ಚಿಂತಾಮಣಿ: ಜಲ್ಲಿ ತುಂಬಿದ್ದ ಟಿಪ್ಪರ್ ಒಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಿದ್ದ ಹೋಟೆಲ್ ಒಳಗೆ ನುಗ್ಗಿದ್ದು, ಪರಿಣಾಮ ಇಬ್ಬರು ಸ್ಥಳದಲ್ಲೇ ದುರ್ಮರಣವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆಯ ಚಿಂತಾಮಣಿ ನಗರದ ಕೋಲಾರ ಸರ್ಕಲ್‌ನಲ್ಲಿ ಗುರುವಾರ ನಡೆದಿದೆ.
ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಘಟನೆ ವೇಳೆ ಕ್ಯಾಶ್ ಕೌಂಟರ್ ನಲ್ಲಿ ಕುಳಿತಿದ್ದ ದರ್ಶಿನಿ ಫಾಸ್ಟ್ ಫುಡ್ ಮಾಲೀಕ ಶಿವಾನಂದ (60) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಹೋಟೆಲ್ ನಲ್ಲಿ ಆಹಾರ ತಯಾರಿಸುತ್ತಿದ್ದ ಬಾಣಸಿಗ ಕುಮಾರ್ (50) ತಲೆಗೆ ಗಾಯವಾಗಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.
ಇದೇ ವೇಳೆ ಚಿಂತಾಮಣಿಯ ವಿನಾಯಕ ನಗರದ ನಿವಾಸಿ ಶ್ರೀನಿವಾಸ್ ಬಾಬು ಎಂಬುವವರಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಟಿಪ್ಪರ್ ಲಾರಿಯು ಚಿಂತಾಮಣಿ ನಗರದಿಂದ ಕೋಲಾರ ವೃತ್ತದ ಕಡೆ ಜಲ್ಲಿ ಕಲ್ಲು ತುಂಬಿಕೊಂಡು ತೇರಳುತ್ತಿತ್ತು. ಒಮ್ಮೆಗೆ ಚಾಲಕನ ನಿಯಂತ್ರಣ ತಪ್ಪಿ ಕೋಲಾರ ವೃತ್ತದಲ್ಲಿನ ದರ್ಶನಿ ಹೋಟಲ್‌ಗೆ ನುಗಿ ಪಲ್ಟಿಯಾಗಿ ಬಿದಿದ್ದೆ.
ಅಪಘಾತ ವಿಷಯ ಕೂಡಲೇ ಸ್ಥಳಕ್ಕೆ ಚಿಂತಾಮಣಿ ನಗರಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಜೆಸಿಬಿ ಯಂತ್ರಗಳ ಮೂಲಕ ಟಿಪ್ಪರ್ ಲಾರಿಯನ್ನು ತೆರವುಗೊಳಿಸಿದರು. ಹೊಟೇಲ್ ಬಿದ್ದ ಜೆಲ್ಲಿ ತೆರವು ಮಾಡಿಸಿದರು.
Advertisement