Bike Taxi
ಬೈಕ್ ಟ್ಯಾಕ್ಸಿ ಸಾಂದರ್ಭಿಕ ಚಿತ್ರ

ಕರ್ನಾಟಕ ಹೈಕೋರ್ಟ್ ಸ್ಪಷ್ಟೀಕರಣ: ಮತ್ತೆ ಬೈಕ್ ಟ್ಯಾಕ್ಸಿ ಸೇವೆ ಸ್ಥಗಿತ; ಪ್ರಯಾಣಿಕರಿಗೆ ಸಂಕಷ್ಟ

ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳನ್ನು ನಿರ್ವಹಿಸಲು ಅಗ್ರಿಗೇಟರ್‌ಗಳಿಗೆ ಅನುಮತಿ ನೀಡುವ ಯಾವುದೇ ಆದೇಶವನ್ನು ಹೊರಡಿಸಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
Published on

ಬೆಂಗಳೂರು: ಎರಡು ತಿಂಗಳ ನಿಷೇಧದ ನಂತರ ಸ್ವಲ್ಪ ಸಮಯದವರೆಗೆ ಕಾರ್ಯಾಚರಣೆಯನ್ನು ಪುನರಾರಂಭಿಸಿದ್ದ ಬೈಕ್ ಟ್ಯಾಕ್ಸಿ ಸೇವೆಗಳನ್ನು ಕರ್ನಾಟಕದಲ್ಲಿ ಮತ್ತೆ ಸ್ಥಗಿತಗೊಳಿಸಲಾಗಿದೆ. ಓಲಾ ಮತ್ತು ಉಬರ್‌ನಂತಹ ವೇದಿಕೆಗಳಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳನ್ನು ಒದಗಿಸಲಾಗುತ್ತಿತ್ತು.

ಆಗಸ್ಟ್ 22 ರಂದು ಕರ್ನಾಟಕ ಹೈಕೋರ್ಟ್ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳನ್ನು ನಿರ್ವಹಿಸಲು ಅಗ್ರಿಗೇಟರ್‌ಗಳಿಗೆ ಅನುಮತಿ ನೀಡುವ ಯಾವುದೇ ಆದೇಶವನ್ನು ಹೊರಡಿಸಿಲ್ಲ ಎಂದು ಸ್ಪಷ್ಟಪಡಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

ಈ ಕ್ರಮ ಇದೀಗ ಬೆಂಗಳೂರಿನಲ್ಲಿ ಸಾವಿರಾರು ಪ್ರಯಾಣಿಕರನ್ನು ಗೊಂದಲಕ್ಕೀಡು ಮಾಡಿದೆ. ಬೈಕ್ ಟ್ಯಾಕ್ಸಿಗಳು ಒಂದು ಪ್ರಮುಖ, ಕಡಿಮೆ-ವೆಚ್ಚದ ಸಾರಿಗೆ ವಿಧಾನವಾಗಿದ್ದು, ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಇದೀಗ ಆ ಸೇವೆಗಳನ್ನು ಸ್ಥಳಗಿತಗೊಳಿಸಿರುವುದರಿಂದ ಪ್ರಯಾಣದ ಸವಾಲುಗಳನ್ನು ಇನ್ನಷ್ಟು ಹದಗೆಡಿಸುತ್ತದೆ. ಪ್ರಯಾಣ ವೆಚ್ಚವನ್ನು ಹೆಚ್ಚಿಸುತ್ತದೆ ಮತ್ತು ವಿಶೇಷವಾಗಿ ವಿದ್ಯಾರ್ಥಿಗಳು, ಕಚೇರಿಗೆ ಹೋಗುವವರು ಮತ್ತು ದಿನಗೂಲಿ ಕಾರ್ಮಿಕರ ಮೇಲೆ ಪರಿಣಾಮ ಬೀರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಈ ಅನಿಶ್ಚಿತತೆಯ ವಿರುದ್ಧ ಸಾಮಾಜಿಕ ಮಾಧ್ಯಮ ಬಳಕೆದಾರರು ಕಿಡಿಕಾರಿದ್ದಾರೆ.

