಸಲಾಗಿತ್ತು. ಆದರೆ ಇದಕ್ಕೆ ಎಂಟ್ರಿ ಫೀಸ್ ಮಾತ್ರ ಎರಡು ಲಕ್ಷದವರೆಗೆ ಇತ್ತು ಎನ್ನಲಾಗುತ್ತಿದೆ.

ಎಲೆಕ್ಟ್ರಾನಿಕ್ ಸಿಟಿ ಬಳಿಯ ಜಿ ಆರ್ ಫಾರ್ಮ್ ಹೌಸ್ ನಲ್ಲಿ ಪಾರ್ಟಿ ಭಾನುವಾರ ಸಂಜೆ ಐದು ಘಂಟೆಯಿಂದ ಆರಂಭವಾಗಿದ್ದು ಸೋಮವಾರ ಬೆಳಗಿನ ಜಾವದವರೆಗೂ ಮುಂದುವರಿದಿತ್ತು. ಪಾರ್ಟಿಯಲ್ಲಿ 110ಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು. ಐದು ಜನ ಈ ಇವೆಂಟ್ ಆರ್ಗನೈಸ್ ಮಾಡಿದ್ದರು ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com