BMTC ಬಸ್ ಗಳ ಮೇಲೆ ಜಾಹೀರಾತು ಪ್ರಕಟ: ಸಾರಿಗೆ-ಖಾಸಗಿ ಬಸ್ ನಡುವಿನ ವ್ಯತ್ಯಾಸ ತಿಳಿಯುವಲ್ಲಿ ಪ್ರಯಾಣಿಕರಿಗೆ ಗೊಂದಲ!

ಮೊದಲು, ಬಸ್‌ಗಳನ್ನು ಗುರುತಿಸುವುದು ನನಗೆ ಸುಲಭವಾಗಿತ್ತು. ಆದರೆ ಒಂದು ತಿಂಗಳಿಂದ ಸಮಸ್ಯೆಯಾಗುತ್ತಿದೆ. ಇಡೀ ಬಸ್ ಜಾಹೀರಾತುಗಳಿಂದ ತೊಂದರೆಯಾಗುತ್ತಿದೆ.
ಬಿಎಂಟಿಸಿ ಬಸ್
ಬಿಎಂಟಿಸಿ ಬಸ್
Updated on

ಬೆಂಗಳೂರು: ಆದಾಯ ಹೆಚ್ಚಿಸಿಕೊಳ್ಳುವ ಸಲುವಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್‌ಗಳ ಮೇಲೆ ಜಾಹೀರಾತುಗಳ ಪ್ರಕಟಕ್ಕೆ ಅನುಮತಿ ನೀಡಿದ್ದು, ಇದರಿಂದ ಪ್ರಯಾಣಿಕರು ವಿಶೇಷವಾಗಿ ವೃದ್ಧರು ತಮ್ಮ ಬಸ್ ಗಳನ್ನು ತ್ವರಿತವಾಗಿ ಗುರುತಿಸುವಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಮೊದಲು, ಬಸ್‌ಗಳನ್ನು ಗುರುತಿಸುವುದು ನನಗೆ ಸುಲಭವಾಗಿತ್ತು. ಆದರೆ ಒಂದು ತಿಂಗಳಿಂದ ಸಮಸ್ಯೆಯಾಗುತ್ತಿದೆ. ಇಡೀ ಬಸ್ ಜಾಹೀರಾತುಗಳಿಂದ ತೊಂದರೆಯಾಗುತ್ತಿದೆ ಎಂದು ಬಿಎಂಟಿಸಿ ಬಸ್ ಪ್ರಯಾಣಿಕರಾಗಿರುವ ಮಾಲತಿ ಎಂಬುವವರು ಹೇಳಿದ್ದಾರೆ.

ಈ ಹಿಂದೆ ಬಸ್ ಎಲ್ಲಿಗೆ ಪ್ರಯಾಣಿಸುತ್ತಿದೆ ಮತ್ತು ಯಾವಾಗ ಇಳಿಯಲು ಸಿದ್ಧರಾಗಿರಬೇಕು ಎಂದು ಸುಲಭವಾಗಿ ತಿಳಿಯಬಹುದಿತ್ತು. ಆದರೆ, ಇತ್ತೀಚೆಗೆ ಬಸ್ ಪಕ್ಕದ ಫಲಕಗಳಲ್ಲಿಯೂ ಜಾಹೀರಾತುಗಳನ್ನ ಲಗತ್ತಿಸುತ್ತಿರುವುದರಿಂದ ಸಮಸ್ಯೆಯಾಗುತ್ತಿದೆ ಎಂದು ತಿಳಿಸಿದ್ದಾರೆ.

