ಬೆಂಗಳೂರು: ಮಲಗಿದ್ದ ಪತ್ನಿ ಮೇಲೆ ಪತಿಯೊಬ್ಬ ಮಾರಕಾಸ್ತ್ರದಿಂದ ಭೀಕರ ರೀತಿಯಲ್ಲಿ ಹಲ್ಲೆ ನಡೆಸಿದ್ದು, ಪರಿಣಾಮ ಮಹಿಳೆ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಘಟನೆ ಸುದ್ದಗುಂಟೆಪಾಳ್ಯ ಠಾಣವ್ಯಾಪ್ತಿಯಲ್ಲಿ ನಡೆದಿದೆ,
ಅನಿತಾ ಮೇರಿ (35) ಹಲ್ಲೆಗೊಳಗಾದ ಮಹಿಳೆಯಾಗಿದ್ದಾರೆ. ಹಲ್ಲೆ ನಡೆಸಿದ ಪತಿಯನ್ನು ಸಂತೋಷ್ ಕುಮಾರ್ ಎಂದು ಗುರ್ತಿಸಲಾಗಿದೆ. ಗಾಯಗೊಂಡಿರುವ ಮಹಿಳೆ ಮಡಿವಾಳದ ಖಾಸಗಿ ಆಶ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ವಿರುದ್ಧ ಬಿಎನ್‌ಎಸ್ ಸೆಕ್ಷನ್ 109 ರ ಅಡಿಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.
ಕುಡಿದು ಬಂದಿರುವ ಪತಿ ಸಂತೋಷ್, ಅಕ್ಟೋಬರ್ 8 ರಂದು ಬೆಳಗ್ಗೆ ಜಗಳ ತೆಗೆದು ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಘಟನೆ ನಂತರ ಆರೋಪಿ ಎಸ್ಕೇಪ್ ಆಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಕಳೆದ 10 ವರ್ಷದ ಹಿಂದೆ ಮದುವೆಯಾಗಿದ್ದ ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಈ ಹಿಂದೆ ಸುಬ್ರಮಣ್ಯಪುರದಲ್ಲೂ ಶೀಲ ಶಂಕಿಸಿ ಹಲ್ಲೆ ನಡೆಸಿದ್ದ ಎಂದು ತಿಳಿದುಬಂದಿದೆ. ಸುಬ್ರಮಣ್ಯಪುರ ಠಾಣೆಯಲ್ಲೂ ಈ ಬಗ್ಗೆ ಕೇಸ್ ದಾಖಲಾಗಿದೆ.
6 ತಿಂಗಳ ಹಿಂದೆ ಗಂಡನಿಗೆ ಗೊತ್ತಾಗದಂತೆ ಭವಾನಿ ವಾಸ ಮಾಡ್ತಿದ್ಳು. ಬಳಿಕ ಸಂತೋಷ್ ಕುಮಾರ್ ಕೂಡ ಇಲ್ಲಿ ಬಂದು ಅನಿತಾ ಮೇರಿ ಜೊತೆಗೆ ಸೇರಿಕೊಂಡಿದ್ದ. ಅಕ್ಟೋಬರ್ 8 ರಂದು ಬೆಳಗ್ಗೆ 6 ಗಂಟೆಗೆ ಜಗಳ ತೆಗೆದಿದ್ದ ಸಂತೋಷ್ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಮಕ್ಕಳು ಜೋರಾಗಿ ಕಿರುಚಿಕೊಂಡಿದ್ದಾರೆ. ಕೂಡಲೇ ಸಂತೋಷ್ ತಾಯಿ ಬಂದು ನೋಡಿದಾಗ ಅನಿತಾ ಮೇರಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. ಬಳಿಕ ನೆರೆಮನೆಯವರೊಂದಿಗೆ ಸೇರಿ ಆಟೋದಲ್ಲಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಎಲೆಕ್ಟ್ರಾನಿಕ್ಸ್ ಶೋ ರೂಂನಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಸಂತೋಷ್ ಕುಮಾರ್ ಕಳೆದ ಎರಡು ವರ್ಷಗಳಿಂದ ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿದ್ದ. ಇದೀಗ ಪರಾರಿಯಾಗಿರುವ ಸಂತೋಷ್ ಕುಮಾರ್'ಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
Advertisement