ಮಂಗಳೂರು: ಮಂಗಳೂರಿನ ಐಕಾನಿಕ್ ಸೇಂಟ್ ಅಲೋಶಿಯಸ್ ಹೈಸ್ಕೂಲ್ ಮತ್ತು ಕಾಲೇಜಿನ ಹೊರಗಡೆ ಸುಮಾರು 4 ದಶಕಕ್ಕೂ ಹೆಚ್ಚು ಕಾಲದಿಂದ ಸಮೋಸ ಮಾರಾಟ ಮಾಡುತ್ತಿದ್ದ, ವಿದ್ಯಾರ್ಥಿಗಳ ಪ್ರೀತಿಯ ಸಮೋಸ ಅಜ್ಜ ಎಂ ಎಂ ಮಾಳಗಿ ಅವರು ಬುಧವಾರ ವಿಧಿವಶರಾಗಿದ್ದು, ಅವರ ನಿಧನಕ್ಕೆ ಕರಾವಳಿ ಕಂಬನಿ ಮಿಡಿದಿದೆ.
ಮೂಲತಃ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಯಂಡಿಗೇರಿಯವಾರದ ಮಾಳಗಿ ಅವರು 85ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಎಂ ಎಂ ಮಾಳಗಿ ಅವರು ತಮ್ಮ ಹುಟ್ಟೂರಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿಯಾಗಿದ್ದರು. ಆದರೆ 450 ಕಿಲೋಮೀಟರ್ ದೂರದಲ್ಲಿರುವ ಮಂಗಳೂರಿನಲ್ಲಿ ಅವರು ಯಾವುದೇ ಸೆಲೆಬ್ರಿಟಿಗಿಂತ ಕಡಿಮೆ ಇರಲಿಲ್ಲ.
ಇಂದು ಮಾಳಗಿ ಅವರ ನಿಧನದ ಸುದ್ದಿ ಕರಾವಳಿ ಪಟ್ಟಣವನ್ನು ತಲುಪುತ್ತಿದ್ದಂತೆ, ಮಂಗಳೂರಿನವರು ‘ಸಮೋಸ ಅಜ್ಜ’ನೊಂದಿಗಿನ ಒಡನಾಟವನ್ನು ನೆನೆದು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸಂತಾಪಗಳ ಮಹಾಪೂರವೇ ಹರಿದು ಬಂದಿದೆ.
ಬಿಳಿ ಕುರ್ತಾ, ಧೋತಿ ಮತ್ತು ಗಾಂಧಿ ಕ್ಯಾಪ್‌ನ ಉತ್ತರ ಕರ್ನಾಟಕದ ಸಾಂಪ್ರದಾಯಿಕ ಉಡುಗೆ ಧರಿಸುತ್ತಿದ್ದ ಮಾಳಗಿ ಅವರು ನಾಲ್ಕು ದಶಕಗಳಿಂದ ಮಂಗಳೂರಿನ ಐಕಾನಿಕ್ ಸೇಂಟ್ ಅಲೋಶಿಯಸ್ ಹೈಸ್ಕೂಲ್ ಮತ್ತು ಕಾಲೇಜಿನಲ್ಲಿ ಗರಿಗರಿಯಾದ ಸಮೋಸಾ, ಚಿಕ್ಕಿ ಮತ್ತು ಇತರ ಟ್ರೀಟ್‌ಗಳನ್ನು ಮಾರಾಟ ಮಾಡುತ್ತಿದ್ದರು.
ಮಾಳಗಿ ಅವರು ತಮ್ಮ ದಯೆ, ಸರಳತೆ ಮತ್ತು ತಮಾಷೆಯ ಸ್ವಭಾವದಿಂದಲೇ ವಿದ್ಯಾರ್ಥಿಗಳ ಗುಂಪುಗಳನ್ನು ಸೆಳೆಯುತ್ತಿದ್ದರು ಮತ್ತು ಅವರನ್ನು ಪ್ರೀತಿಯಿಂದ 'ಸಮೋಸಾ ಅಜ್ಜ' (ಅಜ್ಜ) ಎಂದು ಕರೆಯುತ್ತಿದ್ದರು. ಪ್ರತಿ ವರ್ಷ, ವಿಜಯಪುರ ಮತ್ತು ಬಾಳಗಲಕೋಟೆ ಜಿಲ್ಲೆಗಳಿಂದ ನೂರಾರು ಮಂದಿ ಜೀವನೋಪಾಯ ಅರಸಿ ಮಂಗಳೂರಿಗೆ ಆಗಮಿಸುತ್ತಾರೆ. ಅವರಲ್ಲಿ ಮಾಳಗಿ ಕೂಡ ಒಬ್ಬರು.
ಮಾಜಿ ಪತ್ರಕರ್ತ ಮತ್ತು ಸೇಂಟ್ ಅಲೋಶಿಯಸ್ ಕಾಲೇಜಿನ ಹಳೆ ವಿದ್ಯಾರ್ಥಿ ಎಸ್ ನಂದಗೋಪಾಲ್ ಮಾತನಾಡಿ, ಮಾಳಗಿ ಕಾಲೇಜಿನ ಅವಿಭಾಜ್ಯ ಅಂಗವಾಗಿದ್ದಾರೆ ಮತ್ತು ಅನೇಕ ಮಾಜಿ ವಿದ್ಯಾರ್ಥಿಗಳು ತಮ್ಮ ಅಲ್ಮಾ ಮೇಟರ್‌ಗೆ ಭೇಟಿ ನೀಡಿದಾಗ ಅವರನ್ನು ಭೇಟಿಯಾಗುವುದನ್ನು ರೂಢಿಸಿಕೊಂಡಿದ್ದರು ಎಂದು ಹೇಳಿದ್ದಾರೆ.
2020 ರಲ್ಲಿ ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಮಾಳಗಿ ಅವರು ನಿರುದ್ಯೋಗಿಗಳಾಗಿದ್ದಾಗ ಕಾಲೇಜಿನ 1989ರ ಬ್ಯಾಚ್ ವಿದ್ಯಾರ್ಥಿಗಳು ಅವರನ್ನು ಗೌರವಿಸಿ, ಆರ್ಥಿಕ ನೆರವು ನೀಡಿದ್ದರು.
Advertisement