ಮೈಕ್ರೋ ಫೈನಾನ್ಸ್: ಕಿರುಕುಳ ನೀಡುವವರಿಗೆ ಕಾನೂನು ಮೂಲಕ ಬಿಸಿ ಮುಟ್ಟಿಸಲು ಸರ್ಕಾರ ಮುಂದು, ಶಿಕ್ಷೆ ಪ್ರಮಾಣ 10 ವರ್ಷಕ್ಕೆ ಹೆಚ್ಚಳ..!

ಈ ಮೊದಲು ಬಿಲ್‌ನಲ್ಲಿ 3 ವರ್ಷ ಶಿಕ್ಷೆ ಇತ್ತು. ಈಗ ಅದನ್ನ 10 ವರ್ಷಕ್ಕೆ ಹೆಚ್ಚಳ ಮಾಡಿದ್ದೇವೆ. ದಂಡ ಕೂಡಾ 5 ಲಕ್ಷ ರೂ. ಮಾಡಿದ್ದೇವೆ.
Casual Images
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಬಲವಂತವಾಗಿ ಸಾಲ ವಸೂಲಿ ಮಾಡುವ ಮೈಕ್ರೋ ಫೈನಾನ್ಸ್ ಕಂಪನಿಗಳಿಗೆ ಕಾನೂನು ಮೂಲಕ ಬಿಸಿ ಮುಟ್ಟಿಸಲು ಸರ್ಕಾರ ಮುಂದಾಗಿದ್ದು, ಶಿಕ್ಷೆಯ ಪ್ರಮಾಣವನ್ನು 10 ವರ್ಷಕ್ಕ ಹೆಚ್ಚಳ ಮಾಡಿದೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು, ಈ ಮೊದಲು ಬಿಲ್‌ನಲ್ಲಿ 3 ವರ್ಷ ಶಿಕ್ಷೆ ಇತ್ತು. ಈಗ ಅದನ್ನ 10 ವರ್ಷಕ್ಕೆ ಹೆಚ್ಚಳ ಮಾಡಿದ್ದೇವೆ. ದಂಡ ಕೂಡಾ 5 ಲಕ್ಷ ರೂ. ಮಾಡಿದ್ದೇವೆಂದು ಹೇಳಿದರು.

ಕಿರುಕುಳ ಕೊಡುವವರಿಗೆ ಕಾನೂನಿನ ಬಿಸಿ ತಟ್ಟಬೇಕು. ಕಾಟಾಚಾರಕ್ಕೆ ಕಾನೂನು ಮಾಡಿದರೆ ಇಂತಹ ಕಿರುಕುಳ ಪ್ರಕರಣ ನಿಲ್ಲುವುದಿಲ್ಲ. ಹೀಗಾಗಿ ದಂಡ ಮತ್ತು ಶಿಕ್ಷೆ ಜಾಸ್ತಿ ಮಾಡಿದ್ದೇವೆ. ಇಂತಹ ಕಠಿಣ ಕಾನೂನಿಂದ ಮಾತ್ರ ಕಿರುಕುಳ ನಿಲ್ಲುತ್ತದೆ. ಆ ಉದ್ದೇಶದಿಂದ ಶಿಕ್ಷೆ ಪ್ರಮಾಣ ಜಾಸ್ತಿ ಮಾಡಿದ್ದೇವೆ ಎಂದು ತಿಳಿಸಿದರು.

ರಾಜ್ಯಪಾಲರಿಗೆ ಬಿಲ್ ಕಳಿಸಿದ್ದೇವೆ. ಇವತ್ತು ಆಗುತ್ತಾ ಗೊತ್ತಿಲ್ಲ. ರಾಜ್ಯಪಾಲರು ಊರಿಗೆ ಹೋಗಿದ್ದಾರೆ ಎನ್ನುತ್ತಿದ್ದಾರೆ. ಅವರು ಬಂದು ನೋಡಿ ಸಹಿ ಮಾಡಿದ ಕೂಡಲೇ ಸುಗ್ರೀವಾಜ್ಞೆ ಜಾರಿ ಆಗಲಿದೆ ಎಂದು ಹೇಳಿದರು.

ಬಿಲ್ ವಿರುದ್ಧ ಮೈಕ್ರೋ ಫೈನಾನ್ಸ್ ಕಂಪನಿಗಳು ಕೋರ್ಟ್‌ಗೆ ಹೋಗಬಹುದು ಎಂದುಕೊಂಡು ಬಿಲ್ ಸಿದ್ದ ಮಾಡುವುದು ತಡವಾಗಿದೆ. ಮೊದಲ ಕರಡು ಸಿದ್ಧ ಮಾಡಿದಾಗ ಫೈನಾನ್ಸ್ ಕಂಪನಿಗಳು ಕೋರ್ಟ್ಗೆ ಹೋಗಬಹುದು ಎಂದು ಚರ್ಚಿಸಿದ್ದೆವು. ಹೀಗಾಗಿ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು ಎಂದು ಸಿಎಂ ಕಾನೂನು ಇಲಾಖೆಗೆ ಸೂಚನೆ ಕೊಟ್ಟಿದ್ದರು. ಹೀಗಾಗಿ 2 ದಿನ ತಡವಾಗಿದೆ. ಈಗ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಕರಡು ಸಿದ್ಧ ಮಾಡಿದ್ದೇವೆ. ಕೋರ್ಟ್ಗೆ ಹೋದರೂ ಸರ್ಕಾರಕ್ಕೆ ಹಿನ್ನಡೆ ಆಗುವುದಿಲ್ಲ ಎಂದು ನಾವು ಅಂದುಕೊಂಡಿದ್ದೇವೆ ಎಂದು ಹೇಳಿದರು.

Casual Images
ಮೈಕ್ರೋ ಫೈನಾನ್ಸ್‌ ಕಾಟಕ್ಕೆ ಈ 3 ಜನ, ಗೃಹಲಕ್ಷ್ಮಿ ಹಣ ಬರದಿರುವುದೇ ಕಾರಣ: JDS

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com