ಪ್ರೀತಿ ನಿರಾಕರಿಸಿದ ಬಾಲಕಿಯ ಹತ್ಯೆಗೈದ ಪಾಗಲ್ ಪ್ರೇಮಿ!

ಪ್ರೀತಿ ನಿರಾಕರಿಸಿದ 15 ವರ್ಷದ ಬಾಲಕಿಯೊಬ್ಬಳನನ್ನು ಪಾಗಲ್ ಪ್ರೇಮಿಯೊಬ್ಬ ಹತ್ಯೆ ಮಾಡಿರುವ ಘಟನೆಯೊಂದು ಅನುಗೊಂಡನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಪ್ರೀತಿ ನಿರಾಕರಿಸಿದ 15 ವರ್ಷದ ಬಾಲಕಿಯೊಬ್ಬಳನನ್ನು ಪಾಗಲ್ ಪ್ರೇಮಿಯೊಬ್ಬ ಹತ್ಯೆ ಮಾಡಿರುವ ಘಟನೆಯೊಂದು ಅನುಗೊಂಡನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕೋಲಾರ ಜಿಲ್ಲೆಯ ಬರಗೂರು ಗ್ರಾಮದ ನಿವಾಸಿ ಹತ್ಯೆಯಾದ ಬಾಲಕಿಯಾಗಿದ್ದಾಳೆ. ನಿತಿನ್ (23) ಬಾಲಕಿಯನ್ನ ಹತ್ಯೆಗೈದ ಆರೋಪಿಯಾಗಿದ್ದಾನೆ.

ತನ್ನನ್ನು ಪ್ರೀತಿಸುವಂತೆ ಈತ ಬಾಲಕಿಯ ಹಿಂದೆ ಬಿದ್ದಿದ್ದ. 15 ದಿನಗಳ ಹಿಂದೆ ಕೂಡ ಆಕೆಯನ್ನು ಚುಡಾಯಿಸಿದ್ದ. ಇದರಿಂದ ಬೇಸತ್ತಿದ್ದ ಬಾಲಕಿ ಪೋಷಕರಿಗೆ ಈ ಬಗ್ಗೆ ತಿಳಿಸಿ, ಮಾಲೂರು ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದಳು. ಬಳಿಕ ಎರಡೂ ಗ್ರಾಮದ ಜನರು ಪರಸ್ಪರ ಕುಳಿತು ಮಾತನಾಡಿ, ರಾಜಿ ಮಾಡಿಸಿದ್ದರು.

ಕಳೆದ ಬುಧವಾರ ಶಾಲೆಗೆ ಹೋಗಿದ್ದ ಬಾಲಕಿ ಮನೆಗೆ ವಾಪಸ್ಸಾಗಿರಲಿಲ್ಲ. ಬಳಿಕ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಈ ಮಧ್ಯ ಗುರುವಾರ ಸಂಜೆ ಹೊಸಕೋಟೆ ಸಮೀಪದ ಬಾಣರಹಳ್ಳಿ ಗ್ರಾಮದ ಪೊದೆಗಳ ಮಧ್ಯೆ ಮೃತ ವ್ಯಕ್ತಿ ಪತ್ತೆಯಾಗಿದ್ದು, ಕುರಿ ಮೇಯಿಸುತ್ತಿದ್ದಾಗ ಕೆಲವರು ಇದನ್ನು ಗಮನಿಸಿದ್ದಾರೆ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಈ ನಡುವೆ ನಿತಿನ್ ಕೂಡ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಬಳಿಕ ಕುಟುಂಬಸ್ಥರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇದೀಗ ನಿತಿನ್ ಇನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಚಿಕಿತ್ಸೆ ಮುಂದುವರೆದಿರುವ ಕಾರಣ ಬಾಲಕಿಯ ಅಪಹರಣ ಹಾಗೂ ಹತ್ಯೆ ಕುರಿತು ಮಾಹಿತಿಗಳು ಲಭ್ಯವಾಗಿಲ್ಲ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಅನುಗೊಂಡನಹಳ್ಳಿ ಪೊಲೀಸರು ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com