ಏರೋ ಇಂಡಿಯಾ 2025: 11 ದಿನಗಳ ಕಾಲ ಯಲಹಂಕ ಬಳಿ ನಮ್ಮ ಮೆಟ್ರೋ ಕಾಮಗಾರಿ ಸ್ಥಗಿತ

ಭಾರತೀಯ ವಾಯುಪಡೆ ಮನವಿ ಹಿನ್ನೆಲೆಯಲ್ಲಿ ಐಎಎಫ್ ಕ್ಯಾಂಪಸ್ ವ್ಯಾಪ್ತಿಗೆ ಬರುವ ಯಲಹಂಕ ವಿಮಾನ ನಿಲ್ದಾಣ ಮಾರ್ಗದ ಮೆಟ್ರೋ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಬಿಎಂಆರ್'ಸಿಎಲ್ ಹೇಳಿದೆ.
ಬಿಎಂಆರ್'ಸಿಎಲ್ ಕಾಮಗಾರಿ.
ಬಿಎಂಆರ್'ಸಿಎಲ್ ಕಾಮಗಾರಿ.
Updated on

ಬೆಂಗಳೂರು: ಯಲಹಂಕದ ವಾಯುನೆಲೆಯಲ್ಲಿ ಫೆಬ್ರವರಿ 10 ರಿಂದ 14 ರವರೆಗೆ ಏರೋ ಇಂಡಿಯಾ 2025 ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಮುಂದಿನ 11 ದಿನಗಳವರೆಗೆ ಯಲಹಂಕ ಬಳಿ ನಮ್ಮ ಮೆಟ್ರೋ ಕಾಮಗಾರಿಯನ್ನು ಸ್ಥಗಿತಗಳಿಸಲಾಗಿದೆ.

ಭಾರತೀಯ ವಾಯುಪಡೆ ಮನವಿ ಹಿನ್ನೆಲೆಯಲ್ಲಿ ಐಎಎಫ್ ಕ್ಯಾಂಪಸ್ ವ್ಯಾಪ್ತಿಗೆ ಬರುವ ಯಲಹಂಕ ವಿಮಾನ ನಿಲ್ದಾಣ ಮಾರ್ಗದ ಮೆಟ್ರೋ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಬಿಎಂಆರ್'ಸಿಎಲ್ ಹೇಳಿದೆ.

ಕಾಮಗಾರಿ ನಡೆಯುತ್ತಿರುವ ಪಾರ್ಕಿಂಗ್‌ಗಾಗಿ ಸ್ಥಳಾವಕಾಶದ ಅಗತ್ಯವಿರುವುದರಿಂದ ಫೆಬ್ರವರಿ 5 ರಿಂದ 15 ರವರೆಗೆ ಕಾಮಗಾರಿ ಕಾರ್ಯ ನಿಲ್ಲಿಸುವಂತೆ ಐಎಎಫ್ ಮನವಿ ಮಾಡಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಎಲ್ಲಾ ಯಂತ್ರೋಪಕರಣಗಳು ಸ್ಥಳಾಂತರಿಸಿ, ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಫೆಬ್ರವರಿ 16 ರಿಂದ ಕೆಲಸವನ್ನು ಪುನರಾರಂಭಿಸಲಾಗುತ್ತದೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೆಆರ್ ಪುರದಿಂದ ಕೆಐಎವರೆಗಿನ 37 ಕಿಮೀ ನಲ್ಲಿ ಒಟ್ಟು 17 ಮೆಟ್ರೋ ನಿಲ್ದಾಣಗಳು ಬರಲಿದ್ದು, ಮೂರು ಹಂತದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ಮೂರನೇ ಹಂತದ ಕಾಮಗಾರಿಯು ಯಲಹಂಕದಿಂದ ಟರ್ಮಿನಲ್ 2 (15.01 ಕಿ.ಮೀ)ನಲ್ಲಿ ನಡೆಯಲಿದೆ. ಈ ಕಾಮಗಾರಿ ಐಎಎಫ್ ಕ್ಯಾಂಪಸ್‌ನಿಂದ ಪ್ರಾರಂಭವಾಗುತ್ತದೆ. ಹೀಗಾಗಿ 1 ಕಿ.ಮೀ ವರೆಗೆ ಕೆಲಸ ಸ್ಥಗಿತಗೊಂಡಿದೆ.

ಬಿಎಂಆರ್'ಸಿಎಲ್ ಕಾಮಗಾರಿ.
Aero India 2025: ಯುದ್ಧ ವಿಮಾನಗಳ ರೋಮಾಂಚನಕಾರಿ ತಾಲೀಮು; ಸೌಲಭ್ಯಗಳ ಕೊರತೆಗೆ ಜನತೆ ಬೇಸರ

ಈ ಮಾರ್ಗವು 3.1 ಕಿ.ಮೀ. ಗ್ರೇಡ್‌ನಲ್ಲಿ ಚಲಿಸುತ್ತದೆ, ವಾಯುಸೇನಾ ನೆಲೆ ಬಳಿ 750 ಮೀಟರ್‌ಗಳ ಸುರಂಗ ಮಾರ್ಗ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿ ವಿಮಾನಗಳು ಸಾಗುವ ಹಾದಿಯಲ್ಲಿ ಬರುವುದರಿಂದ ನಿರ್ಮಾಣ ಕಾರ್ಯಕ್ಕೆ ನಿರ್ಬಂಧಗಳು ಎದುರಾಗಿದೆ. ಸ್ಥಳದಲ್ಲಿ ಭೂಮಿಯನ್ನು ಅಗೆದು ಕಾಮಗಾರಿ ನಡೆಯಬೇಕಿದೆ.

ಮೂರನೇ ಹಂತದಲ್ಲಿ ದೊಡ್ಡಜಾಲದಲ್ಲಿ ಒಂದು ನಿಲ್ದಾಣವನ್ನು ಬಿಎಂಆರ್‌ಸಿಎಲ್ ನಿರ್ಮಿಸುತ್ತಿದೆ. ವಿಮಾನ ನಿಲ್ದಾಣದ ಒಳಗಿನ 2 ನಿಲ್ದಾಣಗಳನ್ನು ವಿಮಾನ ನಿಲ್ದಾಣ ನಿರ್ವಾಹಕ ಬಿಐಎಎಲ್ ನೋಡಿಕೊಳ್ಳುತ್ತದೆ. ಬೆಟ್ಟ ಹಲಸೂರು ಮತ್ತು ಚಿಕ್ಕಜಾಲದಂತಹ ನಿಲ್ದಾಣಗಳಿಗೂ ನಿರ್ಬಂಧಗಳು ಎದುರಾಗಲಿದೆ. ಆದರೆ, ಪ್ರಸ್ತುತ ಇದರ ನಿರ್ಮಾಣ ಕಾರ್ಯ ಇನ್ನೂ ಪ್ರಾರಂಭವಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಸ್ತುತ ಕಾಮಗಾರಿ ಸ್ಥಗಿತಗೊಳಿಸಿರುವ ಸ್ಥಳದಲ್ಲಿ ಶೇ.70 ರಷ್ಟು ಕಾಮಗಾರಿ ಕೆಲಸಗಳು ಪೂರ್ಣಗೊಂಡಿದ್ದು, 2 ಕಿ.ಮೀ.ವರೆಗೆ ಹಳಿಗಳನ್ನು ಹಾಕಲಾಗಿದೆ ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com