ಬೆಂಗಳೂರು: ಇ-ಖಾತಾ ವಿತರಣಾ ವ್ಯವಸ್ಥೆ ಪರೀಕ್ಷಾರ್ಥ ಆರಂಭ

ಬಿಬಿಎಂಪಿಯಲ್ಲಿ ಲಭ್ಯವಿರುವ ದಾಖಲೆಗಳ ಆಧಾರ ದಲ್ಲಿ ಕರಡು ಇ-ಖಾತಾವನ್ನು ಆನ್‌ಲೈನ್‌ www.bbmpeaasthi.karnataka.gov.in ನಲ್ಲಿ ರಚಿಸಿ, ಇರಿಸಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ನಗರವಾಸಿಗಳಿಗೆ ಆಸ್ತಿ ಖಾತಾ ಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿಸುವ ಸಲುವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಫೇಸ್‌ಲೆಸ್‌, ಸಂಪರ್ಕರಹಿತ ಆನ್‌ಲೈನ್ ಡಿಜಿಟಲ್ ವ್ಯವಸ್ಥೆಗೆ ಮಂಗಳವಾರ ಪರೀಕ್ಷಾರ್ಥವಾಗಿ ಚಾಲನೆ ನೀಡುತ್ತಿದೆ.

ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ನಿರ್ದೇಶನದಂತೆ ಇ–ಖಾತಾ ವ್ಯವಸ್ಥೆಯನ್ನು ಪ್ರಾರಂಭಿಸಲಾಗುತ್ತಿದ್ದು, ಬಿಬಿಎಂಪಿಯಲ್ಲಿ ಲಭ್ಯವಿರುವ ದಾಖಲೆಗಳ ಆಧಾರ ದಲ್ಲಿ ಕರಡು ಇ-ಖಾತಾವನ್ನು ಆನ್‌ಲೈನ್‌ www.bbmpeaasthi.karnataka.gov.inನಲ್ಲಿ ರಚಿಸಿ, ಇರಿಸಲಾಗಿದೆ.

ನಾಗರಿಕರು ತಮ್ಮ ಸ್ವತ್ತಿನ ಕರಡು ಇ-ಖಾತಾವನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

ಸಂಗ್ರಹ ಚಿತ್ರ
ಬೆಂಗಳೂರು: ಸಿಗರೇಟ್ ತುಂಡುಗಳ ಎಸೆಯಲು ಪ್ರತ್ಯೇಕ ಡಬ್ಬ ಒದಗಿಸಲು ಬಿಬಿಎಂಪಿ ಚಿಂತನೆ!

ಅಂತಿಮ ಇ-ಖಾತಾವನ್ನು ಪಡೆಯಲು ಆಧಾರ್ ಇ-ಕೆವೈಸಿ, ಸ್ವತ್ತಿನ ಜಿಪಿಎಸ್ ದತ್ತಾಂಶ, ಛಾಯಾಚಿತ್ರ, ಸ್ವತ್ತಿನ ನೋಂದಾಯಿತ ದಸ್ತಾವೇಜು, 2004ರ ಏಪ್ರಿಲ್‌ 1ರಿಂದ ಈವರೆಗಿನ ಋಣಭಾರ ಪ್ರಮಾಣಪತ್ರ (ಇ.ಸಿ), ಬೆಸ್ಕಾಂ ಮೀಟರ್ ಸಂಖ್ಯೆ, ಎ-ಖಾತಾ ಎಂದು ದೃಢೀಕರಿಸುವ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡಬೇಕು.

ನಾಗರಿಕರು ಯಾವುದೇ ದಾಖಲೆಗಳನ್ನು ಹೊಂದಿಲ್ಲದಿದ್ದರೆ, ನಿಯಮಾವಳಿಯಂತೆ ಅಂತಿಮ ಇ-ಖಾತಾವನ್ನು ಪಡೆಯಲು ವೈಯಕ್ತಿಕವಾಗಿ ಸಂಬಂಧಪಟ್ಟ ಸಹಾಯಕ ಕಂದಾಯ ಅಧಿಕಾರಿಯನ್ನು ಭೇಟಿ ಮಾಡಬಹುದು. ಸ್ವತ್ತಿನ ಮಾಲೀಕರು ಅಂತಿಮ ಇ–ಖಾತಾವನ್ನು ವಿತರಿಸದಂತೆ ಆಕ್ಷೇಪಣೆಯನ್ನು ಏಳು ದಿನದಲ್ಲಿ ಸಲ್ಲಿಸಬಹುದಾಗಿದೆ. ಅಂತಿಮ ಇ-ಖಾತಾವನ್ನು ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ವಿತರಿಸಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com