ಟಿವಿ-ಡಿಶ್‌ ರಿಪೇರಿ ನೆಪದಲ್ಲಿ ಕಳ್ಳತನ: ಆರೋಪಿ ಬಂಧನ, 20 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ

ಆರೋಪಿ ಟಿವಿ ಡಿಶ್ ರಿಪೇರಿ ಮಾಡುವ ನೆಪದಲ್ಲಿ ಒಂಟಿ ಮನೆಗಳನ್ನ ಗುರಿಯಾಗಿಸಿಕೊಂಡ ಕಳ್ಳತನ ಮಾಡುತ್ತಿದ್ದ, ಕಳ್ಳತನದ ನಂತರ ನಾಗರಾಜ್ ಪತ್ನಿ ಅವುಗಳನ್ನು ಮಾರಾಟ ಮಾಡಲು ಸಹಕರಿಸಿದ್ದಳು.
ಬಂಧಿತ ಆರೋಪಿ
ಬಂಧಿತ ಆರೋಪಿ
Updated on

ಬೆಂಗಳೂರು: ಟಿವಿ-ಡಿಶ್‌ ಕೇಬಲ್‌ ರಿಪೇರಿ ನೆಪದಲ್ಲಿ ಮನೆಗಳಲ್ಲಿ ನಗದು, ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದ ಆರೋಪಿಯನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಆರೋಪಿಯನ್ನು ತುಮಕೂರಿನ ಕ್ಯಾತಸಂದ್ರ ನಿವಾಸಿ ನಾಗರಾಜ್‌ ಅಲಿಯಾಸ್‌ ರಿಹಾನ್‌(32) ಎಂದು ಗುರ್ತಿಸಲಾಗಿದ್ದು, ಆರೋಪಿಯಿಂದ 20 ಲಕ್ಷ ರು. ಮೌಲ್ಯದ 300 ಗ್ರಾಂ ಚಿನ್ನಾಭರಣ ಹಾಗೂ ಒಂದು ಕೆ.ಜಿ.ಬೆಳ್ಳಿ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿ ಟಿವಿ ಡಿಶ್ ರಿಪೇರಿ ಮಾಡುವ ನೆಪದಲ್ಲಿ ಒಂಟಿ ಮನೆಗಳನ್ನ ಗುರಿಯಾಗಿಸಿಕೊಂಡ ಕಳ್ಳತನ ಮಾಡುತ್ತಿದ್ದ, ಕಳ್ಳತನದ ನಂತರ ನಾಗರಾಜ್ ಪತ್ನಿ ಅವುಗಳನ್ನು ಮಾರಾಟ ಮಾಡಲು ಸಹಕರಿಸಿದ್ದಳು. ಬ್ಯಾಡರಹಳ್ಳಿಯ ಚೇತನ್‌ ಸರ್ಕಲ್‌ ಬಳಿ ಮನೆಯೊಂದರಲ್ಲಿ ನಡೆದಿದ್ದ ಕಳ್ಳತನ ಸಂಬಂಧ ದಾಖಲಾದ ದೂರಿನ ಮೇರೆಗೆ ತನಿಖೆಗಿಳಿದಿದ್ದ ಪೊಲೀಸರು, ಘಟನೆ ನಡೆದ ಸ್ಥಳದಿಂದ ಬೆರಳಚ್ಚು ಕಲೆ ಹಾಕಿದ್ದರು.

ಬಂಧಿತ ಆರೋಪಿ
ಬೆಂಗಳೂರು: ಕಾರಿನ ಗಾಜು ಒಡೆದು ಕಳ್ಳತನ ಮಾಡುತ್ತಿದ್ದ ನಾಲ್ವರ ಬಂಧನ

ತನಿಖೆ ಭಾಗವಾಗಿ ಪೊಲೀಸರು ಬೆರಳಚ್ಚು ತಜ್ಞರು ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳನ್ನು ಘಟನಾ ಸ್ಥಳಕ್ಕೆ ಕರೆಸಿಕೊಂಡು ಪರಿಶೀಲಿಸಿದ್ದರು, ಸ್ಥಳದಲ್ಲಿ ವೃತ್ತಿಪರ ಕಳ್ಳ ನಾಗರಾಜ್‌ನ ಬೆರಳಚ್ಚು ಪತ್ತೆಯಾಗಿತ್ತು. ಈ ಸುಳಿವಿನ ಮೇರೆಗೆ ಪೊಲೀಸರು ಆರೋಪಿಯ ಪತ್ತೆಗೆ ಹುಡುಕಾಟ ಮುಂದುವರೆಸಿದ್ದರು. ಆದರೂ ಕಳೆದ 10 ತಿಂಗಳಿಂದ ಪೊಲೀಸರ ಕೈಗೆ ಸಿಗದೆ ಆರೋಪಿ ನಾಗರಾಜ್‌ ತಲೆಮರೆಸಿಕೊಂಡಿದ್ದ. ಇತ್ತೀಚೆಗೆ ನೈಸ್‌ ರಸ್ತೆಯ ಕೊಡಿಗೆಹಳ್ಳಿ ಬ್ರಿಡ್ಜ್‌ ಸಮೀಪ ಆರೋಪಿ ಓಡಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿ ಎರಡು ವರ್ಷಗಳ ಹಿಂದೆ ಮುಸ್ಲಿಂ ಯುವತಿಯನ್ನು ಪ್ರೀತಿಸಿ ವಿವಾಹವಾಗಿದ್ದ. ಆಕೆಯ ಒತ್ತಾಸೆಗೆ ಮಣಿದು ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿದ್ದ. ಜೊತೆಗೆ ತನ್ನ ಹೆಸರನ್ನು ರಿಹಾನ್‌ ಎಂದು ಬದಲಿಸಿಕೊಂಡಿದ್ದ. ಈತನ ಅಪರಾಧ ಕೃತ್ಯಗಳಿಗೆ ಪತ್ನಿಯೂ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಳು ಎಂದು ತನಿಖೆಯಿಂದ ತಿಳಿದು ಬಂದಿದೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು 20 ಲಕ್ಷ ಮೌಲ್ಯದ 300 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದು, ತನಿಖೆ ಮುಂದುವರೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com