ಮಡಿಕೇರಿ: ಉದ್ಯಮಿಯೊಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳ ಮಹಜರುಗಾಗಿ ಕೊಡಗಿಗೆ ಕರೆತಂದಿದ್ದ ವೇಳೆ ಆರೋಪಿಯೊಬ್ಬ ಪರಾರಿಯಾಗಿದ್ದಾನೆ.
ಅಂಕುರ್ ಠಾಕೂರ್ ಅಲಿಯಾಸ್ ರಾಣಾ ತಲೆಮರೆಸಿಕೊಂಡಿರುವ ಆರೋಪಿ. ಇತ್ತೀಚೆಗೆ ಕೊಡಗಿನಲ್ಲಿ ತೆಲಂಗಾಣ ಮೂಲದ ರಮೇಶ್ ಎಂಬುವವರ ಮೃತದೇಹವನ್ನು ಎರಡನೇ ಪತ್ನಿ ನಿಹಾರಿಕಾ ಹಾಗೂ ಆಕೆಯ ಪ್ರಿಯಕರ ಸೇರಿ ಹತ್ಯೆ ಮಾಡಿ 800 ಕಿ.ಮೀ ದೂರದ ಕೊಡಗಿಗೆ ಬಂದು ಮೃತದೇಹವನ್ನು ನಿರ್ಜನ ಪ್ರದೇಶದಲ್ಲಿ ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದರು.
ಕೊಡಗು ಪೊಲೀಸರು ಪ್ರಕರಣದ ತನಿಖೆ ನಡೆಸಿ ನಿಹಾರಿಕಾ ಜೊತೆಗೆ ಆಕೆಯ ಪ್ರಿಯಕರ ನಿಖಿಲ್ ಮತ್ತು ಅಂಕುರ್ ಠಾಕೂರ್ ಎಂಬಾತನನ್ನು ಬಂಧಿಸಿದ್ದರು.
ಇದರಂತೆ ಸ್ಥಳ ಪರಿಶೀಲನೆಗಾಗಿ ಕೊಡಗು ಪೊಲೀಸರು ಅಂಕುರ್ ಠಾಕೂರ್‌ನನ್ನು ಉಪ್ಪಲ್‌ಗೆ ಕರೆದುಕೊಂಡು ಹೋದಾಗ, ಪೊಲೀಸರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಕೊಡಗು ಪೊಲೀಸರು ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದು, ಇದೀಗ ಪೊಲೀಸರ ನಿರ್ಲಕ್ಷ್ಯಕ್ಕೆ ಮೇಲಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಸ್‌ಪಿ ಕೆ.ರಾಮರಾಜನ್ ಅವರು ಮಾತನಾಡಿ, ಕೊಡಗು ಪೊಲೀಸರು ಮೂವರು ಆರೋಪಿಗಳನ್ನು ಅಕ್ಟೋಬರ್ 31ರಂದು ಹೈದರಾಬಾದ್‌ಗೆ ತೆರಳಿದ್ದು, ಆರೋಪಿಗಳನ್ನು ವಶಕ್ಕೆ ಪಡೆದು ಹೈದರಾಬಾದ್‌ನ ಉಪ್ಪಲ್-ಭುವನಗಿರಿ ರಾಷ್ಟ್ರೀಯ ಹೆದ್ದಾರಿಯಲ್ಲಿನ ಅಪರಾಧ ಸ್ಥಳದಲ್ಲಿ ಮಹಜರ್ ಪ್ರಕ್ರಿಯೆ ನಡೆಸಿದ್ದರು. ನಂತರ ಪೊಲೀಸರು ರಾತ್ರಿ ಹೈದರಾಬಾದ್‌ನ ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದರು. ಆದಾಗ್ಯೂ, ಅಂಕುರ್ ಕೈಕೋಳವನ್ನು ತೆರೆದುಕೊಂಡು ಮೂರನೇ ಮಹಡಿಯಲ್ಲಿರುವ ಹೋಟೆಲ್ ಕೊಠಡಿಯ ಕಿಟಕಿಯಿಂದ ಪರಾರಿಯಾಗಿದ್ದಾನೆ. ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ. ಶೀಘ್ರದಲ್ಲೇ ಅಂಕುರ್‌ನನ್ನು ಬಂಧಿಸಲಾಗುವುದು ಎಂದು ಹೇಳಿದ್ದಾರೆ.
Advertisement