Bike Taxi
ಬೆಂಗಳೂರಿನಲ್ಲಿ ಇಂದಿನಿಂದ ಬೈಕ್ ಟ್ಯಾಕ್ಸಿ ಸೇವೆ ಸ್ಥಗಿತ

ಅಮಿತ್ ಎಂಬ ಪ್ರಯಾಣಿಕ, 'ಮಾನ್ಯ ಮುಖ್ಯಮಂತ್ರಿಗಳೇ ಮತ್ತು ಉಪಮುಖ್ಯಮಂತ್ರಿಗಳೇ, ಬೈಕ್ ಟ್ಯಾಕ್ಸಿಗಳ ಮೇಲೆ ಮತ್ತೆ ಈ ನಿಷೇಧ ಏಕೆ? ಜನರು ಈಗಾಗಲೇ ಕೆಟ್ಟ ರಸ್ತೆಗಳು ಮತ್ತು ಸಂಚಾರದಿಂದ ಬಳಲುತ್ತಿದ್ದಾರೆ. ನಮಗೆ ಸಹಾಯ ಮಾಡುವ ಯಾವುದನ್ನಾದರೂ ಏಕೆ ನಿಲ್ಲಿಸಬೇಕು? ಸರಿಯಾದ ಕಾರಣವಿದ್ದರೆ, ಅದನ್ನು ವಿವರಿಸಿ' ಎಂದು ಬರೆದಿದ್ದಾರೆ.

'ಟ್ರಾಫಿಕ್ ಸಮಸ್ಯೆಗೆ ಮತ್ತು ಆಟೋ ಚಾಲಕರಿಂದಾಗುವ ಕಿರುಕುಳವನ್ನು ಕೊನೆಗೊಳಿಸಲು ಬೈಕ್ ಟ್ಯಾಕ್ಸಿ ಒಂದು ಪರಿಹಾರವಲ್ಲವೇ? ಸುಪ್ರೀಂ ಕೋರ್ಟ್ ಕೂಡ ಬೈಕ್ ಟ್ಯಾಕ್ಸಿಗಳು ಕಾನೂನುಬದ್ಧವಾಗಿವೆ ಎಂದು ಹೇಳಿದೆ' ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

ಕಾನೂನು ಅಸ್ಪಷ್ಟತೆಗಳು ಮತ್ತು ಜಾರಿ ಕ್ರಮಗಳ ನಡುವೆ ಬೈಕ್ ಟ್ಯಾಕ್ಸಿ ಸೇವೆಗಳು ಪದೇ ಪದೇ ಸ್ಥಗಿತಗೊಳ್ಳುವುದರಿಂದ ಪ್ರಯಾಣಿಕರು ಈಗ ಸರ್ಕಾರವನ್ನು ಸಂಪೂರ್ಣ ನಿಷೇಧವನ್ನು ತೆಗೆದುಹಾಕಲು ಮತ್ತು ಬೈಕ್ ಟ್ಯಾಕ್ಸಿಗಳನ್ನು ನಿಯಂತ್ರಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.

ಶುಕ್ರವಾರ, ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿಎಂ ಜೋಶಿ ಅವರನ್ನೊಳಗೊಂಡ ವಿಭಾಗೀಯ ಪೀಠವು, ಅಡ್ವೊಕೇಟ್ ಜನರಲ್ ಶಶಿ ಕಿರಣ್ ಶೆಟ್ಟಿ ಅವರಿಗೆ ಮೌಖಿಕವಾಗಿ ಸ್ಪಷ್ಟಪಡಿಸಿತು. ಆಗಸ್ಟ್ 20 ರಂದು ಹೊರಡಿಸಲಾದ ತನ್ನ ಹಿಂದಿನ ಆದೇಶವು ವೈಯಕ್ತಿಕ ಸವಾರರನ್ನು ದಂಡ ಅಥವಾ ಕಿರುಕುಳದಿಂದ ರಕ್ಷಿಸುವ ಉದ್ದೇಶವನ್ನು ಹೊಂದಿತ್ತು. ಬೈಕ್ ಟ್ಯಾಕ್ಸಿ ಸೇವೆಗಳನ್ನು ಈ ಹಿಂದೆ ನಿರ್ಬಂಧಿಸಿದ್ದರೆ ಅಥವಾ ನಿಷೇಧಿಸಲ್ಪಟ್ಟಿದ್ದರೆ ತಮ್ಮ ಸೇವೆಗಳನ್ನು ಪುನರಾರಂಭಿಸಲು ಯಾವುದೇ ಅನುಮತಿ ನೀಡಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

