
ಬೆಂಗಳೂರು: ಕಾರ್ಖಾನೆ ಮಾಲೀಕರ ಮೇಲೆ ಹಲ್ಲೆ ನಡೆಸಿ, ದರೋಡೆ ಮಾಡಿದ ಮೂವರು ಆರೋಪಿಗಳನ್ನು ಕಗ್ಗಲಿಪುರ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಮೊಹ್ಸಿನ್ ಪಾಷಾ (27) ಹಲ್ಲೆಗೊಳಗಾದ ವ್ಯಕ್ತಿ. ಬಂಧಿತರನ್ನು ಇರ್ಫಾನ್, ರಿಜ್ವಾನ್ ಮತ್ತು ಮುಝುದ್ದೀನ್ ಖಾನ್ ಎಂದು ಗುರ್ತಿಸಲಾಗಿದೆ. ಮೂವರು ಆರೋಪಿಗಳು ಕೆಂಗೇರಿ ನಿವಾಸಿಗಳಾಗಿದ್ದಾರೆಂದು ತಿಳಿದುಬಂದಿದೆ.
ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಆಹಾರ ತರಲು ಹೊರ ಹೋಗಿದ್ದಾಗ ಸೋಮವಾರ ರಾತ್ರಿ 10.30 ರಿಂದ 10.40 ರ ನಡುವೆ ಘಟನೆ ನಡೆದಿದೆ.
ಕೆಂಗೇರಿ ಬಳಿಯ ತಗಚಕುಪ್ಪೆ ಗ್ರಾಮದ ಪಿಂಟೂ ಬಾರ್ ಬಳಿ ಆರೋಪಿಗಳು ವ್ಯಕ್ತಿ ಮೇಲೆ ದಾಳಿ ನಡೆಸಿದ್ದು, ಜೇಬಿನಲ್ಲಿದ್ದ ಹಣ ಹಾಗೂ ಮೊಬೈಲ್ ಫೋನ್ ದರೋಡೆ ಮಾಡಿ ಪರಾರಿಯಾಗಿದ್ದಾರೆ.
ಘಟನೆ ಬಳಿಕ ವ್ಯಕ್ತಿ ಮಂಗಳವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ದೂರು ದಾಖಲಾಗಿದೆ. ಎರಡು ಪ್ರತ್ಯೇಕ ದ್ವಿಚಕ್ರ ವಾಹನಗಳಲ್ಲಿ ಬಂದ ನಾಲ್ವರು ಆರೋಪಿಗಳು ನನ್ನನ್ನು ತಡೆದರು. ಈ ವೇಳೆ ಮಾತಿನ ಚಕಮಕಿ ನಡೆಸಿದಾಗ ಚಾಕುವಿನಿಂದ ಹಲ್ಲೆ ನಡೆಸಿ, ಮೊಬೈಲ್ ಫೋನ್ ಹಾಗೂ 14,000ರೂ ಗಳೊಂದಿಗೆ ಪರಾರಿಯಾದರು ಎಂದ ವ್ಯಕ್ತಿ ಹೇಳಿಕೊಂಡಿದ್ದಾರೆ.
ಘಟನೆ ಬಳಿಕ ಸಹೋದರ ಹಾಗೂ ಸಂಬಂಧಿಕರು ನನ್ನನ್ನು ಆಸ್ಪತ್ರೆಗೆ ಕರೆದೊಯ್ದಿದ್ದು, ಆಸ್ಪತ್ರೆಯ ಆಡಳಿತ ಮಂಡಳಿ ಪೊಲೀಸರಿಗೆ ಮಾಹಿತಿ ನೀಡಿದೆ.
ಘಟನೆ ಸಂಬಂಧ ಪೊಲೀಸರು ಮತ್ತೋರ್ವ ಆರೋಪಿಗಾಗು ಹುಡುಕಾಟ ಮುಂದುವರೆಸಿದ್ದಾರೆ. ಈ ಸಂಬಂಧ ಆರೋಪಿಗಳ ವಿರುದ್ಧ ಬಿಎನ್ಎಸ್ 309(6) (ದರೋಡೆ), ಬಿಎನ್ಎಸ್ 311 ಪ್ರಕರಣ ದಾಖಲಾಗಿದೆ.
Advertisement