Bengaluru Weather: ಹತ್ತೇ ವರ್ಷದಲ್ಲಿ ಬೆಂಗಳೂರು ತಾಪಮಾನ 3 ಡಿಗ್ರಿ ಏರಿಕೆ!

ಕರ್ನಾಟಕದಲ್ಲಿ ಬೇಸಿಗೆ ಧಗೆ ಮುಂದುವರೆದಿರುವಂತೆಯೇ ಕಳೆದ 10 ವರ್ಷಗಳ ಅವಧಿಯಲ್ಲಿ ಉದ್ಯಾನ ನಗರಿ ಬೆಂಗಳೂರಿನಲ್ಲಿ ತಾಪಮಾನ ಬರೊಬ್ಬರಿ 3 ಡಿಗ್ರಿ ಏರಿಕೆಯಾಗಿದೆ.
Bengaluru Summer
ಬೆಂಗಳೂರು ಬೇಸಿಗೆ
Updated on

ಬೆಂಗಳೂರು: ಕರ್ನಾಟಕದಲ್ಲಿ ಬೇಸಿಗೆ ಧಗೆ ಮುಂದುವರೆದಿರುವಂತೆಯೇ ಕಳೆದ 10 ವರ್ಷಗಳ ಅವಧಿಯಲ್ಲಿ ಉದ್ಯಾನ ನಗರಿ ಬೆಂಗಳೂರಿನಲ್ಲಿ ತಾಪಮಾನ 3 ಡಿಗ್ರಿ ಏರಿಕೆಯಾಗಿದೆ.

ಹೌದು.. ಕರ್ನಾಟಕದಲ್ಲಿ ಇತ್ತೀಚಿನ ಉಷ್ಣ ಅಲೆಯ ಪರಿಸ್ಥಿತಿಯನ್ನು ಭಾರತದ ಹೆಚ್ಚಿನ ನಗರಗಳು ಅನುಭವಿಸುತ್ತಿದ್ದು, ಹೆಚ್ಚುತ್ತಿರುವ ಶಾಖ ದ್ವೀಪದ ಪರಿಣಾಮದಿಂದಾಗಿ ಪರಿಸ್ಥಿತಿಯು ಹದಗೆಡುತ್ತಿದೆ ಎಂದು ವಿಜ್ಞಾನ ಮತ್ತು ಪರಿಸರ ಕೇಂದ್ರ (CSE) ಸೋಮವಾರ ಬಿಡುಗಡೆ ಮಾಡಿದ ತನ್ನ ವರದಿಯಲ್ಲಿ ತಿಳಿಸಿದೆ.

ಸಿಎಸ್‌ಇ (CSE) ಭಾರತದ ಆರು ಮೆಟ್ರೋ ನಗರಗಳಾದ ಬೆಂಗಳೂರು, ಚೆನ್ನೈ, ಕೋಲ್ಕತ್ತಾ, ಮುಂಬೈ, ದೆಹಲಿ ಮತ್ತು ಹೈದರಾಬಾದ್‌ಗಳ ಹೀಟ್‌ವೇವ್ ಪರಿಸ್ಥಿತಿಗಳನ್ನು ತಮ್ಮ ಅಧ್ಯಯನಕ್ಕಾಗಿ ಟ್ರ್ಯಾಕ್ ಮಾಡಿದ್ದು, ಪ್ರಮುಖ ನಗರಗಳಲ್ಲಿ ತಾಪಮಾನ ಹೆಚ್ಚಾಗುತ್ತಿದ್ದು, ಭಾರತದ ನಗರಗಳ ಮೇಲೆ ಪರಿಣಾಮ ಬೀರುವ ಈ ಬದಲಾಗುತ್ತಿರುವ ಪ್ರವೃತ್ತಿಯ ಸ್ವರೂಪವು ಹೆಚ್ಚು ಆಳವಾಗಿ ಮತ್ತು ದೀರ್ಘವಾಗಿರುತ್ತದೆ ಎಂದು ವಿಶ್ಲೇಷಿಸಿದೆ.

ಶಾಖದ ಒತ್ತಡವು ಏರುತ್ತಿರುವ ತಾಪಮಾನದ ಬಗ್ಗೆ ಮಾತ್ರವಲ್ಲ. ಇದು ಗಾಳಿಯ ಉಷ್ಣತೆ, ಭೂಮಿಯ ಮೇಲ್ಮೈ ತಾಪಮಾನ ಮತ್ತು ಸಾಪೇಕ್ಷ ಆರ್ದ್ರತೆಯ ಸಂಯೋಜನೆಯಾಗಿದ್ದು ಅದು ನಗರಗಳಲ್ಲಿ ತೀವ್ರವಾದ ಉಷ್ಣ ಅಸ್ವಸ್ಥತೆ ಮತ್ತು ಶಾಖದ ಒತ್ತಡಕ್ಕೆ ಕಾರಣವಾಗುತ್ತದೆ ಎಂದು ವಿಶ್ಲೇಷಣೆ ತೋರಿಸಿದೆ.

Bengaluru Summer
Weather Report: ಬೆಂಗಳೂರಿನಲ್ಲಿ ದಾಖಲೆ ಬರೆದ ಬೇಸಿಗೆ, ಇತಿಹಾಸದಲ್ಲೇ 2ನೇ ಗರಿಷ್ಠ ತಾಪಮಾನ

CSE ತನ್ನ ವರದಿಯಲ್ಲಿ, ಸಾಪೇಕ್ಷ ಆರ್ದ್ರತೆಯು ಹೆಚ್ಚುತ್ತಿರುವ ಶಾಖ ಸೂಚ್ಯಂಕವನ್ನು ಮತ್ತು ದೈನಂದಿನ ಜೀವನದಲ್ಲಿ ಶಾಖದ ಒತ್ತಡವನ್ನು ಹದಗೆಡಿಸಿದೆ.ಪ್ರಮುಖವಾಗಿ ರಾತ್ರಿಯಲ್ಲಿ ನಗರಗಳು ಇನ್ನು ಮುಂದೆ ತಂಪಾಗಿರುವುದಿಲ್ಲ. ರಾತ್ರಿ ವೇಳೆ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ ಎಂದು ಅದು ಗಮನಿಸಿದೆ.

