ಹೈದರಾಬಾದ್'ನಲ್ಲಿ ಕೊಲೆ, ಕೊಡಗಿನಲ್ಲಿ ಸಾಕ್ಷ್ಯ ನಾಶ: ಅಂತರರಾಜ್ಯ ಕೊಲೆ ಪ್ರಕರಣ ಭೇದಿಸಿದ ಪೊಲೀಸರು, 3 ಆರೋಪಿಗಳ ಬಂಧನ

ಸುಟ್ಟು, ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಮೃತದೇಹ ಯಾರದ್ದು ಎಂಬ ಪ್ರಶ್ನೆಯೊಂದಿಗೆ ಆರಂಭವಾದ ಪೊಲೀಸರ ತನಿಖೆಯಲ್ಲಿ ಹಲವು ಶಾಕಿಂಗ್ ವಿಚಾರಗಳು ಬೆಳಕಿಗೆ ಬಂದಿವೆ.
ಬಂಧಿತ ಮಹಿಳೆ.
ಬಂಧಿತ ಮಹಿಳೆ.
Updated on

ಮಡಿಕೇರಿ: ಅಕ್ಟೋಬರ್ 8 ರಂದು ಕೊಡಗಿನ ಸುಂಟಿಕೊಪ್ಪ ಬಳಿ ಪತ್ತೆಯಾಗಿದ್ದ ಮೃತದೇಹ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಪೊಲೀಸರು ಪ್ರಕರಣವನ್ನು ಭೇದಿಸಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸುಟ್ಟು, ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಮೃತದೇಹ ಯಾರದ್ದು ಎಂಬ ಪ್ರಶ್ನೆಯೊಂದಿಗೆ ಆರಂಭವಾದ ಪೊಲೀಸರ ತನಿಖೆಯಲ್ಲಿ ಹಲವು ಶಾಕಿಂಗ್ ವಿಚಾರಗಳು ಬೆಳಕಿಗೆ ಬಂದಿವೆ.

ಕೊಡಗಿನ ಸುಂಟಿಕೊಪ್ಪದಲ್ಲಿ ಅಕ್ಟೋಬರ್ 8ರಂದು ವ್ಯಕ್ತಿಯೊಬ್ಬರ ಸುಟ್ಟ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅನಾಮಿಕ ಮೃತದೇಹದ ಪತ್ತೆ ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರಿಗೆ ಪ್ರದೇಶದಲ್ಲಿದ್ದ ಸಿಸಿಟಿವಿ ಕ್ಯಾಮೆರಾದ ದೃಶ್ಯಗಳಲ್ಲಿ ಮಹತ್ವದ ಸುಳಿವು ಪತ್ತೆಯಾಗಿತ್ತು.

ಈ ಸುಳುವಿನ ಹಿಂದೆ ಬಿದ್ದ ಪೊಲೀಸರಿಗೆ ಮೃತ ವ್ಯಕ್ತಿ ಯಾರು? ಆತನನ್ನು ಯಾರು ಕೊಲೆ ಮಾಡಿದ್ದರು? ಎಂಬ ವಿವರಗಳು ಒಂದೊಂದಾಗಿ ತಿಳಿದುಬಂದಿದೆ. ಪ್ರಕರಣದಲ್ಲಿ ಸಿಕ್ಕ ಸಣ್ಣ ಸುಳಿವು ಹಿಡಿದುಕೊಂಡು ಪೊಲೀಸರು ಸತ್ಯಾಂಶವನ್ನು ಹೊರತರುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಕರಣ ಸಂಬಂಧ ತೆಲಂಗಾಣ ಮೂಲದ ನಿಹಾರಿಕಾ ಪಿ (29), ಬೆಂಗಳೂರಿನ ನಿವಾಸಿ, ಆಕೆಯ ಪ್ರಿಯಕರ ಹರ್ಯಾಣದ ಅಂಕುರ್ ರಾಣಾ (30) ಮತ್ತು ಬೆಂಗಳೂರಿನ ನಿಖಿಲ್ ಮೈರೆಡ್ಡಿ (28) ಎಂಬುವವರನ್ನು ಬಂಧನಕ್ಕೊಳಪಡಿಸಿದ್ದಾರೆ.

