ಬೆಂಗಳೂರು: ಬಿಎಂಟಿಸಿ ಬಸ್ ನಲ್ಲಿ ಮತ್ತೊಂದು ಕಿರುಕುಳ ಪ್ರಕರಣ ವರದಿಯಾಗಿದ್ದು, ಚಲಿಸುತ್ತಿದ್ದ ಬಸ್ ನಲ್ಲಿ ಸ್ವತಃ ಬಸ್ ನಿರ್ವಾಹಕ ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿರುವ ವಿಡಿಯೋವೊಂದು ವೈರಲ್ ಆಗಿದೆ.
ಹೌದು.. ಬಿಎಂಟಿಸಿ ಕಂಡಕ್ಟರ್ವೊಬ್ಬರು (BMTC Conductor) ಯುವತಿಯ ಸೀಟ್ಗೆ ಅಂಟಿಕೊಂಡಂತೆ ಕೂತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗುತ್ತಿದೆ. ಬಸ್ ಸಂಖ್ಯೆ KA41D2500ಯ ಬಸ್ ನಲ್ಲಿ ನಿರ್ವಾಹಕ ಉದ್ದೇಶಪೂರ್ವಕವಾಗಿಯೇ ಯುವತಿ ಕುಳಿತಿದ್ದ ಸೀಟಿನ ಹ್ಯಾಂಡಲ್ ಮೇಲೆ ಕುಳಿತಿದ್ದಾರೆ.
ಬಸ್ ಚಲಿಸುತ್ತಿದ್ದಂತೆಯೇ ನಿರ್ವಾಹಕ ಕೂಡ ಹಿಂದಕ್ಕೆ-ಮುಂದಕ್ಕೆ ಚಲಿಸುತ್ತಿದ್ದು ಇದರಿಂದ ಸೀಟಿನಲ್ಲಿ ಕುಳಿತಿದ್ದ ಯುವತಿ ಸಂಕಷ್ಟ ಎದುರಿಸುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಈ ಕುರಿತು @karnatakaportf ಟ್ವಿಟರ್ ಖಾತೆಯಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದು, ಕಂಡಕ್ಟರ್ ಗೆಂದೇ ಬಸ್ ನ ಮುಂಭಾಗದಲ್ಲಿ ಸೀಟ್ ಮೀಸಲಾಗಿರುತ್ತದೆ. ಅದಾಗ್ಯೂ ಕಂಡಕ್ಟರ್ ಯುವತಿ ಕುಳಿತಿದ್ದ ಸೀಟ್ ಮೇಲೆ ಕುಳಿತಿದ್ದಾರೆ.
ಕಂಡಕ್ಟರ್ ದಣಿದು ಸೀಟ್ ಹ್ಯಾಂಡಲ್ ಮೇಲೆ ಕುಳಿತಿದ್ದರೂ ಅವರಿಗೆ ಯುವತಿಯ ಸೀಟ್ ಆಗಬೇಕೆಂದೇನೂ ಇಲ್ಲ.. ಬೇರೆ ಸೀಟ್ ನಲ್ಲಿ ಕುಳಿತುಕೊಳ್ಳಬಹುದಿತ್ತು. ಆದರೆ ಅವರು ಹಾಗೆ ಮಾಡಿಲ್ಲ. ಇದು ಅವರ ಅವರ ನಡವಳಿಕೆಯನ್ನು ತೋರಿಸುತ್ತದೆ. ಇಂತಹವರ ವಿರುದ್ಧ ಸರಿಯಾದ ಕ್ರಮವಾಗಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.
Advertisement