
ಬೆಂಗಳೂರು: ಅತ್ಯಾಧುನಿಕ ಕೃತಕ ಬುದ್ಧಿಮತ್ತೆ (AI) ಮತ್ತು ಡ್ರೋನ್ ತಂತ್ರಜ್ಞಾನದೊಂದಿಗೆ ಸಂಚಾರ ನಿರ್ವಹಣೆಯನ್ನು ಪರಿವರ್ತಿಸುವಲ್ಲಿ ಬೆಂಗಳೂರು ಮುಂಚೂಣಿಯಲ್ಲಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭಾನುವಾರ ಹೇಳಿದ್ದು, ಇದರ ಬೆನ್ನಲ್ಲೇ ವಾಸ್ತವ ಸ್ಥಿತಿ ಕುರಿತು ಜನತೆ ಕಿಡಿಕಾರಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದ ಡಿಕೆ.ಶಿವಕುಮಾರ್ ಅವರು, ಅತ್ಯಾಧುನಿಕ ಕೃತಕ ಬುದ್ಧಿಮತ್ತೆ (AI) ಮತ್ತು ಡ್ರೋನ್ ತಂತ್ರಜ್ಞಾನದ ಮೂಲಕ ನಗರದ ಸಂಚಾರ ನಿರ್ವಹಣೆ ಪರಿವರ್ತನೆಗೊಂಡಿದ್ದು, ತ್ವರಿತ ತುರ್ತು ಪ್ರತಿಕ್ರಿಯೆಯಿಂದ ಸುಗಮ ಪ್ರಯಾಣ, ನಮ್ಮ ನಗರವು ಸ್ಮಾರ್ಟ್ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಬದಲಾಗುತ್ತಿದೆ. ಇದು ನಗರ ಚಲನಶೀಲತೆಯ ಭವಿಷ್ಯ ಮತ್ತು ನಮ್ಮ ಬೆಂಗಳೂರನ್ನು ಮುನ್ನಡೆಸುತ್ತಿದೆ ಎಂದು ಹೇಳಿದ್ದರು.
ಸಚಿವ ಈ ಪೋಸ್ಟ್ ಕುರಿತು ಜನತೆ ನಿರಾಸೆ ವ್ಯಕ್ತಪಡಿಸಿದ್ದು, ದೈನಂದಿನ ಸಂಚಾರ ಸಮಸ್ಯೆಗಳು ಮತ್ತು ನಾಗರಿಕ ಸಮಸ್ಯೆಗಳ ಕುರಿತು ಧ್ವನಿ ಎತ್ತಿದ್ದಾರೆ.
ವ್ಯಕ್ತಿಯೋರ್ವ ಡಿಕೆ.ಶಿವಕುಮಾರ್ ಅವರ ಪೋಸ್ಟ್'ಗೆ ಪ್ರತಿಕ್ರಿಯಿಸಿ, 10 ಕ್ಕೂ ಹೆಚ್ಚು ರಸ್ತೆ ಗುಂಡಿಗಳು, ಚರಂಡಿಗಳ ಕಳಪೆ ಸ್ಥಿತಿ, ಬೀದಿ ದೀಪಗಳ ಸಮಸ್ಯೆಗಳ ಕುರಿತು ಧ್ವನಿ ಎತ್ತಿದ್ದು, ಮೂಲಸೌಕರ್ಯಗಳೇಕೆ ಹಿಂದುಳಿದಿದೆ ಎಂದು ಪ್ರಶ್ನಿಸಿದ್ದಾರೆ.
ಮತ್ತೊಬ್ಬ ಬಳಕೆದಾರ, "ಸರ್ ದಯವಿಟ್ಟು ORR ಎಂಬ ರಸ್ತೆಗೆ ಬಂದು ಜಯದೇವ ರಸ್ತೆಯಿಂದ ಬಳಗೆರೆ ರಸ್ತೆಗೆ ಪ್ರಯಾಣಿಸಿ. ಬಳಿಕ ವರ್ತೂರು ಅಂಡರ್‌ಪಾಸ್‌ನಿಂದ ಬೆಳ್ಳಂದೂರಿಗೆ ಹಿಂತಿರುಗಿ. ಮಳೆಗಾಲ ಸಮಯದಲ್ಲಿ ಬನ್ನಿ ಎಂದು ಹೇಳಿದ್ದಾರೆ.
ಮೊದಲು ನಗರದ ರಸ್ತೆಗಳು, ಪಾದಚಾರಿ ಮಾರ್ಗಗಳನ್ನು ಸರಿಪಡಿಸಿ, ಬೀದಿ ವ್ಯಾಪಾರಿಗಳನ್ನು ತೆರವುಗೊಳಿಸಿ, ಪಾರ್ಕಿಂಗ್ ಸ್ಥಳಗಳನ್ನು ಸರಿಪಡಿಸಿ, ಪಾರ್ಕಿಂಗ್ ಮತ್ತು ಸಂಚಾರ ಉಲ್ಲಂಘನೆ ನಿಯಮಗಳನ್ನು ಜಾರಿಗೊಳಿಸಿ, ಹೆಚ್ಚಿನ BMTC ಬಸ್‌ಗಳನ್ನು ಖರೀದಿಸಿ, ಎಲ್ಲಾ ಸರ್ಕಾರಿ ಸಂಸ್ಥೆಗಳಲ್ಲಿ ಭ್ರಷ್ಟಾಚಾರವನ್ನು ಕಡಿಮೆ ಮಾಡಿ. ವಿಶ್ವದ ಅತ್ಯುತ್ತಮ ನಗರಗಳು ಇದನ್ನೇ ಮಾಡುತ್ತವೆ. ಇದೇನು ರಾಕೆಟ್ ಸೈನ್ಸ್ ಅವ್ಲ ಎಂದು ಮತ್ತೊಬ್ಬ ಬಳಕೆದಾರ ಹೇಳಿದ್ದಾರೆ.
Advertisement