ಬೆಂಗಳೂರು: ಗಂಡನಿಂದ ದೂರವಾಗಿ ಒಂಟಿ ಜೀವನ; ಮಗನಿಗೆ ವಿಷವುಣಿಸಿ ಕೊಂದು, ತಾಯಿಯೊಂದಿಗೆ ಮಹಿಳೆ ಆತ್ಮಹತ್ಯೆ!

ಸಾಲಕ್ಕೆ ಹೆದರಿ ಮಗನಿಗೆ ವಿಷ ಕುಡಿಸಿ ನಂತರ ತಾಯಿ ಮತ್ತು ಅಜ್ಜಿ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕೋರಮಂಗಲದ ತಾವರೆಕೆರೆ ಬಳಿಯ ಎಸ್‌.ಜಿ ಪಾಳ್ಯದಲ್ಲಿ ಈ ಘಟನೆ ನಡೆದಿದೆ.
ಬೆಂಗಳೂರು: ಗಂಡನಿಂದ ದೂರವಾಗಿ ಒಂಟಿ ಜೀವನ; ಮಗನಿಗೆ ವಿಷವುಣಿಸಿ ಕೊಂದು, ತಾಯಿಯೊಂದಿಗೆ ಮಹಿಳೆ ಆತ್ಮಹತ್ಯೆ!
Updated on

ಬೆಂಗಳೂರು: ಸಾಲಕ್ಕೆ ಹೆದರಿ ಮಗನಿಗೆ ವಿಷ ಕುಡಿಸಿ ನಂತರ ತಾಯಿ ಮತ್ತು ಅಜ್ಜಿ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕೋರಮಂಗಲದ ತಾವರೆಕೆರೆ ಬಳಿಯ ಎಸ್‌.ಜಿ ಪಾಳ್ಯದಲ್ಲಿ ಈ ಘಟನೆ ನಡೆದಿದೆ. 14 ವರ್ಷದ ಮಗ ಮೌನೀಶ್‌ ಗೆ ವಿಷವುಣಿಸಿದ ನಂತರ ತಾಯಿ ಸುಧಾ, ಅಜ್ಜಿ ಮುದ್ದಮ್ಮ ತಾವು ವಿಷ ಸೇವಿಸಿ ಆತ್ಮಹತ್ಯೆ ಮಾಡಿದ್ದಾರೆ. ಎಸ್​.ಜಿ ಪಾಳ್ಯ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಗಂಡನಿಂದ ಬೇರೆಯಾಗಿದ್ದ ಸುಧಾ ಬಿರಿಯಾನಿ ಮಾರಾಟ ಮಾಡಿ ಜೀವನ ನಡೆಸುತ್ತಿದ್ದರು. ಆದರೆ ಇದರಿಂದ ಲಾಸ್ ಆಗಿದ್ದರಿಂದ ಅದನ್ನು ಬಿಟ್ಟು ಹಾಲು ಮಾರಲು ಮುಂದಾದರು. ಹೆಚ್ಚು ಆದಾಯ ಬರದೆ ಇದ್ದಿದ್ದರಿಂದ ಕೊನೆಗೆ ಮನೆ ಕೆಲಸಕ್ಕೂ ಹೋಗುತ್ತಿದ್ದರು. ಆದರೆ ಮಾಡಿದ ಸಾಲ ಮತ್ತಷ್ಟು ಹೆಚ್ಚಾಗಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸದ್ಯ ಪೊಲೀಸರು ಮೂವರ ಮೃತದೇಹವನ್ನು ಸೆಂಟ್ ಜಾನ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ.

ಬೆಂಗಳೂರು: ಗಂಡನಿಂದ ದೂರವಾಗಿ ಒಂಟಿ ಜೀವನ; ಮಗನಿಗೆ ವಿಷವುಣಿಸಿ ಕೊಂದು, ತಾಯಿಯೊಂದಿಗೆ ಮಹಿಳೆ ಆತ್ಮಹತ್ಯೆ!
ಮಂಡ್ಯ: ಸರಕು ಸಾಗಣೆ ವಾಹನದಲ್ಲಿ ಅಕ್ರಮವಾಗಿ ಗೋಮಾಂಸ ಸಾಗಿಸುತ್ತಿದ್ದ ಇಬ್ಬರ ಬಂಧನ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com