ಬೆಂಗಳೂರು: 80 ವರ್ಷ ಹಳೆಯ ಕಟ್ಟಡ ಕುಸಿತ; ನಾಲ್ವರನ್ನು ಬದುಕಿಸಿದ್ದು ಈ 4 ನಿಮಿಷ, ಮಾಲೀಕನನ್ನು ರಕ್ಷಿಸಿದ ಮೇಸ್ತ್ರಿ!

ಸಂಪಂಗಿರಾಮ ನಗರದಲ್ಲಿ ಇಂದು 80 ವರ್ಷ ಹಳೆಯ ಕಟ್ಟಡ ಕುಸಿದು ಬಿದ್ದಿದ್ದು ಅವಶೇಷಗಳ ಅಡಿಯಲ್ಲಿ ಕಟ್ಟಡದ ಮಾಲೀಕ ಅಶ್ವಿನ್ ಎಂಬುವರು ಸಿಲುಕಿಕೊಂಡಿದ್ದು ಅವರನ್ನು ಮೇಸ್ತ್ರಿಯೊಬ್ಬರು ರಕ್ಷಿಸಿದ್ದಾರೆ.
Manikyam, mason
ಮನೆ ಮಾಲೀಕನನ್ನು ಕಾಪಾಡಿದ ಮೇಸ್ತ್ರಿ ಮಾಣಿಕ್ಯಂ
Updated on

ಬೆಂಗಳೂರು: ಸಂಪಂಗಿರಾಮ ನಗರದಲ್ಲಿ ಇಂದು 80 ವರ್ಷ ಹಳೆಯ ಕಟ್ಟಡ ಕುಸಿದು ಬಿದ್ದಿದ್ದು ಅವಶೇಷಗಳ ಅಡಿಯಲ್ಲಿ ಕಟ್ಟಡದ ಮಾಲೀಕ ಅಶ್ವಿನ್ ಎಂಬುವರು ಸಿಲುಕಿಕೊಂಡಿದ್ದು ಅವರನ್ನು ಮೇಸ್ತ್ರಿಯೊಬ್ಬರು ರಕ್ಷಿಸಿದ್ದಾರೆ.

ಅಗ್ನಿಶಾಮಕ ಮತ್ತು ತುರ್ತು ವಿಭಾಗದ ಅಧಿಕಾರಿಗಳ ಪ್ರಕಾರ, ಕಟ್ಟಡದಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗುತ್ತಿದ್ದು ಇದಕ್ಕಾಗಿ ಕಟ್ಟಡದಲ್ಲಿ ಬಾಡಿಗೆಗಿದ್ದವರನ್ನು ಖಾಲಿ ಮಾಡಿಸಲಾಗಿತ್ತು. ಹೀಗಾಗಿ ದೊಡ್ಡ ದುರಂತವೊಂದು ಸಂಭವಿಸಿದೆ. ನೀರಿನ ಸಂಪರ್ಕಕ್ಕಾಗಿ ಸಂಪ್ ಅನ್ನು ಅಗೆಯಲಾಗುತ್ತಿದ್ದಾಗ ಕಟ್ಟಡ ಕುಸಿದಿದೆ. ಈ ವೇಳೆ ನಾಲ್ವರು ಕೆಲಸ ಮಾಡುತ್ತಿದ್ದರು. ಕಟ್ಟಡ ಕುಸಿದಾಗ ಮಾಲೀಕ ಅಶ್ವಿನ್ ಅವರು ಸಿಲುಕಿಕೊಂಡಿದ್ದರು. ಕಟ್ಟಡದ ಅವಶೇಷಗಳಲ್ಲಿನ ಸಣ್ಣ ಮಾರ್ಗದಿಂದ ಅಶ್ವಿನ್ ಅವರನ್ನು ಹೊರಗೆ ಕರೆತರಲಾಯಿತು ಎಂದು ಮೇಸ್ತ್ರಿ ಮಾಣಿಕ್ಯಂ ತಿಳಿಸಿದ್ದಾರೆ. ಅಶ್ವಿನ್ ಅವರ ಬಲಗಾಲಿಗೆ ಸಣ್ಣ ಗಾಯಗಳಾಗಿದ್ದು, ಅವರನ್ನು ವಿಟ್ಠಲ್ ಮಲ್ಯ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.

ಕಟ್ಟಡ ಕುಸಿಯುವುದಕ್ಕಿಂತ ಕೆಲ ನಿಮಿಷಗಳ ಮೊದಲು, ಮೂವರು ಕಾರ್ಮಿಕರು ಊಟಕ್ಕೆಂದು ಕಟ್ಟಡದಿಂದ ಹೊರಬಂದಿದ್ದರು. ಸ್ವಲ್ಪ ದೂರ ನಡೆಯುತ್ತಿದ್ದಂತೆ ಗೋಡೆ ಕುಸಿದು ಬೀಳುವ ದೊಡ್ಡ ಶಬ್ದ ಕೇಳಿಸಿತು. ಅದು ನಾವು ಕೆಲಸ ಮಾಡುತ್ತಿದ್ದ ಕಟ್ಟಡ ಎಂದು ಅವರಿಗೆ ಅರಿವಾಯಿತು. ಕಟ್ಟಡ ಕುಸಿಯುತ್ತಿದ್ದಂತೆ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದರು. ನಾವು ಕಟ್ಟಡದಿಂದ ಹೊರಬಂದ ನಾಲ್ಕು ನಿಮಿಷಗಳಲ್ಲೇ ಕಟ್ಟಡ ಕುಸಿದಿದೆ. ಒಂದು ವೇಳೆ ಅಲ್ಲೆ ಇದ್ದಿದ್ದರೆ ದೊಡ್ಡ ಅನಾಹುತವಾಗುತ್ತಿತ್ತು ಎಂದು ಕೂಲಿ ಕಾರ್ಮಿಕ ಮಲ್ಲೇಶ್ ಹೇಳಿದರು.

Manikyam, mason
ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣ: 6ನೇ ಸ್ಥಳದಲ್ಲಿ ಅಸ್ಥಿಪಂಜರ ಅವಶೇಷಗಳು ಪತ್ತೆ; SIT ಸಹಾಯವಾಣಿ ಆರಂಭ; Video

ಅಧಿಕಾರಿಗಳು ಕಟ್ಟಡ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳನ್ನು ಬ್ಯಾರಿಕೇಡ್ ಹಾಕಿದ್ದು ಅವಶೇಷಗಳನ್ನು ತೆರವುಗೊಳಿಸಿ ಕುಸಿದ ಕಟ್ಟಡದ ಪಕ್ಕದಲ್ಲಿರುವ ಮನೆಗಳಿಗೆ ದಾರಿ ಮಾಡಿಕೊಡುತ್ತಿದ್ದಾರೆ. ಕೇಂದ್ರ ವಿಭಾಗದ ಪೊಲೀಸ್ ಉಪ ಆಯುಕ್ತ ಅಕ್ಷಯ್ ಹಕೆ ಸ್ಥಳಕ್ಕೆ ಆಗಮಿಸಿ, ರಕ್ಷಣಾ ತಂಡವು ನೆರೆಯ ಕಟ್ಟಡದ ಜನರಿಗೆ ಅವಶೇಷಗಳನ್ನು ತೆರವುಗೊಳಿಸುವವರೆಗೆ ದೂರವಿರಲು ಸೂಚಿಸಿದೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com