KSRTC ಕೇಂದ್ರ ಕಚೇರಿಗೆ ಮಹಾರಾಷ್ಟ್ರ ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್ ಭೇಟಿ, ಕಾರ್ಯವೈಖರಿಗೆ ಮೆಚ್ಚುಗೆ

ಮಹಾರಾಷ್ಟ್ರ ಸರ್ಕಾರದ ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್ ನೇತೃತ್ವದ ಮಹಾರಾಷ್ಟ್ರದ ಅಧಿಕಾರಿಗಳ ತಂಡವು ನಗರ ಶಾಂತಿನಗರದ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿ, ಕಾರ್ಯಾಗಾರಕ್ಕೆ ಭೇಟಿ ನೀಡಿತು.
Maharashtra Transport Minister Pratap Sarnaik at the KSRTC office and depot.
ಕೆಎಸ್‌ಆರ್‌ಟಿಸಿ ಕಚೇರಿ ಮತ್ತು ಡಿಪೋದಲ್ಲಿ ಮಹಾರಾಷ್ಟ್ರ ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್.
Updated on

ಬೆಂಗಳೂರು: ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಗೆ ಹಾಗೂ ಕಾರ್ಯಾಗಾರಕ್ಕೆ ಭಾನುವಾರ ಭೇಟಿ ನೀಡಿದ ಮಹಾರಾಷ್ಟ್ರ ಸರಕಾರದ ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್ ಅವರು, ನಿಗಮದ ಕಾರ್ಯವೈಖರಿ ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.

ಮಹಾರಾಷ್ಟ್ರ ಸರಕಾರದ ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್ ನೇತೃತ್ವದ ಮಹಾರಾಷ್ಟ್ರದ ಅಧಿಕಾರಿಗಳ ತಂಡವು ನಗರ ಶಾಂತಿನಗರದ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿ, ಕಾರ್ಯಾಗಾರಕ್ಕೆ ಭೇಟಿ ನೀಡಿತು. ಇದೇ ವೇಳೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ನಿಗಮದಲ್ಲಿನ ಪ್ರತಿಷ್ಠಿತ ವಾಹನಗಳ ಕಾರ್ಯಾಚರಣೆ, ಕಾರ್ಮಿಕ ಕಲ್ಯಾಣ ಉಪಕ್ರಮಗಳು, ವಾಣಿಜ್ಯ ಆದಾಯ, ಬಸ್ಸುಗಳ ಪುನಃಶ್ಚೇತನ/ನವೀಕರಣ, ಹೆಚ್.ಆರ್.ಎಂ.ಎಸ್, ಇ-ಟೆಕೇಟಿಂಗ್, ಕೆ.ಎಸ್.ಆರ್.ಟಿ.ಸಿ. ಆರೋಗ್ಯ, ರೂ 1 ಕೋಟಿ ಅಪಘಾತ ವಿಮೆ, ಇತರೆ ಉಪಕ್ರಮಗಳ ಬಗ್ಗೆ ಪ್ರತಾಪ್ ಅವರಿಗೆ ಮಾಹಿತಿ ನೀಡಿದರು.

ಬಳಿಕ ನಿಗಮದ ಬೆಂಗಳೂರು ಕೇಂದ್ರೀಯ ವಿಭಾಗದ ಘಟಕ-2ಕ್ಕೆ ಭೇಟಿ ನೀಡಿದ ತಂಡವು ಐರಾವತ ಕ್ಲಬ್ ಕಾಸ್, ಐರಾವತ ಕ್ಲಬ್ ಕಾಸ್ 2.0, ಅಂಬಾರಿ ಡ್ರೀಮ್ ಕ್ಲಾಸ್, ಪಲ್ಲಕ್ಕಿ, ಅಂಬಾರಿ ಉತ್ಸವ, ಫ್ಲೈ ಬಸ್, ನಗರ ಸಾರಿಗೆ, ರಾಜಹಂಸ ಹಾಗೂ ಅಶ್ವಮೇಧ ವಾಹನಗಳನ್ನು ವೀಕ್ಷಿಸಿದರು.

ಘಟಕ ಹಾಗೂ ಕಾರ್ಯಾಗಾರ ನಿರ್ವಹಣೆ, ವಾಹನಗಳಿಗೆ ನೀಡಿರುವ ಬ್ರಾಂಡಿಗ್ ಹಾಗೂ ವಾಹನಗಳ ಪುನಶ್ಚೇತನ ಕಾರ್ಯ ಹಾಗೂ ಹಲವು ಉಪಕ್ರಮಗಳ ಕುರಿತು ಮುಕ್ತ ಕಂಠದಿಂದ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ವ್ಯವಸ್ಥಾಪಕ ನಿರ್ದೇಶಕರು ಬೆಂ.ಮ.ಸಾ. ಸಂಸ್ಥೆ, ಹಾಗೂ ಮಾನ್ಯ ನಿರ್ದೇಶಕರು (ಸಿ ಮತ್ತು ಜಾ), ಅಪರ ಸಾರಿಗೆ ಆಯುಕ್ತರು, (ಪ್ರವರ್ತನ) (ದಕ್ಷಿಣ), ಹಾಗೂ ಎಂ.ಎಸ್.ಆರ್.ಟಿ.ಸಿ. ತಾಂತ್ರಿಕ, ಸಂಚಾರ ಹಾಗೂ ಕಾಮಗಾರಿ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಕರಾರಸಾ ನಿಗಮದ ಅಧಿಕಾರಿಗಳು ಉಪಸ್ಥಿತರಿದ್ದರು.

Maharashtra Transport Minister Pratap Sarnaik at the KSRTC office and depot.
11,694 ನಿವೃತ್ತ‌ ಸಾರಿಗೆ ನೌಕರರಿಗೆ 224.05 ಕೋಟಿ ರೂ. ಗ್ರಾಚ್ಯುಟಿ ಹಣ ಬಿಡುಗಡೆ: ರಾಮಲಿಂಗಾರೆಡ್ಡಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com