ಬೆಂಗಳೂರಿನಲ್ಲಿ ನಿಲ್ಲದ ರೋಡ್ ರೇಜ್‌‌​: ಶಾಲಾ ವಾಹನ ಅಡ್ಡಗಟ್ಟಿ ಪುಂಡರಿಂದ ದಾಂಧಲೆ

KA 01 MB 5796 ವಾಹನ ನೋಂದಣಿ ಸಂಖ್ಯೆಯ ಸ್ಕಾರ್ಪಿಯೋದಲ್ಲಿದ್ದ 6-8 ಕ್ಕೂ ಹೆಚ್ಚು ದುಷ್ಕರ್ಮಿಗಳು ಶಾಲಾ ಬಸ್ ಮೇಲೆ ದಾಳಿ ಮಾಡಿದ್ದಾರೆ.
ಶಾಲಾ ಬಸ್ ಕಿಟಕಿ ಒಡೆಯುತ್ತಿರುವ ಕಿಡಿಗೇಡಿಗಳು.
ಶಾಲಾ ಬಸ್ ಕಿಟಕಿ ಒಡೆಯುತ್ತಿರುವ ಕಿಡಿಗೇಡಿಗಳು.
Updated on

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರೋಡ್ ರೇಜ್ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಪುಂಡರ ಗ್ಯಾಂಗ್ ವೊಂದು ಶಾಲಾ ವಾಹನ ಅಡ್ಡಗಟ್ಟಿ ದಾಂಧಲೆ ನಡೆಸಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದಿದೆ.

ನಿನ್ನೆ ಸಂಜೆ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಶಾಲಾ ಬಸ್ ಮೇಲೆ ಕಿಡಿಗೇಡಿಗಳು ದಾಳಿ ಮಾಡಿರುವುದು ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಶಾಲಾ ಬಸ್ ಕಿಟಕಿ ಒಡೆಯುತ್ತಿರುವ ಕಿಡಿಗೇಡಿಗಳು.
ಬೆಂಗಳೂರಿನಲ್ಲಿ ರೋಡ್ ರೇಜ್: ಮಗು ಕಿರುಚಿಕೊಂಡರೂ ಸುಮ್ಮನಾಗದೆ ಕಾರಿನ ಮೇಲೆ ಕಲ್ಲು ಎತ್ತಿಹಾಕಿ ಪುಂಡಾಟ, ವಿಡಿಯೋ

KA 01 MB 5796 ವಾಹನ ನೋಂದಣಿ ಸಂಖ್ಯೆಯ ಸ್ಕಾರ್ಪಿಯೋದಲ್ಲಿದ್ದ 6-8 ಕ್ಕೂ ಹೆಚ್ಚು ದುಷ್ಕರ್ಮಿಗಳು ಶಾಲಾ ಬಸ್ ಮೇಲೆ ದಾಳಿ ಮಾಡಿದ್ದಾರೆ. ಬಸ್ ಕಿಟಕಿಯನ್ನು ಒಡೆಯುವ ಮೂಲಕ ಬಸ್‌ನಲ್ಲಿದ್ದ ಮಕ್ಕಳಿಗೆ ಭೀತಿ ಹುಟ್ಟಿಸಿದ್ದಾರೆ.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿಹಾಡುತ್ತಿದ್ದು, ಪೋಷಕರು ಹಾಗೂ ಸಾರ್ವಜನಿಕರು ತೀವ್ರವಾಗಿ ಕಿಡಿಕಾರುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com