Bike Taxi
ನಿಷೇಧದ ನಡುವಲ್ಲೂ ಬೈಕ್ ಟ್ಯಾಕ್ಸಿ ಲಭ್ಯ: Whatsapp ಮೂಲಕ ಸವಾರರ ಸಂಪರ್ಕ, ಸೇವೆ ಪೂರೈಕೆ!

ಓಲಾ, ಉಬರ್ ಮತ್ತು ರ‍್ಯಾಪಿಡೋದಂತಹ ಕಂಪನಿಗಳು ತಮ್ಮ ಅಪ್ಲಿಕೇಶನ್‌ಗಳಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳನ್ನು ಒದಗಿಸಲು ಯಾವುದೇ ಅನುಮತಿ ನೀಡದಿದ್ದರೂ ಪುನರಾರಂಭಿಸಿವೆ ಎಂದು ಎಜಿ ನ್ಯಾಯಾಲಯಕ್ಕೆ ತಿಳಿಸಿದ್ದರು. ಇದರ ನಂತರ, ವೇದಿಕೆಗಳು ಸೋಮವಾರ ಸೇವೆಯನ್ನು ಹಿಂತೆಗೆದುಕೊಂಡವು, ಇದರಿಂದಾಗಿ ಅನೇಕ ಪ್ರಯಾಣಿಕರು ತೊಂದರೆಗೆ ಸಿಲುಕಿಕೊಂಡರು.

ಇತ್ತೀಚಿನ ನಿರ್ಬಂಧಗಳಿಂದಾಗಿ ಆದಾಯ ಕಳೆದುಕೊಂಡ ತನ್ನ ಸವಾರರಿಗೆ ಸಹಾಯ ಮಾಡಲು ರ‍್ಯಾಪಿಡೋ ಲಾಭರಹಿತ ಪ್ರಯತ್ನವಾಗಿ ಬೈಕ್ ಡೈರೆಕ್ಟ್ ಅನ್ನು ಪ್ರಾರಂಭಿಸಿದೆ. ಹೈಕೋರ್ಟ್ ಈ ವ್ಯಕ್ತಿಗಳಿಗೆ ಸ್ವತಂತ್ರವಾಗಿ ಕೆಲಸ ಮಾಡಲು ಅವಕಾಶ ನೀಡಿದ್ದರೂ, ಪ್ರಯಾಣಿಕರೊಂದಿಗೆ ಸಂಪರ್ಕ ಸಾಧಿಸಲು ಸರಿಯಾದ ವ್ಯವಸ್ಥೆ ಅಥವಾ ವೇದಿಕೆ ಇಲ್ಲದ ಕಾರಣ ಅವರು ಗ್ರಾಹಕರನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಬೈಕ್ ಡೈರೆಕ್ಟ್ ಒಂದು ವ್ಯಾಪಾರ ಉದ್ಯಮವಲ್ಲ, ಆದರೆ ಸವಾರರ ಜೀವನೋಪಾಯವನ್ನು ಬೆಂಬಲಿಸುವ ಒಂದು ಮಾರ್ಗವಾಗಿದೆ ಎಂದು ರ‍್ಯಾಪಿಡೋ ಕಂಪನಿ ಸ್ಪಷ್ಟಪಡಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com