ಬಂಧಿತ ಮಹಿಳೆ.
ಮೂವರು ಬೈಕ್ ಕಳ್ಳರ ಬಂಧನ: 31 ವಾಹನ ವಶಕ್ಕೆ

ಇನ್ನು ಹತ್ಯೆಯಾದ ವ್ಯಕ್ತಿಯನ್ನು ಹೈದರಾಬಾದ್ ಮೂಲದ ರಮೇಶ್ ಕುಮಾರ್ (54) ಎಂದು ಗುರ್ತಿಸಲಾಗಿದೆ. ಈತ ಆರೋಪಿ ನಿಹಾರಿಕಾಳ ಎರಡನೇ ಪತ್ನಿ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಗಂಡನ 8 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಪಡೆಯಲು ಆಕೆ ತನ್ನ ಪ್ರಿಯಕರ ಅಂಕುರ್ ಜೊತೆ ಸೇರಿ ಕೊಲೆಗೆ ಯೋಜನೆ ರೂಪಿಸಿದ್ದಳು ಎಂದು ತಿಳಿದುಬಂದಿದೆ.

29 ವರ್ಷದ ನಿಹಾರಿಕಾ ಮೂಲತಃ ತೆಲಂಗಾಣ ರಾಜ್ಯದ ಯಾದಾದ್ರಿ ಜಿಲ್ಲೆಯ ಮೋಂಗೀರ್ ನಗರದ ನಿವಾಸಿ. 16 ವರ್ಷದವಳಾಗಿದ್ದಾಗ ಆಕೆಯ ಅಪ್ಪ ಸಾವನ್ನಪ್ಪಿದ್ದರು. ಹಾಗಾಗಿ ತಾಯಿ ಆಕೆಯನ್ನ 16 ವರ್ಷಕ್ಕೆ ವಿವಾಹ ಮಾಡಿಸಿದ್ದರು. ಆಕೆಗೆ ಎರಡೂ ಮಕ್ಕಳೂ ಜನಿಸಿವೆ. ಆದರೆ ಗಂಡನ ಜೊತೆ ವೈಮನಸ್ಯದಿಂದಾಗಿ ಡೈವೋರ್ಸ್​ ಪಡೆಯುತ್ತಾಳೆ. ಶಾಲಾ ದಿನಗಳಲ್ಲಿ ಅತಿ ಬುದ್ಧಿವಂತೆಯಾಗಿದ್ದ ಆಕೆ ಪರೀಕ್ಷೆಗಳಲ್ಲಿ ಶೇಕಡಾ 90ಕ್ಕೂ ಅಧಿಕ ಮಾರ್ಕ್ಸ್​ ಪಡೆಯುತ್ತಿದ್ದಳು. ಹಾಗಾಗಿ ಡೈವೋರ್ಸ್​ ಬಳಿಕ ಕಷ್ಟಪಟ್ಟು ಎಂಜಿನಿಯರಿಂಗ್ ಪಾಸ್ ಮಾಡಿ ಹಲವು ಬಗೆಯ ಕಂಪ್ಯೂಟರ್​ ಕೋರ್ಸ್​ಗಳನ್ನೂ ಮಾಡುತ್ತಾಳೆ. ಬಳಿಕ ಬೆಂಗಳೂರಿನ ಟಿಸಿಎಸ್​ ಸೇರಿದಂತೆ ಹಲವೆಡೆ ಹಲವು ವರ್ಷಗಳ ಕಾಲ ಕೆಲಸ ಮಾಡುತ್ತಾಳೆ.