ಈ ಎಲ್ಲಾ ನಗರಗಳಲ್ಲಿ ಅರಣ್ಯ ನಾಶ, ಜಲ ಮೂಲಗಳ ಒತ್ತುವರಿ ಮತ್ತು ನಾಶ, ಕಾಂಕ್ರೀಟೀಕರಣ ಮತ್ತು ಕಟ್ಟಡಗಳ ನಿರ್ಮಾಣ ಗಮನಾರ್ಹ ಏರಿಕೆಯಾಗಿದೆ. ಇದು ನಗರ ಶಾಖ ದ್ವೀಪದ ಪರಿಣಾಮಕ್ಕೆ ಕಾರಣವಾಗಿದೆ. ಅಂತೆಯೇ ಹಸಿರು ಪ್ರದೇಶಗಳು ಮತ್ತು ಜಲಮೂಲಗಳನ್ನು ವಿಸ್ತರಿಸುವುದು, ಕಟ್ಟಡಗಳ ನಿರ್ಮಾಣದಿಂದಾಗಿ ಉಂಟಾಗುವ ಥರ್ಮಲ್ ಲೋಡ್ ಅನ್ನು ಕಡಿಮೆ ಮಾಡಬೇಕು. ಇದರಿಂದ ತಾಪಮಾನ ಸುಧಾರಣೆ ಮತ್ತು ಸಾರ್ವಜನಿಕ ಆರೋಗ್ಯವನ್ನು ರಕ್ಷಿಸಲು ತುರ್ತು ಕ್ರಮಗಳನ್ನು ಜಾರಿಗೆ ತರಲು ಶಾಖ ನಿರ್ವಹಣಾ ಕ್ರಿಯಾ ಯೋಜನೆಯ ತುರ್ತು ಅಗತ್ಯವಿದೆ ಎಂದು ವರದಿ ತಿಳಿಸಿದೆ.

Bengaluru Summer
ಬೇಸಿಗೆ: ಭಾರತದ ಪ್ರಮುಖ ಜಲಾಶಯಗಳಲ್ಲಿ ಇರುವುದು ಶೇ.38 ರಷ್ಟು ನೀರು ಮಾತ್ರ!

ಬೆಂಗಳೂರು ತಾಪಮಾನ 3 ಡಿಗ್ರಿ ಏರಿಕೆ

2014-23ಕ್ಕೆ ಹೋಲಿಸಿದರೆ ಉದ್ಯಾನನಗರಿ ಬೆಂಗಳೂರು 3 ಡಿಗ್ರಿ ಸೆಲ್ಸಿಯಸ್ ಬಿಸಿಯಾಗಿದ್ದು, ಬೆಂಗಳೂರಿನಲ್ಲಿ ತಾಪಮಾನ 3 ಡಿಗ್ರಿಯಷ್ಟು ಏರಿಕೆಯಾಗಿದೆ. ಬೆಂಗಳೂರು ಬೇಸಿಗೆಯಲ್ಲಿ ಉಷ್ಣತೆಯ ದಶಕದ ಸರಾಸರಿಯಲ್ಲಿ 0.5° ಸೆಲ್ಸಿಯಸ್ ಹೆಚ್ಚಳವಾಗಿದೆ. ಆದರೆ ಸಾಪೇಕ್ಷ ಆರ್ದ್ರತೆಯು ಕಳೆದ ಎರಡು ದಶಕಗಳಲ್ಲಿ ಸ್ಥಿರವಾಗಿದೆ. ಮಾರ್ಚ್ - ಏಪ್ರಿಲ್ 2024 ಗಮನಾರ್ಹವಾಗಿ ಬಿಸಿಯಾಗಿತ್ತು. ಉದ್ಯಾನನಗರಿ ಬೆಂಗಳೂರು ಸುಮಾರು 3 ಡಿಗ್ರಿ ಸೆಲ್ಸಿಯಸ್ ತಾಪಮಾನ ಏರಿಕೆ ಕಂಡಿದೆ ಎಂದು ವರದಿಯು ಗಮನಿಸಿದೆ.

ಅರ್ಬನ್ ಲ್ಯಾಬ್‌ನ ಹಿರಿಯ ಕಾರ್ಯಕ್ರಮ ವ್ಯವಸ್ಥಾಪಕ ಅವಿಕಲ್ ಸೋಮವಂಶಿ ಮಾತನಾಡಿ, ಬೇಸಿಗೆ ಧಗೆಯಿಂದ ತಾಪಮಾನ ಏರಿಕೆಯಾಗುತ್ತಿದ್ದು, ಹೆಚ್ಚಿದ ತಾಪಮಾನದ ರಾತ್ರಿಗಳು ಗರಿಷ್ಠ ತಾಪಮಾನದಷ್ಟೇ ಅಪಾಯಕಾರಿ, ಏಕೆಂದರೆ ಜನರು ಹಗಲಿನ ಶಾಖದಿಂದ ಚೇತರಿಸಿಕೊಳ್ಳಲು ಕಡಿಮೆ ಅವಕಾಶ ಇರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com