TNIE ಫಲಶ್ರುತಿ: ಕದಿರೇನಹಳ್ಳಿ ಅಂಡರ್‌ಪಾಸ್ ಬಳಿಯ ಕಸದ ರಾಶಿ ಒಂದೇ ದಿನದಲ್ಲಿ ತೆರವು..!

ಸೆಪ್ಟೆಂಬರ್.1 ರಂದು 'BBMP apathy: Garbage littered on road next to Kadirenahalli underpass' ಶೀರ್ಷಿಕೆ ಅಡಿಯಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ವರದಿ ಪ್ರಕಟಿಸಿತ್ತು.
ಕಸದ ರಾಶಿ ತೆರವುಗೊಳಿಸಿರುವುದು.
ಕಸದ ರಾಶಿ ತೆರವುಗೊಳಿಸಿರುವುದು.
Updated on

ಬೆಂಗಳೂರು: ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ (The New Indian express newspaper) ಬೆಂಗಳೂರು ಆವೃತ್ತಿಯಲ್ಲಿ ವರದಿ ಬಂದ ಒಂದೇ ದಿನದಲ್ಲೇ ಬಿಬಿಎಂಪಿ (BBMP) ಸಿಬ್ಬಂದಿ ಕದಿರೇನಹಳ್ಳಿ ಅಂಡರ್‌ಪಾಸ್ ಬಳಿ ಬಿದ್ದಿದ್ದ ಕಸವನ್ನು ತೆರವುಗೊಳಿಸಿದೆ.

ಸೆಪ್ಟೆಂಬರ್.1 ರಂದು 'BBMP apathy: Garbage littered on road next to Kadirenahalli underpass' ಶೀರ್ಷಿಕೆ ಅಡಿಯಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ವರದಿ ಪ್ರಕಟಿಸಿತ್ತು. ವರದಿ ಬೆನ್ನಲ್ಲೇ ಲೋಕಾಯುಕ್ತರು ಬಿಬಿಎಂಪಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು, ಇದೀಗ ಬಿಬಿಎಂಪಿ ಅಧಿಕಾರಿಗಳು ಕಸವನ್ನು ತೆರವುಗೊಳಿಸಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಬಳಿಕ ಲೋಕಾಯುಕ್ತ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಕಸದ ರಾಶಿ ಹಾಗೂ ಕಸ ತುಂಬಿದ್ದ ಮಿನಿ ಆಟೋಗಳು ಕಣ್ಣಿಗೆ ಬಿದ್ದಿದ್ದು, ಬಳಿಕ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕಸದ ರಾಶಿ ತೆರವುಗೊಳಿಸಿರುವುದು.
ಕದಿರೇನಹಳ್ಳಿ ಅಂಡರ್‌ಪಾಸ್ ಬಳಿ ಕಸದ ರಾಶಿ: ಗಬ್ಬು ನಾರುತ್ತಿರುವ ರಸ್ತೆ, ಪಾಲಿಕೆಗೆ ಸಾರ್ವಜನಿಕರ ಹಿಡಿಶಾಪ!

ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ ವೀರಪ್ಪ ಮತ್ತು ನ್ಯಾಯಮೂರ್ತಿ ಕೆ ಎನ್ ಫಣೀಂದ್ರ ಅವರು ಸೋಮವಾರ ಮಧ್ಯಾಹ್ನ 2.45 ರ ಸುಮಾರಿಗೆ ಬನಶಂಕರಿ ಸುತ್ತಮುತ್ತಲಿನ ಇತರ ಸ್ಥಳಗಳು ಸೇರಿದಂತೆ ಕದಿರೇನಹಳ್ಳಿ ಅಂಡರ್‌ಪಾಸ್ ಅನ್ನು ಪರಿಶೀಲಿಸಿದ್ದರು. ಲೋಕಾಯುಕ್ತರ ಸೂಚನೆಗೆ ಕ್ಷಿಪ್ರವಾಗಿ ಸ್ಪಂದಿಸಿದ ಬಿಬಿಎಂಪಿ ಮಂಗಳವಾರದ ವೇಳೆಗೆ ಕದಿರೇನಹಳ್ಳಿ ಕೆಳಸೇತುವೆ ಹಾಗೂ ಇತರೆ ಪ್ರದೇಶಗಳ ಬಳಿ ಬಿದ್ದಿದ್ದ ಕಸವನ್ನು ತೆರವುಗೊಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com