ಆಕೆಗೆ 1 ಲಕ್ಷದ 20 ಸಾವಿರ ರೂ ಸಂಬಳ ಇತ್ತು. ಇದರ ಮಧ್ಯೆ ಆಕೆಗೆ ಹರ್ಯಾಣ ಮೂಲದ ವ್ಯಕ್ತಿಯೊಬ್ಬನ ಜೊತೆ ಪ್ರೇಮಾಂಕುರವಾಗಿ ಅಲ್ಲಿಗೆ ಹೋಗಿ ಕೆಲ ಸಮಯ ನೆಲೆಸಿರುತ್ತಾಳೆ. ಆದರೆ ಅಲ್ಲಿ ಆತನಿಗೆ ಹಣಕಾಸಿನ ವ್ಯವಹಾರದಲ್ಲಿ ಮೋಸ ಮಾಡಿ ಜೈಲು ಸೇರಿರುತ್ತಾಳೆ. ಅಲ್ಲಿ ಪರಿಚಯವಾಗುವ ಮಹಿಳೆಯ ಮಗನೇ ಅಂಕುರ್​ ರಾಣಾ. ಆತನೂ ಅಪರಾಧಿ ಹಿನ್ನೆಲೆಯವನು. ಬಳಿಕ ಬೆಂಗಳೂರಿಗೆ ಬರುವ ಆಕೆಗೆ ರಮೇಶನ ಪರಿಚಯವಾಗಿ ವಿವಾಹವಾಗುತ್ತಾಳೆ.

ತೆಲಂಗಾಣದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ರಮೇಶ್​ಗೆ 2018ರಲ್ಲಿ ನಿಹಾರಿಕಾಳ ಪರಿಚಯವಾಗಿ ಅದು ಪ್ರೇಮಕ್ಕೆ ತಿರುಗಿ ರಿಜಿಸ್ಟರ್ ವಿವಾಹವಾಗಿರುತ್ತಾರೆ. ಆಕೆಯ ಐಷಾರಾಮಿ ಜೀವನಕ್ಕೆ ಬೇಕಾದ ಹಣಕಾಸು ವ್ಯವಸ್ಥೆಯನ್ನು ರಮೇಶನೇ ಪೂರೈಸುತ್ತಿದ್ದ. ನಿಹಾರಿಕಾಗೆ ಐಷಾರಾಮಿ ಬದುಕಿನ ಖಯಾಲಿ ಇತ್ತು.

ಬಂಧಿತ ಮಹಿಳೆ.
30 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಕೊಲೆ ಆರೋಪಿ ಬಂಧನ!

ಈ ನಡುವೆ ಬೆಂಗಳೂರಿನ ರಾಮಮೂರ್ತಿ ನಗರದ ಪಶು ವೈದ್ಯ ಡಾ. ನಿಖಿಲ್ ಜೊತೆ ನಿಹಾರಿಕಾಗೆ ಅಕ್ರಮ ಸಂಬಂಧ ಹೊಂದಿರುತ್ತಾಳೆ. ನಿಹಾರಿಕಾ ತನ್ನ ನಾಯಿಗೆ ಚಿಕಿತ್ಸೆ ನೀಡಲೆಂದು ಪಶುವೈದ್ಯ ನಿಖಿಲ್ ಬಳಿ ತೆರಳಿದ್ದಾಗ ಇವರಿಬ್ಬರ ಮಧ್ಯೆ ಅಕ್ರಮ ಸಂಬಂಧ ಬೆಳೆದಿದೆ. ಈ ಮಧ್ಯೆ ರಿಯಲ್ ಎಸ್ಟೇಟ್​ ಹಣಕಾಸು ವಿಚಾರಕ್ಕೆ ಸಂಬಂಧಪಟ್ಟಂತೆ ನಿಹಾರಿಕಗೂ ರಮೇಶ್​ಗೂ ತೀವ್ರ ಭಿನ್ನಾಭಿಪ್ರಾಯ ಮೂಡಿ, ರಮೇಶ್ ನಿಹಾರಿಕಾಗೆ ಹಣ ನೀಡುವುದನ್ನ ನಿಲ್ಲಿಸಿದ್ದ. ರಮೇಶ್​ನಿಂದ ಈಕೆ 8 ಕೋಟಿ ರೂ ಹಣ ನಿರೀಕ್ಷೆ ಮಾಡಿದ್ದಳಂತೆ. ಆದರೆ, ಈಕೆಯ ಬೇಡಿಕೆಗೆ ರಮೇಶ್ ಜಗ್ಗಿರಲಿಲ್ಲ.

