ಬೆಂಗಳೂರು: ರಸ್ತೆ ಗುಂಡಿ ಮುಚ್ಚಲು BBMPಯಿಂದ ‘ಜೆಟ್‌ ಪ್ಯಾಚರ್‌’ ಯಂತ್ರ ಬಳಕೆ

ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಜೆಟ್ ಪ್ಯಾಚರ್ ಯಂತ್ರವನ್ನು ಬಳಕೆ ಮಾಡಲಾಗುತ್ತಿದ್ದು, ಈ ಮೂಲಕ ಪ್ರಮುಖ ರಸ್ತೆ ಗುಂಡಿಗಳನ್ನು ಮುಚ್ಚಲಾಗುತ್ತಿದೆ.
 ಜೆಟ್ ಪ್ಯಾಚರ್ ಯಂತ್ರ ಬಳಸಿ ರಸ್ತೆ ಗುಂಡಿಗಳ ಮುಚ್ಚುತ್ತಿರುವುದು.
ಜೆಟ್ ಪ್ಯಾಚರ್ ಯಂತ್ರ ಬಳಸಿ ರಸ್ತೆ ಗುಂಡಿಗಳ ಮುಚ್ಚುತ್ತಿರುವುದು.
Updated on

ಬೆಂಗಳೂರು: ಸರ್ಕಾರದ ಸೂಚನೆ ಬೆನ್ನಲ್ಲೇ ನಗರದ ರಸ್ತೆ ಗುಂಡಿಗಳನ್ನು ಶೀಘ್ರಗತಿಯಲ್ಲಿ ಮುಚ್ಚುವ ಉದ್ದೇಶದಿಂದ ಬಿಬಿಎಂಪಿ ‘ಜೆಟ್‌ ಪ್ಯಾಚರ್‌ ಯಂತ್ರ’ವನ್ನು ಬಳಸಲು ಆರಂಭಿಸಿದೆ.

ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಜೆಟ್ ಪ್ಯಾಚರ್ ಯಂತ್ರವನ್ನು ಬಳಕೆ ಮಾಡಲಾಗುತ್ತಿದ್ದು, ಈ ಮೂಲಕ ಪ್ರಮುಖ ರಸ್ತೆ ಗುಂಡಿಗಳನ್ನು ಮುಚ್ಚಲಾಗುತ್ತಿದೆ.

ರಾಜರಾಜೇಶ್ವರಿ ನಗರದಲ್ಲಿ ಒಟ್ಟು 20 ವಾರ್ಡ್‌ಗಳಿದ್ದು, 216.45 ಕಿ.ಮೀ ಪ್ರಮುಖ ರಸ್ತೆಗಳು ಸೇರಿದಂತೆ ಒಟ್ಟು 2,045 ಕಿ.ಮೀ ಉದ್ದದ ರಸ್ತೆಗಳಿವೆ. ಮೇ 20ರಿಂದ 2,904 ಗುಂಡಿಗಳನ್ನು ಗುರುತಿಸಲಾಗಿದೆ. ಜೆಟ್ ಪ್ಯಾಚರ್ ಯಂತ್ರಗಳ ಬಳಕೆ ಮೂಲಕ ಈ ವರೆಗೂ 2,494 ಗುಂಡಿಗಲನ್ನು ಮುಚ್ಚಲಾಗಿದೆ. ಉಳಿದಗುಂಡಿಗಳನ್ನು ಮುಚ್ಚುವ ಕಾರ್ಯ ಪ್ರಗತಿಯಲ್ಲಿದೆ ಎಂದು ವಲಯ ಜಂಟಿ ಆಯುಕ್ತ ಅಜಯ್ ವಿ ಅವರು ಹೇಳಿದ್ದಾರೆ.

 ಜೆಟ್ ಪ್ಯಾಚರ್ ಯಂತ್ರ ಬಳಸಿ ರಸ್ತೆ ಗುಂಡಿಗಳ ಮುಚ್ಚುತ್ತಿರುವುದು.
ದಕ್ಷಿಣ ವಲಯದಲ್ಲಿ 438 ಪೈಕಿ 379 ರಸ್ತೆ ಗುಂಡಿ ಮುಚ್ಚಲಾಗಿದೆ: BBMP

‘ಜೆಟ್ ಪ್ಯಾಚರ್’ ಯಂತ್ರದ ಮೂಲಕ ಪ್ರಮುಖ ರಸ್ತೆಗಳಲ್ಲಿ ಒಂದು ಬಾರಿಗೆ 150 ಚ.ಮೀ ನಿಂದ 180 ಚ.ಮೀ ಗುಂಡಿಗಳನ್ನು ಮುಚ್ಚಬಹುದು. ಒಂದು ಗಂಟೆಯಲ್ಲಿ ಕೆಲಸ ಮುಗಿಯಲಿದ್ದು, ಕೂಡಲೇ ವಾಹನಗಳು ಸಂಚಾರ ಮಾಡಬಹುದು ಎಂದು ತಿಳಿಸಿದ್ದಾರೆ.

‘ರಸ್ತೆ ಗುಂಡಿ ಗಮನ ತಂತ್ರಾಂಶ’ದಲ್ಲಿ ಸಾರ್ವಜನಿಕರಿಂದ 461 ದೂರುಗಳು ದಾಖಲಾಗಿದ್ದು, ಅದರಲ್ಲಿ 86 ರಸ್ತೆ ಗುಂಡಿಗಳನ್ನು ಮುಚ್ಚಲಾಗಿದ್ದು, 302 ರಸ್ತೆ ಗುಂಡಿಗಳನ್ನು ಮುಚ್ಚಬೇಕಿದೆ ಎಂದರು

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com