ಬೆಂಗಳೂರಿನ ಹೊರವಲಯದಲ್ಲಿ ಹುಲಿಗಳ ಓಡಾಟ ಹೆಚ್ಚಳ: ಮಾನವ-ಪ್ರಾಣಿ ಸಂಘರ್ಷದ ಆತಂಕ, ಕ್ರಮಕ್ಕೆ ಅಧಿಕಾರಿಗಳು ಮುಂದು

ಒಂದು ತಿಂಗಳ ಹಿಂದೆ, ಹಲವಾರು ಹುಲಿಗಳಿಗೆ ನೆಲೆಯಾಗಿರುವ ಸಫಾರಿ ವಲಯದ ಬಳಿಯಿರುವ ಬನ್ನೇರುಘಟ್ಟ ಮೃಗಾಲಯದ ಗಡಿಯ ಬಳಿ ಒಂಟಿ ಗಂಡು ಹುಲಿ ಕಾಣಿಸಿಕೊಂಡಿತ್ತು. ಬಳಿಕ ಆಗಾಗ್ಗೆ ಮಾನವ-ಆನೆ ಸಂಘರ್ಷಕ್ಕೆ ಒಳಗಾಗುವ ಪ್ರದೇಶವಾದ ಹಾರೋಹಳ್ಳಿ ಬಳಿ ಮತ್ತೊಂದು ಹುಲಿ ಕಾಣಿಸಿಕೊಂಡಿತ್ತು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಬೆಂಗಳೂರಿನ ಹೊರವಲಯದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿದ್ದು, ವ್ಯಾಘ್ಯನ ಹೆಜ್ಜೆ ಗುರುತುಗಳು ಅಲ್ಲಲ್ಲಿ ಕಂಡು ಬರುತ್ತಿದೆ. ಇದು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ.

ಅರಣ್ಯ ಇಲಾಖೆ ಸರಕ್ಷಣೆಯ ಪ್ರಯತ್ನಗಳಿಂದಲೂ ಅಥವಾ ಹುಲಿ ಮೀಸಲು ಪ್ರದೇಶಗಲ್ಲಿ ಹುಲಿಗಳ ಸಂಖ್ಯೆ ಹೆಚ್ಟಳದಿಂದೋ ಹುಲಿಗಳು ಇದೀಗ ಹಕ್ಕು ಸಾಧಿಸಲು ದೂರದ ಪ್ರದೇಶಗಳಿಗೆ ವಲಸೆ ಹೋಗುತ್ತಿವೆ. ಇದರಿಂದಾಗಿ ಬೆಂಗಳೂರಿನ ಹತ್ತಿರದಲ್ಲಿರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ (ಬಿಎನ್‌ಪಿ) ಭೂದೃಶ್ಯದಲ್ಲಿ ಒಂದಕ್ಕಿಂತ ಹೆಚ್ಚು ಹುಲಿಗಳು ಓಡಾಡುತ್ತಿರುವುದು ಕಂಡು ಬರುತ್ತಿದೆ.

ಬೆಂಗಳೂರು ಹೊರವಲಯದಲ್ಲಿ ಹುಲಿಗಳ ಓಡಾಟ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿಗಳ ಸಂಖ್ಯೆ ತಿಳಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ.

ಒಂದು ತಿಂಗಳ ಹಿಂದೆ, ಹಲವಾರು ಹುಲಿಗಳಿಗೆ ನೆಲೆಯಾಗಿರುವ ಸಫಾರಿ ವಲಯದ ಬಳಿಯಿರುವ ಬನ್ನೇರುಘಟ್ಟ ಮೃಗಾಲಯದ ಗಡಿಯ ಬಳಿ ಒಂಟಿ ಗಂಡು ಹುಲಿ ಕಾಣಿಸಿಕೊಂಡಿತ್ತು. ಬಳಿಕ ಆಗಾಗ್ಗೆ ಮಾನವ-ಆನೆ ಸಂಘರ್ಷಕ್ಕೆ ಒಳಗಾಗುವ ಪ್ರದೇಶವಾದ ಹಾರೋಹಳ್ಳಿ ಬಳಿ ಮತ್ತೊಂದು ಹುಲಿ ಕಾಣಿಸಿಕೊಂಡಿತ್ತು.

