ನವೆಂಬರ್ ಅಂತ್ಯಕ್ಕೆ 25 ಕೆರೆಗಳು ಸ್ವಚ್ಛ: BBMP

ಕೆರೆಗಳಲ್ಲಿ ಹೂಳು ಶೇಖರಣೆಯಾಗಿದ್ದು, ಕಳೆ ಗಿಡಗಳು ಬೆಳೆದಿವೆ. ಕೆರೆಗಳಲ್ಲಿ ನೀರು ತುಂಬಿಸುವ ಉದ್ದೇಶದಿಂದ ಈ ಸ್ವಚ್ಛತಾ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ನೈರುತ್ಯ ಮುಂಗಾರು ಅಂತ್ಯಗೊಂಡಿದ್ದು, ಈಶಾನ್ಯ ಮಾನ್ಸೂನ್ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಗರದಾದ್ಯಂತ 25 ಕೆರೆಗಳ ಸ್ವಚ್ಛತೆಗೆ ಮುಂದಾಗಿದೆ.

ಕೆರೆಗಳ ಮುಖ್ಯ ಎಂಜಿನಿಯರ್ ವಿಜಯಕುಮಾರ್ ಹರಿದಾಸ್ ಮಾತನಾಡಿ, ಕೆರೆಗಳಲ್ಲಿ ಹೂಳು ಕಳೆ ತೆಗೆದುವ ಕೆಲಸ ಮಾಡಲಾಗುತ್ತಿದೆ. ಜೌಗು ಪ್ರದೇಶಗಳನ್ನು ಸೃಷ್ಟಿಸುವುದು ಮತ್ತು ಚರಂಡಿಗಳನ್ನು ನಿರ್ಮಿಸುವ ಕಾರ್ಯ ಕೂಡ ಪ್ರಗತಿಯಲ್ಲಿದೆ. ನವೆಂಬರ್ 4ರಂದೇ ಈ ಕಾರ್ಯವನ್ನು ಆರಂಭಿಸಲಾಗಿದ್ದು, ತಿಂಗಳಾಂತ್ಯಕ್ಕೆ ಕಾರ್ಯ ಪೂರ್ಣಗೊಳ್ಳಲಿದೆ. ಕೆರೆಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳುತ್ತಿರುವ ಗುತ್ತಿಗೆದಾರರಿಗೆ ಸ್ವಚ್ಛತೆಗೂ ಮುನ್ನ ಮತ್ತು ನಂತರದ ಫೋಟೋಗಳ ತೆಗೆಯುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ,

ಬಿಬಿಎಂಪಿಯ ಈ ಕಾರ್ಯಕ್ಕೆ ಸುಮಾರು 100 ವರ್ಷಗಳ ಹಿಂದೆ ಕೆಆರ್ ಪುರಂನ ಬಸವನಪುರ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ನೀರಾವರಿಗಾಗಿ ಕೆರೆ ನಿರ್ಮಿಸಲು ಮತ್ತು ರೈತರಿಗೆ ಸಹಾಯ ಮಾಡಲು ಭೂಮಿಯನ್ನು ದಾನ ಮಾಡಿದ ಎಲೆ ಮಲ್ಲಪ್ಪ ಶೆಟ್ಟಿ ಅವರ ಮೊಮ್ಮಗ ಡಾ.ಲಿಂಗರಾಜು ಎಲೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಕೆರೆಗಳ ಸ್ವಚ್ಛತೆ ಅತ್ಯಂತ ಮುಖ್ಯವಾಗಿದೆ. ಏಕೆಂದರೆ, ಇದು ನೀರು ಮಲಿನಗೊಳ್ಳಲು ಕಾರಣವಾಗುತ್ತದೆ. ಬಿಬಿಎಂಪಿಗೆ ಇದೀಗ ಸ್ವಚ್ಛತೆಯ ಪ್ರಾಮುಖ್ಯತೆಯನ್ನು ಅರ್ಥವಾಗಿದೆ ಎಂದೂ ಟೀಕಿಸಿದ್ದಾರೆ.

