50 ಸಾವಿರ ರೂ ಸಾಲ ತೀರಿಸದ್ದಕ್ಕೆ ಅಪ್ರಾಪ್ತೆಯೊಂದಿಗೆ ಬಲವಂತದ ಮದುವೆ: ಪ್ರಕರಣ ದಾಖಲು, ಇಬ್ಬರ ಬಂಧನ

ಘಟನೆಯ ಬಗ್ಗೆ ಸಂತ್ರಸ್ತ ಬಾಲಕಿ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ವಿಶಾಲ್ ಪುಂಡಲೀಕ ಡವಳಿ (22) , ಯುವಕನ ತಾಯಿ ರೇಖಾ ಪುಂಡಲೀಕ ಡವಳಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಳಗಾವಿ: 50 ಸಾವಿರ ರೂ. ಸಾಲವನ್ನು ವಾಪಸ್ ಕೊಡಲಿಲ್ಲ ಎಂಬ ಕಾರಣಕ್ಕೆ ಅಪ್ರಾಪ್ತ ಬಾಲಕಿಯನ್ನು ಬಲವಂತವಾಗಿ ವಿವಾಹವಾಗಿರುವಂತಹ ಆಘಾತಕಾರಿ ಘಟನಯೊಂದು ಬೆಳಗಾವಿ ಜಿಲ್ಲೆಯ ಸವದತ್ತಿಯ ಗ್ರಾಮವೊಂದರಲ್ಲಿ ನಡೆದಿದೆ.

ಘಟನೆಯ ಬಗ್ಗೆ ಸಂತ್ರಸ್ತ ಬಾಲಕಿ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ವಿಶಾಲ್ ಪುಂಡಲೀಕ ಡವಳಿ (22) , ಯುವಕನ ತಾಯಿ ರೇಖಾ ಪುಂಡಲೀಕ ಡವಳಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಎಫ್‌ಐಆರ್‌ನಲ್ಲಿ ವಿಶಾಲ್‌ನ ತಂದೆ ಮತ್ತು ಸಹೋದರನ ಹೆಸರೂ ಇದೆ ಎಂದು ತಿಳಿದುಬಂದಿದೆ.

ಸಂತ್ರಸ್ತ ಬಾಲಕಿ ಮೂಲತಃ ಸವದತ್ತಿ ತಾಲೂಕಿನವರಾಗಿದ್ದು, ತಂದೆಯ ಮರಣದ ನಂತರ ತಾಯಿಯೊಂದಿಗೆ ಬೆಳಗಾವಿಗೆ ಸ್ಥಳಾಂತರಗೊಂಡಿದ್ದರು. ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ಇವರಿಬ್ಬರು ಸಂಬಂಧಿಕರ ಜೊತೆ ವಾಸವಾಗಿದ್ದರು. ಈ ನಡುವೆ ಬಾಲಕಿ ರೇಖಾ ಪುಂಡಲೀಕ ಡವಳಿ ಅವರಿಂದ 50,000 ರೂಪಾಯಿಗಳನ್ನು ಸಾಲ ಪಡೆದಿದ್ದು, ಆಕೆಯ ಚಿನ್ನದ ಕಿವಿಯೋಲೆಗಳನ್ನು ಒತ್ತೆಯಾಗಿ ಇರಿಸಿದ್ದರು.

ಒಪ್ಪಿದ ಅವಧಿಯೊಳಗೆ ಸಾಲವನ್ನು ಮರುಪಾವತಿಸಲು ತಾಯಿಗೆ ಸಾಧ್ಯವಾಗದಿದ್ದಾಗ, ತನ್ನ ಮಗಳನ್ನು ವಿಶಾಲ್‌ಗೆ ಮದುವೆ ಮಾಡುವಂತೆ ರೇಖಾ ಒತ್ತಡ ಹೇರಲು ಪ್ರಾರಂಭಿಸಿದ್ದಳು. ಸಾಲ ಮರುಪಾವತಿ ಮಾಡುವುದಾಗಿ ಪದೇ ಪದೇ ಹೇಳಿದರೂ ಇದಕ್ಕೆ ಒಪ್ಪದ ರೇಖಾ, ಆಕೆಯ ಮೇಲೆ ಒತ್ತಡ ಹೇರುತ್ತಲೇ ಇದ್ದರು.

ಸಂಗ್ರಹ ಚಿತ್ರ
ಹೆತ್ತವರಿಗೆ ಹೇಳದೆ ಬಾಲಕಿಗೆ ಬಾಲ್ಯ ವಿವಾಹ; ಓರ್ವನ ಬಂಧನ

ಈ ನಡುವೆ ಸೆಪ್ಟೆಂಬರ್ 17, 2024 ರಂದು, ಬಾಲಕಿಯನ್ನು ಅಪಹರಿಸಿ ಮರುದಿನ ಅಥಣಿಗೆ ಕರೆದೊಯ್ದು, ಅಲ್ಲಿ ತನ್ನ ಮಗನೊಂದಿಗೆ ದೇವಸ್ಥಾನದಲ್ಲಿ ಬಲವಂತವಾಗಿ ವಿವಾಹ ಮಾಡಿಸಿದ್ದಾಳೆ.

ಬಳಕ ಧೈರ್ಯ ಮಾಡಿ ಬಾಲಕಿ ಜನವರಿ 17, 2025 ರಂದು ಪೊಲೀಸರನ್ನು ಸಂಪರ್ಕಿಸಿದ್ದಾಳೆ. ಬಳಿಕ ಪೊಲೀಸ್ ಇನ್ಸ್‌ಪೆಕ್ಟರ್ ಪರಶುರಾಮ ಪೂಜೇರಿ ಅವರು ವಿಶಾಲ್ ಮತ್ತು ರೇಖಾ ಅವರನ್ನು ಬಂಧನಕ್ಕೊಳಪಡಿಸಿದ್ದಾರೆ. ಉಳಿದವರ ಬಂಧನಕ್ಕಾಗಿ ಹುಡುಕಾಟ ಆರಂಂಭಿಸಿದ್ದಾರೆ.

ಕಟ್ಟಡ ನಿರ್ಮಾಣ ಸ್ಥಳದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿರುವ ಸಂತ್ರಸ್ತೆಯ ತಾಯಿ ಅಪಹರಣಕ್ಕೆ ಮೂರು ತಿಂಗಳ ಮೊದಲು ಸಾಲ ಪಡೆದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com