IKEA: ನಿಯಮಗಳ ಉಲ್ಲಂಘನೆ; ಪಾಲಿಕೆಗೆ 65 ಲಕ್ಷ ರೂ ದಂಡ ಪಾವತಿ

ಜನವರಿ 8 ರಂದು ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಅನುಮತಿ ಇಲ್ಲದೆ 4,021 ಎಚ್‌ಪಿ ಚಾಲಿತ ಯಂತ್ರೋಪಕರಣಗಳನ್ನು ಬಳಕೆ ಮಾಡುತ್ತಿರುವುದು, ತಂಪು ಪಾನೀಯ ಮತ್ತು ಬಾಟಲಿ ನೀರಿನ ವ್ಯಾಪಾರ ಮಾಡುತ್ತಿರುವುದು ಕಂಡು ಬಂದಿತ್ತು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಕಳೆದ 3 ವರ್ಷದಿಂದ ಉದ್ದಿಮೆ ಪರವಾನಗಿ ಶುಲ್ಕ ಪಾವತಿಸದ ತುಮಕೂರು ರಸ್ತೆಯಲ್ಲಿರುವ ಐಕಿಯಾ ಮಾಲ್ ನಿಂದ ರೂ.65 ಲಕ್ಷವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಸೂಲಿ ಮಾಡಿದೆ.

ಐಕಿಯಾ ಮೇ 13, 2022 ರಂದು ಪಾಲಿಕೆಯಿಂದ ಪರವಾನಗಿ ಪಡೆದುಕೊಂಡಿದ್ದು, ಅದನ್ನು 5 ವರ್ಶಗಳ ವರೆಗೆ ನವೀಕರಿಸಿದೆ.ಆದರೆ, ಮಾಲ್'ನ ವಿದ್ಯುತ್ ಬಳಕೆಗೆ ಸಂಬಂಧಿಸಿದಂತೆ ಯಾವುದೇ ಪರವಾನಗಿ ಪಡೆದಿರಲಿಲ್ಲ.

ಜನವರಿ 8 ರಂದು ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಅನುಮತಿ ಇಲ್ಲದೆ 4,021 ಎಚ್‌ಪಿ ಚಾಲಿತ ಯಂತ್ರೋಪಕರಣಗಳನ್ನು ಬಳಕೆ ಮಾಡುತ್ತಿರುವುದು, ತಂಪು ಪಾನೀಯ ಮತ್ತು ಬಾಟಲಿ ನೀರಿನ ವ್ಯಾಪಾರ ಮಾಡುತ್ತಿರುವುದು ಕಂಡು ಬಂದಿತ್ತು. ಈ ಸಂಬಂಧ ಬಿಬಿಎಂಪಿ ದಾಸರಹಳ್ಳಿ ವಲಯ 2022-23ರಿಂದ 2026-27ರವರೆಗೆ ಒಟ್ಟು ಐದು ವರ್ಷಗಳ ಅವಧಿಗೆ 65,93,600 ರೂ.ಗಳನ್ನು ಪಾವತಿಸುವಂತೆ ಕಂಪನಿಗೆ ನೋಟಿಸ್ ಜಾರಿ ಮಾಡಿದೆ.

ಈ ವಿಷಯ ತಿಳಿದು ಬಂದ ಹಿನ್ನೆಲೆಯಲ್ಲಿ 2 ಬಾರಿ ನೋಟಿಸ್ ಜಾರಿಗೊಳಿಸಲಾಗಿತ್ತು. ಆದರೆ, ಇದಕ್ಕೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಬಳಿಕ ಫೆ.20ರಂದು ಮೂರನೇ ನೋಟಿಸ್ ಜಾರಿ ಮಾಡಲಾಯಿತು.

ಸಂಗ್ರಹ ಚಿತ್ರ
ಐಕಿಯಾ ಶಾಪಿಂಗ್ ಮಾಲ್'ಗೆ ಜನಸಾಗರ: ತುಮಕೂರು ರಸ್ತೆಯಲ್ಲಿ ಗಂಟೆಗಟ್ಟಲೆ ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ

ಬಳಿಕ ಐಕಿಯಾ ಮಾಲ್ ಆಡಳಿತ ಮಂಡಳಿ ಕಳೆದ ಎರಡು ವರ್ಷದ ವಿದ್ಯುತ್ ಬಳಕೆಗೆ ಸಂಬಂಧಿಸಿದಂತೆ ಶುಲ್ಕ, ದಂಡ ಮತ್ತು ಮಂದಿನ ಮೂರು ವರ್ಷದ ಶುಲ್ಕ ಸೇರಿದಂತೆ ಒಟ್ಟು 65.93 ಲಕ್ಷ ಮೊತ್ತವನ್ನು ಬಿಬಿಎಂಪಿಗೆ ಡಿಡಿ ಮೂಲಕ ಪಾವತಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಹಣವನ್ನು ಬಿಬಿಎಂಪಿ ಖಾತೆಗೆ ಜಮಾ ಮಾಡಲಾಗುವುದು ಎಂದು ವಲಯ ಆಯುಕ್ತ ಗಿರೀಶ್ ಹೆಚ್.ಸಿ ಅವರು ತಿಳಿಸಿದ್ದಾರೆ.

ಇದೇ ವೇಳೆ ವ್ಯಾಪಾರಿಗಳು ತಮ್ಮ ವ್ಯಾಪಾರ ನಡೆಸಲು ಅಗತ್ಯ ಅನುಮತಿ ಹಾಗೂ ಪರವಾನಗಿ ಪಡೆಯುವುದನ್ನು ಖಚಿತಪಡಿಸಿಕೊಳ್ಳಬೇಕೆಂದು ಹೇಳಿದ್ದಾರೆ.

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಐಕಿಯಾ, ಈ ನೆಲದ ಕಾನೂನನ್ನು ನಾವು ಪಾಲಿಸುತ್ತೇವೆ. ಬಿಬಿಎಂಪಿ ಗಡುವು ಹಿನ್ನೆಲೆಯಲ್ಲಿ ನಾವು ಹಣವನ್ನು ಪಾವತಿಸಿದ್ದೇವೆ. ಪರವಾನಗಿ ವಿವರಗಳಿಗೆ ಸಂಬಂಧಿಸಿದಂತೆ ಬಿಬಿಎಂಪಿಯೊಂದಿಗೆ ಚರ್ಚೆ ನಡೆಸಲಾಗುತ್ತಿದೆ. ನಮ್ಮ ಕಾರ್ಯಾಚರಣೆಗಳು ಶೇ.100ರಷ್ಟು ಕಾನೂನುಬದ್ಧವಾಗಿದ್ದು, ಸ್ಪಷ್ಟೀಕರಣಕ್ಕೆ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಮುಂದಿನ ಕ್ರಮಗಳ ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com