BDA: ಕಾರ್ನರ್ ಸೈಟ್ ಗಳು ಸೋಲ್ಡ್ ಔಟ್; HSR Layout ಸೆಕ್ಟರ್ 3ಕ್ಕೆ ಗರಿಷ್ಠ ಮೊತ್ತದ ಬಿಡ್!

ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ನಿವೇಶನಗಳಿಗೆ ಭಾರಿ ಬೇಡಿಕೆ ಬರುತ್ತಿದ್ದು, ಪ್ರಮುಖವಾಗಿ ಕಾರ್ನರ್ ಸೈಟ್ ಗಳಿಗೆ ಬೇಡಿಕೆ ಹೆಚ್ಚಿದೆ.
BDA
ಬಿಡಿಎ
Updated on

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) 76 ಮೂಲೆ ನಿವೇಶನ (ಕಾರ್ನರ್ ಸೈಟ್)ಗಳ ಇ-ಹರಾಜು ಗುರುವಾರ ಅಂದರೆ ಸೆಪ್ಟೆಂಬರ್ 5ರಂದು ಮುಕ್ತಾಯಗೊಂಡಿದ್ದು, HSR Layout ಸೆಕ್ಟರ್ 3ಗೆ ಗರಿಷ್ಠ ಮೊತ್ತ ಅಂದರೆ 93.29 ಕೋಟಿ ರೂ. ಬಿಡ್ ಬಂದಿದೆ ಎಂದು ಮೂಲಗಳು ತಿಳಿಸಿವೆ.

ಹೌದು.. ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ನಿವೇಶನಗಳಿಗೆ ಭಾರಿ ಬೇಡಿಕೆ ಬರುತ್ತಿದ್ದು, ಪ್ರಮುಖವಾಗಿ ಕಾರ್ನರ್ ಸೈಟ್ ಗಳಿಗೆ ಬೇಡಿಕೆ ಹೆಚ್ಚಿದೆ. ಎರಡೂ ತುದಿಗಳಿಂದ ರಸ್ತೆಯ ಪ್ರವೇಶ ಸಾಧ್ಯತೆಯ ಕಾರಣದಿಂದ ಕಾರ್ನರ್ ಸೈಟ್‌ಗಳು ಸಾರ್ವಜನಿಕರಿಂದ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿದೆ.

ಇದು BDA ಗೆ ದೊಡ್ಡ ಆದಾಯವನ್ನು ಗಳಿಸುತ್ತವೆ. ಆಗಸ್ಟ್ 21 ರಿಂದ ಸೆಪ್ಟೆಂಬರ್ 5 ರವರೆಗೆ ನಡೆದ ಹರಾಜಿನಲ್ಲಿ ಒಟ್ಟು 55 ಯಶಸ್ವಿ ಬಿಡ್‌ಗಳು ಬಂದಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

BDA
ಬಿಡಿಎ ನಿವೇಶನಕ್ಕಾಗಿ 72 ಕೋಟಿ ರೂ. ಬಿಡ್ ಮಾಡಿದ್ದ ಇಂಜಿನಿಯರ್ ಈಗ 4 ಲಕ್ಷ ರೂ. ಠೇವಣಿಗಾಗಿ ಪರದಾಟ!

213.6 ಚದರ ಮೀಟರ್ ನಿವೇಶನಕ್ಕೆ 6.29 ಕೋಟಿ ರೂ.ಗಳ ಬಿಡ್‌ನೊಂದಿಗೆ ಯೆಲ್ಲಿಕುಂಟೆ ಗ್ರಾಮದ ಎಚ್‌ಎಸ್‌ಆರ್ ಲೇಔಟ್ ನ 3ನೇ ಸೆಕ್ಟರ್‌ಗೆ ಅತಿ ಹೆಚ್ಚು ಬಿಡ್ ಬಂದಿದೆ. ಎಚ್‌ಎಸ್‌ಆರ್ ಲೇಔಟ್ ಹೊರತುಪಡಿಸಿ, ಅಂಜನಾಪುರ ಟೌನ್‌ಶಿಪ್ ಈಸ್ಟ್ ಬ್ಲಾಕ್, 2ನೇ ಬ್ಲಾಕ್, 3ನೇ ಬ್ಲಾಕ್, 7ನೇ ಬ್ಲಾಕ್ ಮತ್ತು 10ನೇ ಬ್ಲಾಕ್, ಬನಶಂಕರಿ 5ನೇ ಹಂತ (ಉತ್ತರಹಳ್ಳಿ ಗ್ರಾಮ)ಗಳಲ್ಲಿ ಕಾರ್ನರ್ ಸೈಟ್‌ಗಳಿಗೆ ಹೆಚ್ಚಿನ ಬಿಡ್ ಗಳು ಬಂದಿವೆ.

