ಮೈಸೂರು: ಆರ್ಥಿಕವಾಗಿ ದುರ್ಬಲ ವರ್ಗದ ವಿದ್ಯಾರ್ಥಿನಿಯರಿಗೆ ಉನ್ನತ ಶಿಕ್ಷಣವನ್ನು ಪಡೆಯಲು ಸಹಾಯ ಮಾಡುವ ಉದ್ದೇಶದಿಂದ ವಿಪ್ರೋ ಕನ್ಸ್ಯೂಮರ್ ಕೇರ್ ಪ್ರೈವೇಟ್ ಲಿಮಿಟೆಡ್ ವಿದ್ಯಾರ್ಥಿವೇತನ ಕಾರ್ಯಕ್ರಮಗಳನ್ನು ಪ್ರಾರಂಭಿಸಿದ್ದು, ಈ ಕಾರ್ಯಕ್ರಮದ ಅಡಿಯಲ್ಲಿ 1.5 ಸಾವಿರ ವಿದ್ಯಾರ್ಥಿಗಳಿಗೆ ರೂ.10 ಕೋಟಿ ವಿದ್ಯಾರ್ಥಿ ನೀಡಲು ಮುಂದಾಗಿದೆ.
ಸಂತೂರ್ ಸ್ಕಾಲರ್‌ಶಿಪ್ ಕಾರ್ಯಕ್ರಮದಡಿಯಲ್ಲಿ ಕರ್ನಾಟಕದಲ್ಲಿ 380 ವಿದ್ಯಾರ್ಥಿಗಳು ಸೇರಿದಂತೆ 1,500 ವಿದ್ಯಾರ್ಥಿಗಳಿಗೆ ಧನಸಹಾಯ ನೀಡಲು ಕಂಪನಿ ಮುಂದಾಗಿದೆ.
ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ಅಡಿಯಲ್ಲಿ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದ್ದು, ಈಗಾಗಲೇ 41 ಕೋಟಿ ರೂಗಳನ್ನು ಖರ್ಚು ಮಾಡಲಾಗಿದ್ದು. ದೇಶದ 96 ಜಿಲ್ಲೆಗಳಲ್ಲಿ 18,132 ವಿದ್ಯಾರ್ಥಿಗಳಿಗೆ ನೆರವು ನೀಡಲಾಗಿದೆ ಎಂದು ಕಂಪನಿಯ ಸಿಇಒ ನೀರಜ್ ಕಹ್ತ್ರಿ ಅವರು ಹೇಳಿದ್ದಾರೆ.
ಉನ್ನತ ಶಿಕ್ಷಣಕ್ಕೆ ಹೆಣ್ಣು ಮಕ್ಕಳ ದಾಖಲಾತಿ ಕಡಿಮೆಯಿದ್ದು, ಈ ಸಂಖ್ಯೆಯನ್ನು ಹೆಚ್ಚಿಸಲು ಉದ್ದೇಶದಿಂದ ಕಾರ್ಯಕ್ರಮವನ್ನು ಆರಂಭಿಸಲಾಗಿದೆ. ಸರ್ಕಾರಿ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಓದಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.
ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗದ ಅನೇಕ ಹೆಣ್ಣುಮಕ್ಕಳಿಗೆ ಮತ್ತು ಅವರ ಕುಟುಂಬಗಳಿಗೆ ಈ ಕಾರ್ಯಕ್ರಮ ಸಹಾಯ ಮಾಡಿದೆ. ವಿದ್ಯಾರ್ಥಿವೇತನವನ್ನು ಅರ್ಹತೆಯ ಮೇಲೆ ನೀಡಲಾಗುವುದಿಲ್ಲ. ಸರ್ಕಾರಿ ಶಾಲೆ ಮತ್ತು ಕಾಲೇಜುಗಳಿಂದ ಬರುವ ಬಡ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ವಿದ್ಯಾರ್ಥಿವೇತನಕ್ಕೆ ಅಗತ್ಯವಿರುವ ದಾಖಲೆಗಳು...
ಸ್ಕಾಲರ್‌ಶಿಪ್‌ಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರು ಇಲಾಖೆಯು ಕೇಳುವ ದಾಖಲೆಗಳನ್ನು ಸಲ್ಲಿಸಬೇಕು.
ಪಾಸ್ಪೋರ್ಟ್ ಗಾತ್ರದ ಫೋಟೋಆಧಾರ್ ಕಾರ್ಡ್, ಮತದಾರರ ಕಾರ್ಡ್, ID ಪುರಾವೆ ನೀಡಬೇಕು.
10ನೇ ತರಗತಿಯ ಅಂಕಪಟ್ಟಿ12 ನೇ ತರಗತಿಯ ಅಂಕಪಟ್ಟಿ.
