ಬೆಂಗಳೂರು: ಬೆಂಗಳೂರಿನ ಹೆಮ್ಮಿಗೆಪುರ ವಾರ್ಡ್ ನ ರಾಯಲ್ ಗ್ರೀನ್ ನಿಸರ್ಗ ಲೇಔಟ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ(ರಿ)ದ ಸಂಸ್ಥಾಪಕ ಅಧ್ಯಕ್ಷರಾಗಿ ಲಿಂಗರಾಜ್ ಬಡಿಗೇರ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇತ್ತೀಚಿಗೆ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಪತ್ರಕರ್ತ ಲಿಂಗರಾಜ್ ಬಡಿಗೇರ್ ಅವರನ್ನು ಅಧ್ಯಕ್ಷರಾಗಿ, ವಿನಯ್ ಕುಮಾರ್ ಪಿ ಹಾಗೂ ಪೃಥ್ವಿ ಗೌಡ ಅವರನ್ನು ಉಪಾಧ್ಯಕ್ಷರಾಗಿ, ವಿಜಯ್ ಪ್ರಕಾಶ್ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ, ಕಾರ್ಯದರ್ಶಿಯಾಗಿ ವಿರೇಶ್ ಎಸ್, ಖಜಾಂಚಿಯಾಗಿ ಬಿಎಂ ಗಿರೀಶ್ ಹಾಗೂ ಸಹ ಖಜಾಂಚಿಯಾಗಿ ಮೇಘ ಲೋಹಿತ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಲೇಔಟ್ ನಿವಾಸಿಗಳ ಒಟ್ಟಾರೆ ಕಲ್ಯಾಣಕ್ಕಾಗಿ ಈ ಸಂಘ ರಚನೆಯಾಗಿದ್ದು, ಲೇಔಟ್ ನಲ್ಲಿ ಹಲವು ಮೂಲ ಸೌಕರ್ಯಗಳ ಕೊರತೆ ಇದೆ. ಅವುಗಳನ್ನು ಪಡೆಯುವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ಸಂಘದ ಮೊದಲ ಅಧ್ಯಕ್ಷ ಲಿಂಗರಾಜ್ ಬಡಿಗೇರ್ ಹೇಳಿದ್ದಾರೆ.
450ಕ್ಕೂ ಹೆಚ್ಚು ನಿವೇಶನಗಳನ್ನು ಹೊಂದಿರುವ ಈ ಲೇಔಟ್ ನ ಶೇ. 20 ರಷ್ಟು ನಿವೇಶನಗಳಲ್ಲಿ ಈಗಾಗಲೇ ಮನೆಗಳನ್ನು ನಿರ್ಮಿಸಲಾಗಿದ್ದು, ಜನ ವಾಸವಾಗಿದ್ದಾರೆ. ಆದರೆ, ಕಾವೇರಿ ನೀರು ಸೇರಿದಂತೆ ಕೆಲವು ಮೂಲ ಸೌಕರ್ಯಗಳ ಕೊರತೆ ಇದೆ ಎಂದು ಲೇಔಟ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರು ತಿಳಿಸಿದ್ದಾರೆ.
Advertisement