ಸಂಗ್ರಹ ಚಿತ್ರ
ಬೆಂಗಳೂರಿನಲ್ಲಿ ಕೆರೆಗಳ ಪುನಃಶ್ಚೇತನ: ತಂತ್ರಗಳ ಕುರಿತು HYDRAA ಮುಖ್ಯಸ್ಥ ಮೆಚ್ಚುಗೆ

ದಾಸರಹಳ್ಳಿ ವಲಯದ ಕಮ್ಮಗೊಂಡನಹಳ್ಳಿ ಕೆರೆ, ದಕ್ಷಿಣದ ಕೆಂಪಾಂಬುಧಿ ಕೆರೆ, ಮಹದೇವಪುರದ ನಲ್ಲೂರಹಳ್ಳಿ ಕೆರೆ, ಆರ್‌ಆರ್ ನಗರದ ಮಂಗಮ್ಮನಹಳ್ಳಿ ಕೆರೆ, ಯಲಹಂಕದ ಆವಲಹಳ್ಳಿ ಕೆರೆ, ದಕ್ಷಿಣದ ದೊಡ್ಡಕಲ್ಲಸಂದ್ರ ಕೆರೆ, ಬೊಮ್ಮನ ವಲಯದ ಸಾರಕ್ಕಿ ಕೆರೆ ಸೇರಿದಂತೆ 7 ಜಲಮೂಲಗಳನ್ನು ನವೆಂಬರ್‌ 4 ರಿಂದ 8ರವರೆಗೆ ಸ್ವಚ್ಛಗೊಳಿಸಲಾಗಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

ನವೆಂಬರ್ 11-16 ರವರೆಗೆ ದಾಸರಹಳ್ಳಿ ವಲಯದ ಬಾಗಲಗುಂಟೆ ಕೆರೆ, ದಕ್ಷಿಣದ ಬೈರಸಂದ್ರ ಕೆರೆ, ಮಹದೇವಪುರದ ಶೀಲವಂತನಕೆರೆ, ಆರ್‌ಆರ್ ನಗರದ ಚಿಕ್ಕಬಸತಿ ಕೆರೆ, ಯಲಹಂಕದ ಅಲ್ಲಸಂದ್ರ ಕೆರೆ ಮತ್ತು ಬೊಮ್ಮನಹಳ್ಳಿ ವಲಯದ ಉತ್ತರಹಳ್ಳಿ ಕೆರೆಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದಲ್ಲದೆ, ನ.19ರಿಂದ 22ರೊಳಗೆ ದಾಸರಹಳ್ಳಿ ವಲಯದ ಶಿವಪುರ ಕೆರೆ, ಮಹದೇವಪುರದ ಸಿದ್ದಾಪುರ ಕೆರೆ, ಆರ್‌ಆರ್‌ನಗರದ ಜೋಗಿ ಕೆರೆ, ಪೂರ್ವದಲ್ಲಿ ಕಗ್ಗದಾಸಪುರ ಕೆರೆ, ಯಲಹಂಕದ ಕೋಗಿಲು ಕೆರೆ, ಬೊಮ್ಮನಹಳ್ಳಿ ವಲಯದ ದೇವಕರೆ ಮತ್ತು ಅರಕೆರೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು.

ಅತಿವೃಷ್ಟಿಯಿಂದ ಕೆರೆಗಳಲ್ಲಿ ಹೂಳು ಶೇಖರಣೆಯಾಗಿದ್ದು, ಕಳೆ ಗಿಡಗಳು ಬೆಳೆದಿವೆ. ಕೆರೆಗಳಲ್ಲಿ ನೀರು ತುಂಬಿಸುವ ಉದ್ದೇಶದಿಂದ ಈ ಸ್ವಚ್ಛತಾ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com