ಬೆಂಗಳೂರು: ಸರ್ಕಾರ ನೀಡಿದ್ದ 15 ಗಡುವಿನಲ್ಲಿ 2,700 ರಸ್ತೆಗಳ ಗುಂಡಿಗಳ ಜೊತೆಗೆ ಪ್ರತಿನಿತ್ಯ ಬರುವ ದೂರುಗಳ ಮೂಲಕವೂ 8,000 ಗುಂಡಿಗಳನ್ನು ಮುಚ್ಚಲಾಗಿದೆ ಎಂದು ಬಿಬಿಎಂಪಿ ಶುಕ್ರವಾರ ಹೇಳಿದೆ.
ನಿನ್ನೆಯಷ್ಟೇ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು, ಬಿಬಿಎಂಪಿ ದಕ್ಷಿಣ ವಲಯದಲ್ಲಿರುವ ಅಪಯಕಾರಿ ಮರ ತೆರವು ಕಾರ್ಯಾಚರಣೆಯನ್ನು ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ಅವರು, ನಗರದಲ್ಲಿ 8,000ಕ್ಕೂ ಹೆಚ್ಚು ರಸ್ತೆ ಗುಂಡಿಗಳನ್ನು ಸರಿಪಡಿಸಲಾಗಿದೆ. ಇಲ್ಲದೆ, ರೂ.660 ಕೋಟಿ ವೆಚ್ಚದಲ್ಲಿ ನವೆಂಬಲ್ ನಲ್ಲಿ 459 ಕಿಮೀ ವ್ಯಾಪ್ತಿಯ ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆಗಳ ಪ್ರಮುಖ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಈ ಪ್ರಮುಖ ರಸ್ತೆಗಳಲ್ಲಿ ಕಳೆದ ಕೆಲವು ವರ್ಷಗಳಿಂದ ರಸ್ತೆ ಅಭಿವೃದ್ಧಿ ಕಾಮಗಾರಿಗಳು ನಡೆದಿಲ್ಲ. ಹೀಗಾಗಿ 6000 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಬಳಿಕ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ಕುರಿತು ಮಾತನಾಡಿದ ಅವರು, ಅನಧಿಕೃತ ಕೇಬಲ್‌ಗಳನ್ನು ತೆರವುಗೊಳಿಸುವಂತೆ ಹಾಗೂ ಫುಟ್‌ಪಾತ್ ಒತ್ತುವರಿ ಮಾಡಿಕೊಂಡಿರುವ ದ್ವಿಚಕ್ರ ವಾಹನ ಶೋರೂಂ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗೋವಿಂದಪುರದಲ್ಲಿನ ರಸ್ತೆ ಗುಂಡಿಗೆ ಯುವಕನೋರ್ವನ ಸಾವು ಕುರಿತು ಮಾತನಾಡಿ, ಧ್ವಜ ಕಟ್ಟುವ ವೇಳೆ ಯುವಕ ಗುಂಡಿಗೆ ಬಿದ್ದಿದ್ದಾನೆಂದು ಹೇಳಿದರು.
ಸಂಪರ್ಕರಹಿತ ಖಾತಾ ವಿತರಣೆಯ ಕುರಿತು ಪ್ರತಿಕ್ರಿಯಿಸಿ, ಜಿಪಿಎಸ್ ಟ್ಯಾಗ್ ಮಾಡಲು ಮತ್ತು ಆಸ್ತಿಗಳನ್ನು ಅಪ್‌ಲೋಡ್ ಮಾಡಲು 200 ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಈ ಕಾರ್ಯಾಚರಣೆಯು ಆರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದರು.
Advertisement