Royal Enfield ಪ್ರಿಯರೇ ಎಚ್ಚರ: ಬೆಂಗಳೂರಲ್ಲಿ ಕಳ್ಳತನ, ಆಂಧ್ರದಲ್ಲಿ ಮಾರಾಟ..; 3 ವರ್ಷದಲ್ಲಿ 100 ಬೈಕ್ ಕದ್ದ ಖತರ್ನಾಕ್ ಕಳ್ಳ!

ಬೆಂಗಳೂರಿನಲ್ಲೊಬ್ಬ ಖತರ್ನಾಕ್​ಬೈಕ್ ಕಳ್ಳ ಸಿಕ್ಕಿಬಿದಿದ್ದು, ಬೈಕ್ ಗಳ ಕಳ್ಳತನದಲ್ಲೂ ಸೆಂಚುರಿ ಭಾರಿಸಿರುವ ಭೂಪನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
Dangerous thief who stole 100 bikes in just 3 years
ಖತರ್ನಾಕ್ ಬೈಕ್ ಕಳ್ಳನ ಬಂಧನ
Updated on

ಬೆಂಗಳೂರು: ಕೇವಲ 3 ವರ್ಷಗಳಲ್ಲಿ ಬರೊಬ್ಬರಿ 100ಕ್ಕೂ ಅಧಿಕ ಬೈಕ್ ಗಳನ್ನು ಕದ್ದು ಮಾರಾಟ ಮಾಡಿದ್ದ ಖತರ್ನಾಕ್ ಕಳ್ಳನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನಲ್ಲೊಬ್ಬ ಖತರ್ನಾಕ್​ಬೈಕ್ ಕಳ್ಳ ಸಿಕ್ಕಿಬಿದಿದ್ದು, ಬೈಕ್ ಗಳ ಕಳ್ಳತನದಲ್ಲೂ ಸೆಂಚುರಿ ಭಾರಿಸಿರುವ ಭೂಪನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ದುಬಾರಿ ರಾಯಲ್ ಎನ್ ಫೀಲ್ಡ್ ಬೈಕ್ ಗಳು ಸೇರಿದಂತೆ ವಿವಿಧ ಕಂಪನಿಯ ಸುಮಾರು 100ಕ್ಕೂ ಅಧಿಕ ದ್ವಿಚಕ್ರವಾಹನಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಕಳ್ಳ ಪ್ರಸಾದಬಾಬು ಎಂಬಾತನನ್ನು ಬೆಂಗಳೂರಿನ ಕೆಆರ್ ಪುರ ಪೊಲೀಸರು ಬಂಧಿಸಿದ್ದಾರೆ.

ಮೂಲತಃ ಆಂಧ್ರಪ್ರದೇಶದ ಬಂಗಾರುಪಾಳ್ಯಂನ ನಿವಾಸಿಯಾಗಿರುವ ಪ್ರಸಾದ್ ಬಾಬು ಬೈಕ್ ಗಳ ಕಳ್ಳತನವನ್ನೇ ತನ್ನ ವೃತ್ತಿಯಾಗಿಸಿಕೊಂಡಿದ್ದ. ದುಬಾರಿ ಬೈಕ್​ಗಳನ್ನೇ ಟಾರ್ಗೆಟ್​ ಮಾಡ್ತಿದ್ದ ಈತ, ಲಕ್ಷಾಂತರ ರೂಪಾಯಿಯ ಬೈಕ್​ಗಳನ್ನು ಕೇವಲ 15 ರಿಂದ 20 ಸಾವಿರ ರೂಪಾಯಿಗೆ ಮಾರಿಕೊಂಡು ದುಡ್ಡು ಮಾಡಿಕೊಳ್ಳುತ್ತಿದ್ದ. ಕೇವಲ ಮೂರು ವರ್ಷಗಳಲ್ಲಿ ನೂರಕ್ಕೂ ಅಧಿಕ ದ್ವಿಚಕ್ರ ವಾಹನಗಳನ್ನು ಕದ್ದು ಈತ ಕಳ್ಳತನದಲ್ಲೂ ಸೆಂಚುರಿ ಭಾರಿಸಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Dangerous thief who stole 100 bikes in just 3 years
ಎರಡು ಬಿಎಂಟಿಸಿ ಬಸ್​ ಮಧ್ಯೆ ಸಿಲುಕಿ ಆಟೋ ಅಪ್ಪಚ್ಚಿ; ಭೀಕರ ಅಪಘಾತದಲ್ಲಿ ಇಬ್ಬರು ಸಾವು; Video