ಬ್ಯಾಂಕ್ ಪಾಸ್‌ಬುಕ್ ಫೋಟೋ
ಅರ್ಜಿ ಸಲ್ಲಿಸುವುದು ಹೇಗೆ?
ಸಂತೂರ್ ಸ್ಕಾಲರ್‌ಶಿಪ್ ವೆಬ್‌ಸೈಟ್ (www.santoorscholarships.com) ಗೆ ಭೇಟಿ ಕೊಡಿ.
ಸಂತೂರ್ ಸ್ಕಾಲರ್‌ಶಿಪ್ ವೆಬ್‌ಸೈಟ್‌ನ ಹೋಮ್ ಪೇಜ್‌ನಲ್ಲಿ 'Apply Online Now' ಬಟನ್ ಕ್ಲಿಕ್ ಮಾಡಿ
ಅದಾಗಿ ತೆರೆದುಕೊಳ್ಳುವ ಪುಟದಲ್ಲಿ 'Apply Now' ಆಪ್ಶನ್ ಕ್ಲಿಕ್ ಮಾಡಿ
ಮೊಬೈಲ್ ನಂಬರ್, ಇಮೇಲ್ ಐಡಿ ದಾಖಲಿಸಿ ರಿಜಿಸ್ಟರ್ ಮಾಡಿ ಲಾಗಿನ್ ಐಡಿ ಪಡೆದುಕೊಳ್ಳಿ.
ನಿಮ್ಮ ಲಾಗಿನ್ ಐಡಿ ಮೂಲಕ buddy4study ಖಾತೆಯಲ್ಲಿ ಲಾಗಿನ್ ಆಗಿ
ಅಲ್ಲಿ ಸಂತೂರ್ ಸ್ಕಾಲರ್‌ಶಿಪ್ ಪ್ರೋಗ್ರಾಂ 2024-25 ಅರ್ಜಿ ಇರುವ ಪೇಜ್ ಓಪನ್ ಆಗುತ್ತದೆ.
ಆ ಅರ್ಜಿಯನ್ನು ಭರ್ತಿ ಮಾಡುವ ಸಲುವಾಗಿ, 'Application Start' ಬಟನ್ ಕ್ಲಿಕ್ ಮಾಡಬೇಕು.
ಆನ್‌ಲೈನಲ್ಲೇ ದಾಖಲೆಗಳನ್ನು ಸಲ್ಲಿಸುತ್ತ, ವಿದ್ಯಾರ್ಥಿನಿಯ ಅರ್ಜಿಯನ್ನು ಭರ್ತಿ ಮಾಡಿ
ಸಂಬಂಧಿಸಿದ ಪ್ರಮಾಣ ಪತ್ರಗಳನ್ನು ಅಪ್ಲೋಡ್ ಮಾಡಿ
ನಿಬಂಧನೆ ಮತ್ತು ಷರತ್ತುಗಳನ್ನು ಅಂಗೀಕರಿಸಿದ ಬಳಿಕ ಪ್ರಿವ್ಯೂ ಕ್ಲಿಕ್ ಮಾಡಿ.
ಪ್ರಿವ್ಯೂವ್‌ನಲ್ಲಿ ಎಲ್ಲವೂ ಸರಿ ಇದೆಯೇ ಎಂಬುದನ್ನು ಚೆಕ್ ಮಾಡಿ. ನಂತರ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ. ಅಲ್ಲಿಗೆ ಸ್ಕಾಲರ್‌ಶಿಪ್ ಅರ್ಜಿ ಸಲ್ಲಿಕೆಯಾದಂತೆ.
ವಿದ್ಯಾರ್ಥಿವೇತನ ಪಡೆಯಲು ಆಯ್ಕೆಯಾದ ವಿದ್ಯಾರ್ಥಿಗಳಿಗೆ ತಿಂಗಳಿಗೆ 2 ಸಾವಿರ ರೂಪಾಯಿಯಂತೆ ಮೂರು ವರ್ಷ ಅಥವಾ ಕೋರ್ಸ್ ಮುಗಿಯುವವರೆಗೆ ವರ್ಷಕ್ಕೆ 24 ಸಾವಿರ ರೂಪಾಯಿ ವಿದ್ಯಾರ್ಥಿ ವೇತನ ಸಿಗಲಿದೆ. ಹಣವನ್ನು ನೇರವಾಗಿ ಅವರ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಅರ್ಜಿಗಳಿಗೆ ಇಂದು (ಸೆಪ್ಟೆಂಬರ್ 20) ಕೊನೆಯ ದಿನಾಂಕವಾಗಿದೆ.
Advertisement