ರಮೇಶ್ ನಿಂದ ಚಿಕ್ಕಾಸು ಗಿಟ್ಟುವುದಿಲ್ಲ ಎಂಬುದು ಗೊತ್ತಾದಾಗ ತನ್ನ ಸ್ನೇಹಿತ ಅಂಕುರ್ ರಾಣಾ ಜೊತೆಗೂಡಿ ರಮೇಶ್​ ಹತ್ಯೆ ಮಾಡಲು ಸಂಚು ರೂಪಿಸಿದ್ದಾಳೆ. ಅಕ್ಟೋಬರ್​ ಒಂದಕ್ಕೆ ಹೈದ್ರಾಬಾದ್ ಸಮೀಪದ ಉಪ್ಪಳ್​ಗೆ ಬರುವಂತೆ ಪತಿ ರಮೇಶ್​ಗೆ ಕರೆ ಮಾಡಿರುವ ನಿಹಾರಿಕಾ, ಅದರಂತೆ ಅಲ್ಲಿಗೆ ಬಂದ ​ರಮೇಶ್​ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡಿದ್ದಾರೆ. ಬಳಿಕ ರಮೇಶ್ ಮನೆಗೆ ತೆರಳಿ ಅಲ್ಲಿಂದ ಆತನ ಬೆಂಜ್ ಕಾರು ಹಾಗೂ ಹಣ ತೆಗೆದುಕೊಂಡು ಡೆಡ್​ ಬಾಡಿ ಜೊತೆಗೇ​ ಬೆಂಗಳೂರಿಗೆ ಬಂದು ಅಲ್ಲಿ ತನ್ನ ಸ್ನೇಹಿತ ಡಾ ನಿಖಿಲ್​ನ ಜೊತೆಗೂಡಿ ಕೊಡಗಿಗೆ ಬಂದಿದ್ದಾಳೆ.

ಯಾರಿಗೂ ಶಂಕೆ ಬಾರದಂತೆ ಕಾಫಿ ತೋಟಕ್ಕೆ ತೆರಳಿ ಅಲ್ಲಿ ಹೆಣವನ್ನ ಬಿಸಾಕಿ ಪೆಟ್ರೋಲ್ ಹಾಕಿ ಸುಟ್ಟು ಪರಾರಿಯಾಗಿದ್ದಾರೆ. ಹೆಣದ ಗುರುತೂ ಯಾರಿಗೂ ಸಿಗದಂತೆ ಮಾಡಲು ಇವರು ಕೊಡಗಿನ ಕಾಫಿ ತೋಟವನ್ನು ಬಳಸಿಕೊಂಡಿದ್ದಾರೆ. ಕೊಲೆ ನಡೆದು ನಾಲ್ಕು ದಿನಗಳ ಕಾಲ ಆ ಡೆಡ್​ಬಾಡಿಯನ್ನ ಕಾರಿನಲ್ಲೇ ಇಟ್ಟುಕೊಂಡಿದ್ದರು. ಎಲ್ಲಿಯೂ ಸ್ವಲ್ಪವೂ ಶಂಕೆ ಬಾರದಂತೆ ಸಹಜವಾಗಿಯೇ ವರ್ತಿಸಿದ್ದಾರೆ.

ದೇಹ ಸುಟ್ಟ ಬಳಿಕ ಉಪ್ಪಳ್​ಗೆ ತೆರಳಿ ಸ್ವಲ್ಪ ದಿನ ಬಿಟ್ಟು ರಮೇಶ್ ನಾಪತ್ತೆ ಅಂತ ದೂರು ನೀಡಲು ಮು0ದಾಗಿದ್ದಾರೆ. ಈ ನಡುವೆಯೇ ಪೊಲೀಸರ ಕೈಗೆ ಸಿಕ್ಕಿಬಿದ್ದಾರೆ.

ಸದ್ಯ ನಿಹಾರಿಕಾ, ಅಂಕುರ್ ಮತ್ತು ಡಾ ನಿಖಿಲ್​ನನ್ನು ಕೊಡಗು ಪೊಲಿಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಕೇವಲ ಒಂದೇ ಒಂದು ಸಣ್ಣ ಕ್ಲೂ ಹಿಡಿದು ಮಡಿಕೇರಿಯಿಂದ ಹೈದರಾಬಾದ್, ತೆಲಂಗಾಣ, ಹರಿದ್ವಾರದವರೆಗೂ ಕಾರ್ಯಾಚರಣೆ ನಡೆಸಿ ಮೂವರು ಹಂತಕರನ್ನು ಬಂಧನಕ್ಕೊಳಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com