ಬಿಸಿಲ ಝಳಕ್ಕೆ ಜನತೆ ಹೈರಾಣ: ಬೆಂಗಳೂರಿನಲ್ಲಿ ವಾಡಿಕೆಗಿಂತ 2-3 ಪಟ್ಟು ಹೆಚ್ಚಿನ ತಾಪಮಾನ ದಾಖಲು!

ರಾಜ್ಯದಾದ್ಯಂತ ಈ ಬಾರಿ ಕಾಡಿದ ತೀವ್ರ ಮಳೆ ಕೊರತೆಯ ಬೆನ್ನಲ್ಲೇ ಬೇಸಿಗೆಯೂ ಜನಜೀವನದ ಮೇಲೆ ಬರೆ ಎಳೆಯಲು ಸಿದ್ಧವಾದಂತಿದೆ. ಫೆಬ್ರವರಿ ಆರಂಭವಾಗಿ ಇನ್ನೂ ವಾರ ಕಳೆಯುತ್ತಿರುವಾಗಲೇ, ಕಳೆದೆರಡು ದಿನಗಳಿಂದ ರಾಜ್ಯದಾದ್ಯಂತ ಬಿಸಿಲ ಅಬ್ಬರ ಜೋರಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಾದ್ಯಂತ ಈ ಬಾರಿ ಕಾಡಿದ ತೀವ್ರ ಮಳೆ ಕೊರತೆಯ ಬೆನ್ನಲ್ಲೇ ಬೇಸಿಗೆಯೂ ಜನಜೀವನದ ಮೇಲೆ ಬರೆ ಎಳೆಯಲು ಸಿದ್ಧವಾದಂತಿದೆ. ಫೆಬ್ರವರಿ ಆರಂಭವಾಗಿ ಇನ್ನೂ ವಾರ ಕಳೆಯುತ್ತಿರುವಾಗಲೇ, ಕಳೆದೆರಡು ದಿನಗಳಿಂದ ರಾಜ್ಯದಾದ್ಯಂತ ಬಿಸಿಲ ಅಬ್ಬರ ಜೋರಾಗಿದೆ.

ರಾಜ್ಯ ರಾಜಧಾನಿ ಬೆಂಗಲೂರಿನಲ್ಲಿ ತಾಪಮಾನ ವಾಡಿಕೆಗಿಂತ 2-3 ಪಟ್ಟು ಹೆಚ್ಚಾಗಿದ್ದು, ಇತ್ತೀಚಿನ ವರ್ಷಗಳಲ್ಲೀ ಈ ಅವಧಿಯಲ್ಲಿ ಇದು ಅತೀ ಹೆಚ್ಚಿನ ತಾಪಮಾನವಾಗಿದೆ ಎಂದು ಹೇಳಲಾಗುತ್ತಿದೆ. ಮಾರ್ಚ್, ಏಪ್ರಿಲ್ ನಲ್ಲಿ ಈ ತಾಪಮಾನ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.

ಮುಂದಿನ 2 ದಿನಗಳಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಕಡೆ ತಾಪಮಾನ ಏರಿಕೆಯಾಗಲಿದೆ. ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್​ನಷ್ಟು ಬಿಸಿಲು ಹೆಚ್ಚಲಿದೆ ಎಂದು  ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರಿನಲ್ಲಿ ಗುರುವಾರ 34.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದರೆ, ಶುಕ್ರವಾರ ಗರಿಷ್ಠ ತಾಪಮಾನ 33.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಕಲಬುರಗಿಯಲ್ಲಿ ಶುಕ್ರವಾರ 37.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ.

ಬೇಸಿಗೆ ಈಗಲೇ ಆರಂಭವಾಗಿದೆ. ಕಳೆದ ಮೂರು ದಿನಗಳಲ್ಲಿ ತಾಪಮಾನವು 2 ಡಿಗ್ರಿ ಸೆಲ್ಸಿಯಸ್ ನಷ್ಟು ಹೆಚ್ಚಾಗಿದೆ. ಬೆಳಗಿನ ತಾಪಮಾನವು 13.8 ರಿಂದ 17 ಡಿಗ್ರಿ ಸೆಲ್ಸಿಯಸ್‌ನಷ್ಟಿರುವುದರಿಂದ ಜನರು ಬಿಸಿಲ ಬೇಗೆಗೆ ತತ್ತರಿಸುತ್ತಿದ್ದಾರೆ. ಅಲ್ಪಾವಧಿಯಲ್ಲಿ ಈ ತಾಪಮಾನ 33-34 ಡಿಗ್ರಿ ಸೆಲ್ಸಿಯಸ್‌ಗೆ ಏರುತ್ತದೆವ ಐಎಂಡಿ ವಿಜ್ಞಾನಿ ಎ ಪ್ರಸಾದ್ ಅವರು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮುಂಜಾನೆ ತಾಪಮಾನವು 17 ಡಿಗ್ರಿ ಸೆಲ್ಸಿಯಸ್ ನಷ್ಟಿರುತ್ತದೆ. ಬೆಳಿಗ್ಗೆ 9-10 ಗಂಟೆ ವೇಳೆದೆ ಈ ತಾಪಮಾನ ಇದ್ದಕ್ಕಿದ್ದಂತೆ ಏರಿಕೆಯಾಗುತ್ತದೆ. ಮುಂಬರುವ ದಿನಗಳಲ್ಲಿ ತಾಪಮಾನ ಕಡಿಮೆಯಾಗುವ ಸಾಧ್ಯತೆಗಳೂ ಇವೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com