ವಾಹನ ತಯಾರಿಕಾ ಸಂಸ್ಥೆಗಳಿಗೆ ಸವಾಲೆಸೆಯುವಂತೆ ಲಾಕ್ ಬ್ರೇಕ್

ಇನ್ನು ಈ ಪ್ರಸಾದ್ ಬಾಬು ಮನೆ ಮುಂದೆ ನಿಲ್ಲಿಸಿದ್ದ ಬೈಕ್​ಗಳ ಚಿಟಕಿ ಹೊಡೆಯುವುದರಲ್ಲೇ ಹ್ಯಾಂಡಲ್​ ಲಾಕ್ ಮುರಿದು ಕಳ್ಳತನ ಮಾಡುತ್ತಿದ್ದ. ಬಳಿಕ ಕಡಿಮೆ ಹಣಕ್ಕೆ ಮಾರಿಕೊಂಡು ಬಂದ ಹಣದಲ್ಲಿಯೇ ಮೋಜು ಮಸ್ತಿ ಮಾಡುತ್ತಿದ್ದ. ಬೆಂಗಳೂರು, ಚಿತ್ತೂರು, ತಿರುಪತಿ ಸೇರಿ ಹಲವು ಕಡೆ ಈತ ತನ್ನ ಕೈಚಳಕ ತೋರಿಸಿ ಸುಮಾರು 100ಕ್ಕೂ ಅಧಿಕ ಬೈಕ್ ಗಳನ್ನು ಕದ್ದು ಅವುಗಳನ್ನು ಆಂಧ್ರ ಪ್ರದೇಶದಲ್ಲಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.

ಮುಂಜಾನೆ ಬಸ್ ನಲ್ಲಿ ಬಂದು ಸಂಜೆ ಬೈಕ್ ನಲ್ಲಿ ಆಂಧ್ರ ಪ್ರದೇಶಕ್ಕೆ ಪರಾರಿ!

ಈತ ಪ್ರತಿದಿನ ಸಂಜೆ ಬಸ್​​ನಲ್ಲಿ ಬೆಂಗಳೂರಿಗೆ ಬಂದು ತಲುಪುತ್ತಿದ್ದ. ನಂತರ ಕೆ.ಆರ್​.ಪುರ, ಟಿನ್​ ಫ್ಯಾಕ್ಟರಿ, ಮಹದೇವಪುರ ಜನವಸತಿ ಪ್ರದೇಶಗಳಲ್ಲಿ ಓಡಾಡುತ್ತಿದ್ದ. ಮನೆ ಮುಂದೆ ನಿಂತಿರುವ ಬೈಕ್​ಗಳನ್ನು ಕದ್ದು ಬಂದ ದಿನವೇ ಅದೇ ಬೈಕ್​ನಲ್ಲಿ ವಾಪಸ್ ಊರಿಗೆ ಎಸ್ಕೇಪ್ ಆಗುತ್ತಿದ್ದ. ಒಟ್ಟು 20 ರಾಯಲ್ ಎನ್​​ಫಿಲ್ಡ್​, 30 ಪಲ್ಸರ್ ಬೈಕ್, 40 ಆ್ಯಕ್ಟಿವಾ ಬೈಕ್​ಗಳನ್ನು ಸೇರಿ ಇನ್ನುಳಿದ ಹಲವು ದುಬಾರಿ ಬೈಕ್​ಗಳನ್ನು ಕದ್ದಿದ್ದಾನೆ. ಸದ್ಯ ಪೊಲೀಸರು ಈ ಖತರ್ನಾಕ್ ಕಳ್ಳನನ್ನು ಬಂಧಿಸಿದ್ದು. ಸುಮಾರು 1.45 ಕೋಟಿ ರೂಪಾಯಿ ಮೌಲ್ಯದ 100 ಬೈಕ್ ವಶಕ್ಕೆ ಪಡೆದುಕೊಂಡಿದ್ದು. ಕೆ.ಆರ್​.ಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸರ ಮುಂದೆಯೇ ಡೆಮೋ

ಈ ಕಳ್ಳ ಪ್ರಸಾದ್ ಬಾಬು ತಾನು ಹೇಗೆ ಬೈಕ್ ಕದಿಯುತ್ತಿದ್ದ ಎಂಬುದನ್ನ ಪೊಲೀಸರ ಮುಂದೆಯೇ ಒಂದು ಡೆಮೋ ಮಾಡಿ ತೋರಿಸಿದ್ದಾನೆ. ಸ್ಕ್ರೂಡ್ರೈವರ್​ ಬಳಸಿ ಬೈಕ್​ನ ಲಾಕ್ ಓಪನ್ ಮಾಡುತ್ತಿದ್ದ, ಹೆಡ್​​ಲೈಟ್​​ ಭಾಗದ ಒಳಗೆ ಇರುವ ಎರಡು ವೈರ್​ಗಳನ್ನು ಜೋಡಿಸಿ ಸೆಲ್ಫ್​ಸ್ಟಾರ್ಟ್ ಮಾಡಿ ಬೈಕ್​ ಕದ್ದು ಪರಾರಿಯಾಗುವುದನ್ನು ತೋರಿಸಿಕೊಟ್ಟಿದ್ದಾನೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com