ಅಂತೆಯೇ HSR ಲೇಔಟ್‌ನಲ್ಲಿರುವ ಸೈಟ್‌ಗಳು ನಿಯಮಿತವಾಗಿ ಗರಿಷ್ಠ ಬಿಡ್‌ಗಳನ್ನು ಪಡೆಯುತ್ತಿವೆ. "ನಾವು ಪ್ರದೇಶದಲ್ಲಿ ಪ್ರತಿ ಚದರ ಮೀಟರ್‌ಗೆ ಕನಿಷ್ಠ ಬಿಡ್ ಬೆಲೆ 2,02,500 ರೂ.ಗಳನ್ನು ನಿಗದಿಪಡಿಸಿದ್ದೇವೆ. ಬಿಡ್‌ದಾರರು ಪ್ರತಿ ಚದರ ಮೀಟರ್‌ಗೆ 2,94,500 ಬಿಡ್ ಮಾಡಿದರು. ಅಂತಿಮ ಬಿಡ್ ಮೊತ್ತವು 6,29,05,200 ರೂ. ಗಳಾಗಿತ್ತು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

BDA
ಬಿಡಿಎ ಸೈಟ್ ಪಡೆದವರ ಸಮಸ್ಯೆ ಬಗೆಹರಿಸಿ, ಪರ್ಯಾಯ ನಿವೇಶನ ಹಂಚಿಕೆ ಮಾಡಿ: ಸುರೇಶ್‌ ಕುಮಾರ್‌

ಅಂತೆಯೇ ಕೆಂಬತ್ತಹಳ್ಳಿ ಗ್ರಾಮದ ಅಂಜನಾಪುರ ಟೌನ್‌ಶಿಪ್ 10ನೇ ಬ್ಲಾಕ್‌ಗೆ 360ಚ.ಮೀ ನಿವೇಶನಕ್ಕೆ 4,94,64,000 ಬಿಡ್‌ನೊಂದಿಗೆ ಎರಡನೇ ಅತಿ ಹೆಚ್ಚು ಬಿಡ್‌ ಸ್ವೀಕರಿಸಲಾಗಿದ್ದು, ಅಂಜನಾಪುರ ಟೌನ್‌ಶಿಪ್‌ 7ನೇ ಬ್ಲಾಕ್‌ನ 308.48 ಚದರ ಮೀಟರ್‌ ನಿವೇಶನಕ್ಕೆ ಅಂತಿಮ ಬಿಡ್‌ನೊಂದಿಗೆ 4,83,07,96 ರೂ. ಮೊತ್ತ ಬಿಡ್ ಬಂದಿದೆ. ಅಂತೆಯೇ ಒಂಬತ್ತು ಸೈಟ್‌ಗಳಿಗೆ ಯಾವುದೇ ಬಿಡ್‌ ಬಂದಿಲ್ಲ. ಒಟ್ಟಾರೆ ಬಿಡ್ ಗಳ ಪೈಕಿ ಎಂಟು ಬಿಡ್‌ ಗಳನ್ನು ತಿರಸ್ಕರಿಸಲಾಗಿದೆ. -"ನಾಲ್ಕು ಸೈಟ್‌ಗಳನ್ನು ಬಿಡ್‌ನಿಂದ ಹಿಂಪಡೆಯಲಾಗಿದೆ" ಎಂದು ಇನ್ನೊಬ್ಬ ಅಧಿಕಾರಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com