ಸಂಗ್ರಹ ಚಿತ್ರ
ಕಳೆದ 20 ವರ್ಷಗಳಲ್ಲಿ ಹುಲಿ ವಾಸ ಪ್ರದೇಶ ಶೇ.30ರಷ್ಟು ಏರಿಕೆ; ಅಧ್ಯಯನ ವರದಿ

ರಾಷ್ಟ್ರೀಯ ಉದ್ಯಾನವನದಲ್ಲಿ ಎರಡು ಅಥವಾ ಮೂರು ಹುಲಿಗಳು ಓಡಾಡುತ್ತಿದ್ದು, ಹುಲಿಯ ಹಲವಾರು ಹೆಜ್ಜೆ ಗುರುತುಗಳನ್ನು ಪತ್ತೆ ಮಾಡಲಾಗಿದೆ. ಆದರೆ, ಹುಲಿಗಳನ್ನು ಪತ್ತೆ ಮಾಡಲಾಗಿಲ್ಲ ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಜ್ಯ ರಾಜಧಾನಿ ಉದ್ಯಾನವನದ ಹತ್ತಿರದಲ್ಲೇ ಇದ್ದು, ಈ ಪ್ರದೇಶ ಹುಲಿಗಳಿಗೆ ಸುರಕ್ಷಿತವಲ್ಲ. ಇದು ಮಾನವ-ಪ್ರಾಣಿ ಸಂಘರ್ಷಕ್ಕೆ ಕಾರಣವಾಗಲಿದೆ ಎಂದು ಹೇಳಿದ್ದಾರೆ.

ಕರ್ನಾಟಕದ ಹುಲಿ ಮೀಸಲು ಪ್ರದೇಶಗಳಲ್ಲಿ ಹುಲಿಗಳು, ಬೇಟೆ ಮತ್ತು ಇತರ ಸಸ್ತನಿಗಳ ಸ್ಥಿತಿ' ಕುರಿತು ಇತ್ತೀಚೆಗಷ್ಟೇ ವರದಿಯೊಂದು ಬಿಡುಗಡೆಯಾಗಿದ್ದು, ವರದಿಯಲ್ಲಿ ಸುರಕ್ಷಿತ ಆವಾಸಸ್ಥಾನಗಳು ಮತ್ತು ಬೇಟೆಯನ್ನು ಹುಡುಕುತ್ತಾ ದೂರದವರೆಗೆ ವಲಸೆ ಹೋಗುವ ಹುಲಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದಾಗಿ ತಿಳಿಸಲಾಗಿದೆ.

"ಹುಲಿಗಳ ಸಂಖ್ಯೆಯನ್ನು ಖಚಿತಪಡಿಸಿಕೊಳ್ಳಲು ಪ್ರಸ್ತುತ ಕ್ಯಾಮೆರಾ ಟ್ರ್ಯಾಪ್ ಚಿತ್ರಗಳನ್ನು ಪರಿಶೀಲಿಸಲಾಗುತ್ತಿದೆ. ಪರಿಶೀಲನೆ ವೇಳೆ ಒಂದಕ್ಕಿಂತ ಹೆಚ್ಚು ಹುಲಿಗಳು ಇರುವುದು ಕಂಡು ಬಂದಿದೆ. ಈ ಹುಲಿಗಳು ಎಲ್ಲಿಂದ ಬಂದಿರಬಹುದು ಎಂಬುದನ್ನು ಪತ್ತೆಹಚ್ಚಲು ಇತರ ಹುಲಿ ಮೀಸಲು ಪ್ರದೇಶಗಳು ಮತ್ತು ರಾಷ್ಟ್ರೀಯ ಉದ್ಯಾನವನಗಳ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಬೇಕಾಗಿದೆ ಎಂದು ಬಿಎನ್‌ಪಿ ಅರಣ್ಯ ಉಪ ಸಂರಕ್ಷಣಾಧಿಕಾರಿ ಕಾಜೋಲ್ ಎ ಪಾಟೀಲ್ ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com