ಬೀದಿ ನಾಯಿ ಹಾವಳಿ ತಡೆಗೆ ಮೈಕ್ರೋಚಿಪ್ ಅಳವಡಿಕೆ: BBMP ವಿನೂತನ ಪ್ರಯೋಗಕ್ಕೆ ಚಾಲನೆ

ಬಿಬಿಎಂಪಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳಿಗೆ ಪ್ರಾಯೋಗಿಕವಾಗಿ ಮೈಕ್ರೋ ಚಿಪ್ ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ಪಾಲಿಕೆಯ ಆರೋಗ್ಯ ಮತ್ತು ಪಶುಪಾಲನಾ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ಹೇಳಿದ್ದಾರೆ.
microchip for stray dogs in BBMP
ಬೀದಿನಾಯಿಗಳಿಗೆ ಮೈಕ್ರೋ ಚಿಪ್ ಅಳವಡಿಕೆ
Updated on

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವ್ಯಾಪಕವಾಗಿರುವ ಬೀದಿನಾಯಿ ಹಾವಳಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಮಹತ್ವದ ಕ್ರಮಕ್ಕೆ ಮುಂದಾಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ನಾಯಿಗಳಿಗೆ ಪ್ರಾಯೋಗಿಕವಾಗಿ ಮೈಕ್ರೋ ಚಿಪ್ ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳಿಗೆ ಪ್ರಾಯೋಗಿಕವಾಗಿ ಮೈಕ್ರೋ ಚಿಪ್ ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ಪಾಲಿಕೆಯ ಆರೋಗ್ಯ ಮತ್ತು ಪಶುಪಾಲನಾ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ಹೇಳಿದ್ದಾರೆ.

ನಗರದ ಪಶ್ಚಿಮ ವಲಯದ ಮತ್ತಿಕೆರೆ ಹಾಗೂ ಮಲ್ಲೇಶ್ವರ ವ್ಯಾಪ್ತಿಯಲ್ಲಿನ ಬೀದಿ ನಾಯಿಗಳಿಗೆ ಮೈಕ್ರೋ ಚಿಪ್‌ ಪ್ರಾಯೋಗಿಕವಾಗಿ ಅಳವಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೈಕ್ರೋ ಚಿಪ್ ತಂತ್ರಜ್ಞಾನದಿಂದ ನಾಯಿಯ ವಾಸಸ್ಥಳ, ಲಸಿಕೆ ನೀಡಿದ ದಿನಾಂಕ, ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿದ ದಿನಾಂಕ ಹಾಗೂ ಇನ್ನಿತರ ಅಂಶಗಳನ್ನು ಶಾಶ್ವತವಾಗಿ ಚಿಪ್‌ನಲ್ಲಿ ಶೇಖರಿಸಬಹುದಾಗಿದೆ ಎಂದರು.

ಮೈಕ್ರೋ ಚಿಪ್ ತಂತ್ರಜ್ಞಾನವನ್ನು ಈಗಾಗಲೇ ಹಲವಾರು ಸ್ಥಳೀಯ ಸಂಸ್ಥೆಗಳು ಬೀದಿ ನಾಯಿಗಳಿಗೆ ಅಳವಡಿಸಿಕೊಂಡಿದ್ದು, ಪಾಲಿಕೆ ವ್ಯಾಪ್ತಿಯಲ್ಲಿ ಬಿಝ್ ಆರ್ಬಿಟ್ ಎಂಬ ಸಂಸ್ಥೆಯ ಸಹಯೋಗದೊಂದಿಗೆ ಪ್ರಾಯೋಗಿಕವಾಗಿ ಬೀದಿ ನಾಯಿಗಳಿಗೆ ಅಳವಡಿಕೆ ಮಾಡಲಾಗುತ್ತಿದೆ. ಮೈಕ್ರೋ ಚಿಪ್ ಒಂದು ಅಕ್ಕಿಕಾಳು ಗಾತ್ರದ ಸಾಧನವಾಗಿದ್ದು, ಪ್ರಾಣಿಗಳಲ್ಲಿ ಶಾಶ್ವತ ಗುರುತಿನ ವಿಧಾನವಾಗಿರುತ್ತದೆ ಎಂದು ಮಾಹಿತಿ ನೀಡಿದರು.

microchip for stray dogs in BBMP
ಬೆಂಗಳೂರಿನಲ್ಲಿ ಮಿತಿ ಮೀರಿದ ಬೀದಿನಾಯಿ ಹಾವಳಿ; ಮೂರು ದಿನಗಳಲ್ಲಿ 2ನೇ ಪ್ರಕರಣ