60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ BMTC ಅನ್ನು ನಿಯಮಿತವಾಗಿ ಬಳಸುವ ಅನೇಕ ಹಿರಿಯ ನಾಗರಿಕರು, ಬಸ್‌ಗಳನ್ನು ಗುರುತಿಸಲು ಕಷ್ಟ ಪಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಬಿಎಂಟಿಸಿ ಬಸ್
ಬಿಎಂಟಿಸಿ ಬಸ್ ಗಳ ಮೇಲೆ ಮದ್ಯ ಉತ್ಪನ್ನಗಳ ಜಾಹೀರಾತು: ಸಾಮಾಜಿಕ ಕಾರ್ಯಕರ್ತರ ಆಕ್ರೋಶ

ನಗರದಾದ್ಯಂತ BMTC ಬಸ್‌ಗಳ ಸಂಚಾರ ಇದ್ದು, ಪ್ರತಿಯೊಂದು ಟ್ರಾಫಿಕ್ ಸಿಗ್ನಲ್‌ನಲ್ಲೂ ಬಸ್ ಗಳ ಮೇಲೆ ಸಂಪೂರ್ಣ ಜಾಹೀರಾತುಗಳನ್ನು ಹಾಕಲಾಗಿರುತ್ತದೆ. BMTC ಗೆ ಆದಾಯ ಉತ್ಪಾದನೆ ಅಗತ್ಯವಿದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳುತ್ತೇನವೆ. ಆದರೆ, ಅಂತರರಾಷ್ಟ್ರೀಯ ಖ್ಯಾತಿಯ ನಗರವಾದ ಬೆಂಗಳೂರಿನಲ್ಲಿ ಸಾರಿಗೆ ಬಸ್ಸಿನ ಸುತ್ತಲೂ ಜಾಹೀರಾತು ಹಾಕುವುದು ಸೌಂದರ್ಯವನ್ನು ಹಾಳು ಮಾಡುತ್ತದೆ. ಈ ಮಾರ್ಗದಲ್ಲಿ ಅಲ್ಲದೆ, ಬೇರೆ ಜಾಹೀರಾತುಗಳ ಮೂಲಕವೂ ಬಿಎಂಟಿಸಿ ಆದಾಯ ಗಳಿಸಬಹುದು ಎಂದು ಬ್ಯಾಂಕ್ ಉದ್ಯೋಗಿ ಹರೀಶ್ ಕುಮಾರ್ ಎಂಬುವವರು ಹೇಳಿದ್ದಾರೆ.

ಶಕ್ತಿ ಯೋಜನೆಯಿಂದಾಗಿ ಬಿಎಂಟಿಸಿ ಆದಾಯ ಕಡಿಮೆಯಾಗಿದ್ದು, ಇದೀಗ ಜಾಹೀರಾತು ಆದಾಯ ಮೂಲಗಳಲ್ಲಿ ಒಂದಾಗಿದೆ. ಬಸ್‌ಗಳ ಹಿಂದಿನ ಫಲಕದಲ್ಲಿ ಜಾಹೀರಾತುಗಳನ್ನು ಅನುಮತಿಸಲಾಗುತ್ತಿದೆ. ಬಸ್ಸಿನ ಸುತ್ತಲೂ ಸಂಪೂರ್ಣ ಜಾಹೀರಾತು ಹಾಕುವುದು ಹೆಚ್ಚಿನ ಆದಾಯ ನೀಡುತ್ತಿದೆ ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಬಸ್‌ಗಳ ಪಕ್ಕದ ಫಲಕಗಳಲ್ಲಿನ ಜಾಹೀರಾತುಗಳು 'ಪಾರದರ್ಶಕ'ವಾಗಿದ್ದರೆ, ಉಳಿದವು ವಾಲ್ ಪೇಪರ್ ರೀತಿಯಲ್ಲಿ ಮಾಡಲ್ಪಟ್ಟಿದೆ. ಈ ಜಾಹೀರಾತುಗಳು ಯಾವುದೇ ರೀತಿಯಲ್ಲಿ ಬಸ್ ಸೂಚನಾ ಫಲಕಗಳು, ಮುಂಭಾಗ ಮತ್ತು ಹಿಂಭಾಗದ ದೀಪಗಳು, ಡಿಪೋ ಸಂಖ್ಯೆಗಳು, ವಾಹನ ನೋಂದಣಿ ಸಂಖ್ಯೆ ಮತ್ತು ಇತರವುಗಳನ್ನು ನಿರ್ಬಂಧಿಸಬಾರದು ಎಂಬುದು ಷರತ್ತುಗಳಾಗಿವೆ ಎಂದು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com