ಆಧಾರ್ ಮಾದರಿಯಂತೆ ಶಾಶ್ವತ ಗುರುತಾಗಿ ಬಳಸಬಹುದು

ಇನ್ನು ಈ ಮೈಕ್ರೋ ಚಿಪ್ ಗಳನ್ನು ಆಧಾರ್ ಕಾರ್ಡ್ ಮಾದರಿಯಂತೆ ಶಾಶ್ವತ ಗುರುತಾಗಿ ಬಳಸಬಹುದು. ಇದನ್ನು ಪ್ರಾಣಿಗಳ ಚರ್ಮದ ಕೆಳಗೆ ಇಂಜೆಕ್ಷನ್ ಮೂಲಕ ಇರಿಸಲಾಗುತ್ತಿದೆ. ಇದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮಇರುವುದಿಲ್ಲ ಮತ್ತು ಇದು ಪ್ರಾಣಿಗಳ ಜೀವನ ಪರ್ಯಂತ ಶಾಶ್ವತ ಗುರುತಾಗಿ ಇದನ್ನು ಬಳಸಬಹುದಾಗಿರುತ್ತದೆ. ಇದು ಪ್ರಪಂಚದಾದ್ಯಂತ ಬಳಸಲಾಗುವ ಯುನಿಕ್ ಸಂಖ್ಯೆಯಾಗಿರುತ್ತದೆ.

ಈ ಅಭಿಯಾನ ಯಶಸ್ವಿಯಾದರೆ ಪಾಲಿಕೆಯ ಎಲ್ಲ ವಲಯಗಳಲ್ಲಿಯೂ ಬೀದಿ ನಾಯಿಗಳಿಗೆ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು. ಪಾಲಿಕೆ ವತಿಯಿಂದ ಬೀದಿ ನಾಯಿಗಳಿಗೆ ಸಂಯೋಜಿತ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲು ಉದ್ದೇಶಿಸಿದ್ದು, ಮೈಕ್ರೋ ಚಿಪ್ ಅಳವಡಿಸುವ ತಂತ್ರಜ್ಞಾನದಿಂದ ಬೀದಿ ನಾಯಿಗಳಿಗೆ ಮತ್ತೆ-ಮತ್ತೆ ಲಿಸಿಕೆ ಹಾಕುವುದನ್ನು ತಡೆಯಬಹುದಾಗಿದೆ ಎಂದು ಹೇಳಿದರು.

ಪಾಲಿಕೆಯ ಈ ಉಪಕ್ರಮವು ಬೀದಿನಾಯಿಗಳ ಸ್ಥಿತಿಯನ್ನು ನಿಖರವಾಗಿ ದಾಖಲಿಸುವ ಗುರಿಯನ್ನು ಹೊಂದಿದ್ದು, ವ್ಯಾಕ್ಸಿನೇಷನ್ ಮತ್ತು ಇತರ ಪ್ರಕ್ರಿಯೆಗಳ ಅತಿಕ್ರಮಣವನ್ನು ತಪ್ಪಿಸುತ್ತದೆ. "ಪ್ರಸ್ತುತ, ಲಸಿಕೆ ಹಾಕಲಾದ ಬೀದಿನಾಯಿಗಳನ್ನು ನಿಗಮದ ವ್ಯಾಪ್ತಿಯಲ್ಲಿ ಬಣ್ಣ ಬಳಸಿ ಗುರುತಿಸಲಾಗುತ್ತಿದೆ. ಈ ರೀತಿಯ ಬಣ್ಣಗಳು ಇದು ಒಂದು ವಾರದೊಳಗೆ ಮಸುಕಾಗಬಹುದು. ಅಲ್ಲದೆ ಇದು ಸಂಭಾವ್ಯ ಮರು-ಲಸಿಕೆಗೆ ಕಾರಣವಾಗುತ್ತದೆ. ಈ ತಂತ್ರಜ್ಞಾನದ ಅಳವಡಿಕೆಯು ಈ ನ್ಯೂನತೆಯನ್ನು ನಿವಾರಿಸುತ್ತದೆ ಮತ್ತು ನಾಯಿಗಳಿಗೆ ಲಸಿಕೆಗಳ ಬಗ್ಗೆ ನಿಖರವಾದ ಮಾಹಿತಿಯನ್ನು ನೀಡುತ್ತದೆ ಎಂದು ಬಿಬಿಎಂಪಿ ಪಶುಸಂಗೋಪನಾ ಇಲಾಖೆಯ ಹಿರಿಯ ಅಧಿಕಾರಿ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com